20 ವರ್ಷ ಕಳೆದರೂ ಇನ್ನೋವಾ ಕಾರಿಗೆ ಏಕಿಷ್ಟು ಡಿಮ್ಯಾಂಡ್ ಗೊತ್ತಾ?

ಭಾರತದಲ್ಲಿ ಟೊಯೊಟಾ ಇನ್ನೋವಾ (Toyota Innova) ಬಿಡುಗಡೆಯಾಗಿ 20 ವರ್ಷಗಳನ್ನು ಪೂರ್ಣಗೊಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಇನ್ನೋವಾ ಕಾರು ಲಕ್ಷಾಂತರ ಭಾರತೀಯ ಕುಟುಂಬಗಳು ಮತ್ತು ವ್ಯವಹಾರಗಳಿಗೆ ವಿಶ್ವಾಸಾರ್ಹ ಒಡನಾಡಿಯಾಗಿ ಬೆಳೆದಿದೆ. ಇನ್ನೋವಾ, ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಎಂಬ ಮೂರು ಕಾರುಗಳು ಒಟ್ಟಾರೆಯಾಗಿ ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿದ್ದು, ಬ್ರ್ಯಾಂಡ್ ಅಚಲ ಗ್ರಾಹಕ ನಂಬಿಕೆ ಮತ್ತು ಶಾಶ್ವತ ಮೌಲ್ಯದ ಸಂಕೇತವಾಗಿದೆ ಎಂದು ಟೊಯೋಟಾ ಹೆಮ್ಮೆ ವ್ಯಕ್ತಪಡಿಸಿದೆ. 2016 ರಲ್ಲಿ ಟೊಯೊಟಾ […]
ಯುವಜನತೆಗೆ ಸುವರ್ಣವಕಾಶ: ರೆಗ್ಯುಲರ್ ಕೋರ್ಸ್ ಬ್ಯಾಚ್‌ನ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದ ಟೊಯೋಟಾ

ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣಕ್ಕೆ ಬದ್ಧವಾಗಿರುವ ಟೊಯೋಟಾ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ತನ್ನ 2025-2028ನೇ ಸಾಲಿನ ಟಿಟಿಟಿಐ ರೆಗ್ಯುಲರ್ ಕೋರ್ಸ್ ಬ್ಯಾಚ್ ನ ಪ್ರವೇಶ ಪ್ರಕ್ರಿಯೆಯನ್ನು ಇಂದು ಪ್ರಾರಂಭಿಸಿದೆ. ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಪ್ರಾಯೋಜಿತ ಈ ಕೋರ್ಸು ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಯುವ ಸಮೂಹಕ್ಕೆ ಶೈಕ್ಷಣಿಕ ತರಬೇತಿ, ಉದ್ಯಮಕ್ಕೆ ಸಂಬಂಧಿತ ತರಬೇತಿ ಒದಗಿಸಿ ಅವರನ್ನು ಜಾಗತಿಕ ಮಟ್ಟದ ಅತ್ಯುತ್ತಮ ತಂತ್ರಜ್ಞರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ. 2007ರಲ್ಲಿ ಸ್ಥಾಪನೆಯಾದ ಟಿಟಿಟಿಐ ಭಾರತದಲ್ಲಿ ವೃತ್ತಿಪರ […]
ಭಾರತದಾದ್ಯಂತ ರಸ್ತೆ ಸುರಕ್ಷತೆ ಸಾಧಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದ ಟೊಯೋಟಾ

ಬೆಂಗಳೂರು: ಸುರಕ್ಷಿತ ಮತ್ತು ಜವಾಬ್ದಾರಿಯುತ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿರುವ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಭಾರತದಾದ್ಯಂತ ತನ್ನ ವಿಶಿಷ್ಟ ಯೋಜನೆಗಳ ಮೂಲಕ ರಸ್ತೆ ಸುರಕ್ಷತೆ ಸಾಧಿಸುವ ತನ್ನ ದೀರ್ಘಕಾಲೀನ ಬದ್ಧತೆಯನ್ನು ಪುನರುಚ್ಛರಿಸಿದೆ. ಜಾಗೃತಿ, ಶಿಕ್ಷಣ ಮತ್ತು ಹೊಸತನವನ್ನು ಒಳಗೊಂಡ ಟಿಕೆಎಂನ ಸಮಗ್ರ ರಸ್ತೆ ಸುರಕ್ಷತಾ ಯೋಜನೆಗಳು ಭಾರತದ 10 ಲಕ್ಷಕ್ಕೂ ಹೆಚ್ಚು ಜನರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಬೀರಿರುವುದು ಗಮನಾರ್ಹವಾಗಿದೆ. ಟೊಯೋಟಾದ ರಸ್ತೆ ಸುರಕ್ಷತಾ ಯೋಜನೆಗಳಲ್ಲಿ ಟಿಎಸ್ಇಪಿ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಯೋಜನೆಯನ್ನು […]
ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡ ಟೊಯೋಟಾ

ಬೆಂಗಳೂರು: ಈಶಾನ್ಯ ಭಾರತದಲ್ಲಿ ಸಮಗ್ರ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇದೀಗ ಆ ರಾಜ್ಯದಲ್ಲಿನ ಸಮಗ್ರ ಸಮುದಾಯ ಅಭಿವೃದ್ಧಿಗೆ ಮಿಜೋರಾಂ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಮಿಜೋರಾಂನ ಐಜಾಲ್ ನಲ್ಲಿ ಎಂಓಯು ವಿನಿಮಯ ಸಮಾರಂಭವು ನಡೆದಿದ್ದು, ಇದು ಸಮುದಾಯ ಕೇಂದ್ರಿತ ಸಿಎಸ್ಆರ್ ಯೋಜನೆಗಳ ಮೂಲಕ ಈ ಪ್ರದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಟಿಕೆಎಂನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಟಿಕೆಎಂ […]