ಪೊಲೀಸ್ ಅಧಿಕಾರಿ, ಲೇಖಕ ಎಂ.ಎ. ಮಹಮ್ಮದ್‌ಗೆ ‘ಆದರ್ಶ ಆರಕ್ಷಕ ಸೇವಾ ಪ್ರಶಸ್ತಿ’ ಗರಿ

ಪೊನ್ನಂಪೇಟೆ: ಕರ್ತವ್ಯನಿಷ್ಠೆ ಮತ್ತು ಜನಸ್ನೇಹಿ ಆಡಳಿತದ ಮೂಲಕ ಗುರುತಿಸಿಕೊಂಡಿರುವ ಮೂಲತಃ ಕೊಡಗಿನ ಕೊಳಕೇರಿ ಗ್ರಾಮದ ಪೊಲೀಸ್ ಅಧಿಕಾರಿ ಮೀನಕ್ಕೆರ ಎ. ಮಹಮ್ಮದ್ (ಎಂ.ಎ. ಮಹಮ್ಮದ್) ಅವರಿಗೆ ಪ್ರತಿಷ್ಠಿತ ‘ಆದರ್ಶ ಆರಕ್ಷಕ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಪೊಲೀಸ್ ಕಲಾಸಂಗಮದ ವತಿಯಿಂದ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ಸೇವೆ ಸಲ್ಲಿಸಿದ ಅತ್ಯುತ್ತಮ ಅಧಿಕಾರಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎಂ.ಎ. ಮಹಮ್ಮದ್ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ […]