Operation Sindoor: ಪಾಕ್​ ಒಳಗೆ ನುಗ್ಗಿ ಹೊಡೆದ ಬಗ್ಗೆ ಪಿನ್‌ ಟು ಪಿನ್ ಡೀಟೇಲ್ಸ್ ಬಿಚ್ಚಿಟ್ಟ ಸೇನೆ

Operation Sindoor

Share this post :

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಹದಿನೈದು ದಿನಗಳ ನಂತರ, ಮಂಗಳವಾರ-ಬುಧವಾರದ ಮಧ್ಯರಾತ್ರಿ ಭಾರತವು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಲು ಸಿದ್ಧ ಎಂಬುದನ್ನು ಭಾರತೀಯ ಸೇನೆ ನಿರೂಪಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಶಿಬಿರಗಳ ವಿರುದ್ಧ ‘ಆಪರೇಷನ್ ಸಿಂಧೂರ್’ (Operation Sindoor) ಅಡಿಯಲ್ಲಿ ನಿಖರವಾದ ದಾಳಿ ನಡೆಸಿದೆ.

ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಹಂಚಿಕೊಂಡ ಮಾಹಿತಿ ಪ್ರಕಾರ, ಈ ಕಾರ್ಯಚರಣೆ ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಯಿತು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಗುರಿಗಳನ್ನು ಗುರುತಿಸಲಾಯಿತು ಮತ್ತು ನಾವು ಅವುಗಳನ್ನು ನಾಶಪಡಿಸಿದ್ದೇವೆ. ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು ಎಂದು ನಡೆಸಲಾಯಿತು ಎಂದು ಹೇಳಿದರು.

ಸೋಫಿಯಾ ಖುರೇಷಿ ಮಾತನಾಡಿದ್ದು, ಭಾರತವು ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಿಲ್ಲ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ದಾಳಿ ನಡೆಯಿತು. ನಾವು ಲಷ್ಕರ್ ಮತ್ತು ಜೈಶ್ ತರಬೇತಿ ಕೇಂದ್ರಗಳನ್ನು ನಾಶಪಡಿಸಿದ್ದೇವೆ. ನಾವು 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದೇವೆ ಎಂದು ಹೇಳಿದರು.

ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಅಮಾಯಕರು ಕೊಲ್ಲಲ್ಪಟ್ಟರು ಎಂದ ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತದೆ ಎಂದರು. ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದರು.

ಇನ್ನು ಭಾರತವು 7 ರಾಜ್ಯಗಳ 11 ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನ ಗಡಿಯ ಪಕ್ಕದಲ್ಲಿರುವ ಶ್ರೀನಗರ, ಜಮ್ಮು, ಶ್ರೀನಗರ, ಲೇಹ್, ಚಂಡೀಗಢ, ಬಿಕಾನೇರ್, ಜೋಧ್‌ಪುರ, ರಾಜ್‌ಕೋಟ್, ಧರ್ಮಶಾಲಾ, ಅಮೃತಸರ, ಭುಜ್ ಮತ್ತು ಜಾಮ್‌ನಗರದ ವಿಮಾನ ನಿಲ್ದಾಣಗಳು ಸ್ಥಗಿತಗೊಳಿಸಲಾಗಿದೆ.