ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಾಹಣಾ ಕಾಮಗಾರಿ ಕೈಗೊಳ್ಳಬೇಕಿದೆ. ಆದ್ದರಿಂದ ಈ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗಗಳಲ್ಲಿ ಮೇ, 14 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಈ ಹಿನ್ನೆಲೆ ಮಡಿಕೇರಿ ನಗರ, ರಾಜಸೀಟ್, ಗದ್ದಿಗೆ, ಕೋಟೆ, ಕುಂಡಾಮೇಸ್ತ್ರಿ, ಓಂಕಾರೇಶ್ವರ, ಜಿ.ಟಿ ರಸ್ತೆ, ಕೆಎಸ್ಆರ್ಟಿಸಿ, ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ಮನೆ, ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಪೊನ್ನಂಪೇಟೆ 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್5 ಪಾಲಿಬೆಟ್ಟ ಫೀಡರ್ನಲ್ಲಿ ಮೇ, 14 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಮಾರ್ಗದ ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಚೆನ್ನಂಗಿ, ಹಂಚಿಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸೋಮವಾರಪೇಟೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಐಗೂರು ಫೀಡರ್ನಲ್ಲಿ ಮೇ, 14 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಫೀಡರ್ ನಿರ್ವಾಹಣಾ ಕಾಮಗಾರಿ ನಡೆಸಬೇಕಿದೆ. ಆದ್ದರಿಂದ ಬಜೆಗುಂಡಿ, ಕುಸುಬೂರು, ಕಾರೆಕೊಪ್ಪ, ಬೆಳೂರು, ಸಜ್ಜಳ್ಳಿ, ಐಗೂರು, ಯಡವಾರೆ, ಹೊಸತೋಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.