ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026ಕ್ಕೆ ಅರ್ಜಿ ಆಹ್ವಾನ

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ (ಕೆ.ಎಂ.ಇ.ಎಫ್.) ಸಹಯೋಗದಲ್ಲಿ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗಾಗಿ ನೀಡುವ ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026ರ ವಿವಿಧ ವಿಭಾಗಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.75%ಕ್ಕಿಂತ ಮೇಲ್ಪಟ್ಟ ಅಂಕಗಳೊಂದಿಗೆ ಉತ್ತೀರ್ಣರಾಗಿ ಇದೀಗ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೆ.ಎಂ.ಎ. ಸದಸ್ಯರ ಮಕ್ಕಳು “ಕೆ.ಎಂ.ಎ. ಶೈಕ್ಷಣಿಕ ಪುರಸ್ಕಾರ-2026″ಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 2024-25ನೇ ಸಾಲಿನಲ್ಲಿ ಪದವೀಧರಾಗಿರುವ ಕೆ.ಎಂ.ಎ. ಸದಸ್ಯರ ಅರ್ಹ […]