ಕೊಡಗು ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರಗೆ ʼಆನರ್‌ ಆಫ್‌ ಅಶೋಕʼ ಪ್ರಶಸ್ತಿ

ಕುಶಾಲನಗರ : ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರರವರಿಗೆ ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ “ಆನರ್ ಆಫ್ ಅಶೋಕ ಪ್ರಶಸ್ತಿ 2025” ನೀಡಿ ಗೌರವಿಸಲಾಗಿದೆ. ನ್ಯಾಯಾಂಗ, ಪೊಲೀಸ್, ಸಾರ್ವಜನಿಕ-ಶೈಕ್ಷಣಿಕ ಆಡಳಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಶ್ಲಾಘನೀಯ ಶ್ರೇಷ್ಠತೆಯನ್ನು ಪ್ರದರ್ಶಿಸಿದ ನೈಪುಣ್ಯ ಅಧಿಕಾರಿಗಳು, ಸೈನಿಕರು, ಆಡಳಿತಗಾರರು ಮತ್ತು ಶಿಕ್ಷಣ ತಜ್ಞರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಅಶೋಕ ಸಂಗಪ್ಪ ಆಲೂರ ಈ ಬಾರಿ ಭಾಜನರಾಗಿದ್ದಾರೆ. ಮಾಜಿ […]