ಚಲಿಸುವ ಬಸ್ಸಲ್ಲೇ ಗರ್ಭಿಣಿಗೆ ಹೆರಿಗೆ ನೋವು: ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದ ಸಿಬ್ಬಂದಿಗೆ ಗೌರವ

ಮಡಿಕೇರಿಯಿಂದ ಗೋಣಿಕೊಪ್ಪಕ್ಕೆ ತೆರಳುತ್ತಿದ್ದ ‘ರಾಣಿ’ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಸ್ಸಾಂ ಮೂಲದ ಗರ್ಭಿಣಿ ಮಹಿಳೆಗೆ ಮಾರ್ಗಮಧ್ಯೆ ದಿಢೀರನೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಮಡಿಕೇರಿ ಟೋಲ್ಗೇಟ್ನಲ್ಲಿ ಬಸ್ ಹತ್ತಿದ್ದ ಆಕೆಯ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಬಸ್ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಶನ್, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಆಕೆಗೆ ಬಸ್ಸಿನಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿ ನೆರವಾದರು. ಯಾವುದೇ ಸಮಯ ವ್ಯರ್ಥ ಮಾಡದೆ ಅಪಾರ ಸಮಯಪ್ರಜ್ಞೆ ಮೆರೆದ ಸಿಬ್ಬಂದಿ, ಪ್ರಯಾಣಿಕರಿದ್ದ ಬಸ್ಸನ್ನು ನೇರವಾಗಿ ವಿರಾಜಪೇಟೆಯ ಸರಕಾರಿ ಸಾರ್ವಜನಿಕ […]