ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್ ಪದವಿ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅರ್ಪಿತಾ ಜಿ. ಎ. ಮಂಡಿಸಿದ್ದ ಮಹಾಪ್ರಬಂಧವನ್ನು ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೈನ್ಸಸ್ ವಿಭಾಗದಲ್ಲಿ ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಇವರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾರವಾರದ ಇ ಅಂಡ್ ಸಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಎ. ಎಲ್. ಚೂಡಾರತ್ನಾಕರ ಮಾರ್ಗದರ್ಶನದಲ್ಲಿ “Landslide Susceptibility Mapping for Kodagu Region using Machine Learning Techniques” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಕೈಗೊಂಡು ಮಹಾಪ್ರಬಂಧವನ್ನು ವಿಟಿಯುಗೆ ಸಾಧರಪಡಿಸಿದ್ದಾರೆ. […]