ಪತ್ರಕರ್ತರ ಕ್ರಿಕೆಟ್: ಕೊಡಗು ಅರೇಬಿಕಾ–ಮಂಡ್ಯ ಜಂಟಿ ಚಾಂಪಿಯನ್ – ಬಾಗಲಕೋಟೆ ತೃತೀಯ – ಚಿಕ್ಕಬಳ್ಳಾಪುರ ಚತುರ್ಥ

ಮಡಿಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿಯನ್ನು ಹಂಚಿಕೊಂಡವು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಸಂಜೆ ಸುರಿದ ಭಾರಿ ಮಳೆ ಆಟಕ್ಕೆ ಅಡ್ಡಿಯುಂಟುಮಾಡಿತು. ಪ್ಲೇ ಆಫ್ ಪಂದ್ಯಗಳನ್ನು ನಡೆಸುವುದು ಕಷ್ಟಸಾಧ್ಯವಾಯಿತು. ಇದರೊಂದಿಗೆ ಕತ್ತಲು ಆವರಿಸಿ ಪ್ರತಿಕೂಲ […]