ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ – ಹಲವು ಕಾರ್ಯಕ್ರಮಗಳ ಆಕರ್ಷಣೆ

ಮಡಿಕೇರಿ : ಕತ್ತಲೆಕಾಡು-ಜೇನುಕೊಲ್ಲಿ ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ವಿನಾಯಕ ಭಕ್ತ ವೃಂದ ಸಹಯೋಗದಲ್ಲಿ 20ನೇ ವರ್ಷದ ಸಂಭ್ರಮದ ಗೌರಿ ಗಣೇಶೋತ್ಸವ ಕಾರ್ಯಕ್ರಮ ಸೆಪ್ಟೆಂಬರ್‌ 14ರಿಂದ 18ರವರೆಗೆ ನಡೆಯಲಿದೆ. 14ರಂದು ಬೆಳಗ್ಗೆ 5 ಗಂಟೆಗೆ ಟ್ರಸ್ಟ್‌ನ ಆವರಣದಲ್ಲಿ ಗಣಹೋಮ, ಬಳಿಕ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಬೆಳಗ್ಗೆ 9:00 ಗಂಟೆಗೆ ಭಾರತ್ ಮಾತಾ ಪೂಜೆ, 10 ಗಂಟೆಗೆ ಸಭಾ ಕಾರ್ಯಕ್ರಮ, ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, 11 ಗಂಟೆಗೆ ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ […]

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ದೇವಾಂಕ್ ಎಂಟರ್ಪ್ರೈಸಸ್ ಹಾಗೂ ದೇವಾಂಕ್ ಪ್ರಾವಿಷನ್ ಸ್ಟೋರ್ ನ ಮಾಲೀಕರಾದ ಗಣೇಶ್ ರವರು ರೈನ್ ಕೋಟ್ ಗಳನ್ನು ವಿತರಿಸಿದರು. ಮಳೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಎದುರಾಗುವ ತೊಂದರೆಗಳನ್ನು ಮನಗಂಡು ಗಣೇಶ್ ರವರು ಸುಮಾರು ಹದಿನೈದು ಸಾವಿರ ವೆಚ್ಚದಷ್ಟು 25 ರೈನ್ ಕೋಟ್‌ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ಮುಖ್ಯೋಪಾಧ್ಯಾಯರಾದ ಕಮಲಮ್ಮ ಕೆ ಎನ್, ಸಹ […]