ಸ್ನಾತಕೋತ್ತರ ಪದವಿಯಲ್ಲಿ ಅಜ್ಜಮಾಡ ಯಾನ ಬೋಪಣ್ಣಗೆ ಬೆಳ್ಳಿ ಪದಕ

ಸಾವಯವ ರಸಾಯನಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ (M.Sc. Organic Chemistry) ಅತ್ಯುನ್ನತ ಸಾಧನೆ ತೋರಿದ ಕೊಡಗಿನ ಪ್ರತಿಭೆ ಅಜ್ಜಮಾಡ ಯಾನ ಬೋಪಣ್ಣ ಅವರಿಗೆ ಬೆಳ್ಳಿ ಪದಕ (Silver Medal) ಲಭಿಸಿದೆ. ಬೆಂಗಳೂರಿನ ಪ್ರತಿಷ್ಠಿತ ಸಂತ ಜೋಸೆಫ್ ವಿಶ್ವವಿದ್ಯಾಲಯದಲ್ಲಿ (St. Joseph’s University) ಉನ್ನತ ವ್ಯಾಸಂಗ ಪೂರ್ಣಗೊಳಿಸಿದ ಯಾನ ಬೋಪಣ್ಣ ಅವರು, ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಪದಕವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ […]