ನಾಳೆ(ಸೆ.18) ಕೊಡಗು ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ..!

ಮಡಿಕೇರಿ : ೬೬/೧೧ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್೬ ಭಾಗಮಂಡಲ ಫೀಡರ್‌ನಲ್ಲಿ ಸೆಪ್ಟೆಂಬರ್ ೧೮ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ತಲಕಾವೇರಿ ಜಾತ್ರೆ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ತಾಳತ್ಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಂಜಿನಿಯರ್ ಕೋರಿದ್ದಾರೆ.
ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸಲು ಸೆ.೧೧ ಮತ್ತು ೧೨ ರಂದು ವಿವಿಧೆಡೆ ಜನ ಸಂಪರ್ಕ ಸಭೆ

ಮಡಿಕೇರಿ : ಗೋಣಿಕೊಪ್ಪ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಿಸಲು ಸಭೆಯು ಸೆಪ್ಟೆಂಬರ್ ೧೧ ರಂದು ಬೆಳಗ್ಗೆ ೧೧.೩೦ ಗಂಟೆಯಿಂದ ೧೨.೩೦ ಗಂಟೆವರೆಗೆ ಗೋಣಿಕೊಪ್ಪ ಉಪವಿಭಾಗ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿರಾಜಪೇಟೆ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆ ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ೦೨.೩೦ ಗಂಟೆಯಿಂದ ೦೩.೩೦ ಗಂಟೆವರೆಗೆ ವಿರಾಜಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸೋಮವಾರಪೇಟೆ […]
ಸೆ.09ರಂದು ಕೊಡಗಿನ ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ..!

ಮಡಿಕೇರಿ : ಮೂರ್ನಾಡು ೩೩/೧೧ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್3 ಮೂರ್ನಾಡು, ಎಫ್2 ನಾಪೋಕ್ಲು ಹಾಗೂ ಹೊದ್ದೂರು ಫೀಡರ್‌ನಲ್ಲಿ ಸೆಪ್ಟೆಂಬರ್ ೦೯ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ನಡೆಸಬೇಕಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಮೂರ್ನಾಡು ಟೌನ್ ಮುತ್ತಾರ್‌ಮುಡಿ, ಕಿಗ್ಗಾಲು, ಕುಂಬಳದಾಳು, ಹೊದ್ದೂರು, ಕಬಡಗೇರಿ, ಕಕ್ಕಬ್ಬೆ, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಪೇರೂರು, ನಾಪೋಕ್ಲು ಟೌನ್ ಕೊಟ್ಟಮುಡಿ, ಪಾಲೂರು, ಚೆರಿಯಪರಂಬು, ಹಳೆತಾಲ್ಲೂಕು ಹಾಗೂ […]