Power Cut: ನಾಳೆ ಕೊಡಗಿನ ಈ ಭಾಗದಲ್ಲಿ ಕರೆಂಟ್ ಇರಲ್ಲ!

ಆಲೂರು ಸಿದ್ದಾಪುರ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಪ್3 ಮಾಲಂಬಿ ಫೀಡರ್‍ನಲ್ಲಿ ಮೇ, 13 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಫೀಡರ್ ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ಕೂಡುರಸ್ತೆ, ಮಾಲಂಬಿ, ಹೊಸಗುತ್ತಿ, ಕಣಿವೆ, ಬಸವನಹಳ್ಳಿ, ಸಂತೆ ಬಸವನಹಳ್ಳಿ, ಸೀಗೆಮರೂರು, ಬಡುವನಹಳ್ಳಿ, ಕೈಸರಳ್ಳಿ, ಹೊನ್ನೆಕೊಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಗುಂಡೇಟಿಗೆ ವ್ಯಕ್ತಿ ಬಲಿ

ವ್ಯಕ್ತಿಯೊಬ್ಬರು ಗುಂಡೇಟಿಗೆ ಬಲಿಯಾದ ಘಟನೆ ಕೊಡಗಿನ (kodagu) ಸಿದ್ದಾಪುರ ಸಮೀಪದ ಅಭ್ಯತ್ ಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಕೊಳಂಬೆ ವಿನು ಬೆಳ್ಯಪ್ಪ ಎಂಬುವವರೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು ಅವರು ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಹಿಂಬದಿಯಿಂದ ಗುಂಡು ಹಾರಿಸಿರುವ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ಆಸ್ತಿ ವೈಶಮ್ಯ ಘಟನೆಗೆ ಕಾರಣ ಎಂದು […]
ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

66/33/11ಕೆ.ವಿ ವಿ.ವಿ ಕೇಂದ್ರ ವಿರಾಜಪೇಟೆಯಿಂದ ಹೊರಹೊಮ್ಮುವ 33/11ಕೆ.ವಿ ಸಿದ್ದಾಪುರ ಮಾರ್ಗದಲ್ಲಿ ಮಾರ್ಗದ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ 33/11ಕೆ.ವಿ ಸಿದ್ದಾಪುರ (siddapura) ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಸಿದ್ದಾಪುರ, ನೆಲ್ಲಿಹುದಿಕೇರಿ, ಮೇಕೂರು, ಇಂಜಿಲಗೆರೆ, ಗುಹ್ಯ, ಮಾಲ್ದಾರೆ ಫೀಡರ್‍ನಲ್ಲಿ ಏಪ್ರಿಲ್, 29 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಉಂಟಾಗಲಿದೆ. ಆದ್ದರಿಂದ ಸಿದ್ದಾಪುರ, ಗುಹ್ಯ, ಮಾಲ್ದಾರೆ, ಕರಡಿಗೋಡು, ಇಂಜಿಲಗೆರೆ, ತೂಪನಕೊಲ್ಲಿ, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ […]