ಯೋಗಾಸನದಲ್ಲಿ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ ಮದೆನಾಡಿನ ಬಿ.ಕೆ. ಸಿಂಚನಾ

ಮಡಿಕೇರಿ : ಯೋಗಾಸನದಲ್ಲಿ ಕೊಡಗಿನ ಸಿಂಚನಾ ಹೊಸದಾಗಿ ಮೂರು ವಿಶ್ವ ದಾಖಲೆ ಮಾಡಿದ್ದಾಳೆ. ಮದೆನಾಡಿನ ಬಿಜಿಎಸ್‌ ಶಾಲೆಯ ಆವರಣ ನೂತನ ದಾಖಲೆಗೆ ಸಾಕ್ಷಿಯಾಯಿತು. ಯೋಗಾಸನದಲ್ಲಿ ಈಗಾಗಲೆ 07 ವಿಶ್ವ ದಾಖಲೆ ಮಾಡಿದ್ದ ಸಿಂಚನಾ, ಮಂಗಳವಾರ ಮೂರು ಹೊಸ ದಾಖಲೆ ಸೃಷ್ಟಿಸುವ ಮೂಲಕ 10 ಜಾಗತಿಕ ದಾಖಲೆಯಲ್ಲಿ ತನ್ನ ಹೆಸರು ನಮೂದಿಸಿದ್ದಾರೆ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗಾಗಿ ಶಾಲೆಯಲ್ಲಿ ವೇದಿಕೆ ಸಿದ್ಧವಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಮ್ಮುಖದಲ್ಲಿ, ಹಲವು ಗಣ್ಯರ ಉಪಸ್ಥಿತಿಯಲ್ಲಿ ಸಿಂಚನಾ ಹೊಸ […]

ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಗಿನ್ನಿಸ್‌ ವಿಶ್ವ ದಾಖಲೆಗೆ ಸಜ್ಜಾದ ಮದೆನಾಡಿನ ಸಿಂಚನಾ..!

Sinchana in the Dimbasana yoga pose

ಮಡಿಕೇರಿ : ಕೊಡಗು ಪತ್ರಕರ್ತರ ಸಂಘ(ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಕೊಡಗಿನ ಯುವ ಯೋಗಪಟು ಮದೆನಾಡಿನ ಸಿಂಚನಾಳ (Sinchana) ಯೋಗ ಪ್ರದರ್ಶನವನ್ನು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು (International yoga day ) ಮಡಿಕೇರಿಯಲ್ಲಿ ಆಯೋಜಿತವಾಗಿದೆ. ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಜೂನ್ 21 ರಂದು ಶನಿವಾರ ಸಂಜೆ 6.30 ಗಂಟೆಗೆ ಸಿಂಚನಾಳ ಯೋಗಪ್ರದರ್ಶನವಿರಲಿದೆ.30 ನಿಮಿಷ 5 ಸೆಕೆಂಡ್ ಕಾಲ ಸಿಂಚನಾ ಡಿಂಬಾಸನ ಯೋಗ ಭಂಗಿಯಲ್ಲಿರುವ […]