ವಿರಾಟ್‌ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ

Virat kohli test cricket

Share this post :

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat kohli) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದೆ. ಇಂಗ್ಲೆಂಡ್‌ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇದರ ಬೆನ್ನಲ್ಲೇ ಕೊಹ್ಲಿ ಕೂಡ ಅದೇ ನಿ ನಿರ್ಧಾರ ತೆಗೆದುಕೊಂಡಿದ್ದಾರೆ. 2011 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಕಿಂಗ್ ಕೊಹ್ಲಿ 2019 ರವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 54ರಲ್ಲಿ, 27 ಶತಕಗಳನ್ನು ಗಳಿಸಿದ್ದರು. ಆದರೆ 2020 ರ ನಂತರ ಬ್ಯಾಟಿಂಗ್‌ ನಿಧಾನವಾಯಿತು. ಅಂದಿನಿಂದ ಕೊಹ್ಲಿ ಆಡಿರುವ 39 ಪಂದ್ಯಗಳಲ್ಲಿ 2028 ರನ್ ಗಳಿಸಿ, 3 ಶತಕಗಳನ್ನು ದಾಖಲಿಸಿದ್ದಾರೆ.

ವಿರಾಟ್‌ ಕೊಹ್ಲಿ ಯುವ ಆಟಗಾರರಿಗೆ ಅವಕಾಶ ನೀಡಲು ಬಯಸುತ್ತಿದ್ದಾರೆ. ಜತೆಗೆ ಫಾರ್ಮ್ ಕೂಡ ಇತ್ತೀಚೆಗೆ ಹೆಚ್ಚೇನು ಉತ್ತಮವಾಗಿಲ್ಲ. ಜತೆಗೆ ಮುಂದಿನ ಏಕದಿನ ವಿಶ್ವಕಪ್‌ ಗುರಿಯಾಗಿಸಿಕೊಂಡು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೊಹ್ಲಿ ಬ್ಯಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲ ಸಮಯದಿಂದ ಮಂಕಾಗಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಒಂದೇ ರೀತಿಯಲ್ಲಿ ಪದೇ ಪದೇ ಔಟ್ ಆಗುತ್ತಿದ್ದರು. ಆಫ್ ಸ್ಟಂಪ್‌ನ ಹೊರಗೆ ಹೋಗುವ ಎಸೆತಗಳಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡುತ್ತಿದ್ದರು. ಪರ್ತ್ ಟೆಸ್ಟ್‌ನಲ್ಲಿ ಕೊಹ್ಲಿ 100 ರನ್ ಗಳಿಸಿದ್ದರೂ, ನಂತರ ರನ್ ಗಳಿಸಲು ಪರದಾಡಿದರು.

36 ವರ್ಷದ ವಿರಾಟ್‌ ಕೊಹ್ಲಿ 2027ರ ಏಕದಿನ ವಿಶ್ವಕಪ್ ಆಡಲು ಬಯಿಸಿದ್ದಾರೆ. ಇದಕ್ಕೆ ಫಿಟ್‌ನೆಸ್‌ ಕೂಡ ಅಷ್ಟೇ ಮುಖ್ಯವಾಗಿದ್ದು, ಹೀಗಾಗಿ ಕ್ರಿಕೆಟ್‌ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬಯಸಿದ್ದಾರೆ. ಈಗಾಗಲೇ ಟಿ-20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ಟೆಸ್ಟ್‌ ಮಾದರಿಗೂ ವಿದಾಯ ಘೋಷಿಸಿದ್ದಾರೆ.