ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಎ.ಟಿ.ಮಂಜುನಾಥ್ ಅವರ ಚೊಚ್ಚಲ ಕೃತಿ ಲೋಕಾರ್ಪಣೆ

ಕುಟ್ಟ ಪೊಲೀಸ್ ಠಾಣೆ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ “ಕಾಣದ ಕಾಡಲು” ಲೋಕಾರ್ಪಣೆ ಗೊಂಡಿದೆ. ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಹಾಗೂ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಆವರಣದಲ್ಲಿ ನಡೆದ ದಿ.ಗಂಗಾಧರ್ ಶೆಟ್, ಸುಲೋಚನಾ ದತ್ತಿ ಮತ್ತು ದಿ.ಎನ್ ಮಹಾಬಲೇಶ್ವರ ಭಟ್ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕಾಣದ ಕಾಡಲು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭ ಮಾತನಾಡಿದ ಕೃತಿಯ ಲೇಖಕ ಮಂಜುನಾಥ್, ಕೆಲಸದ […]
ಕುಪ್ಪೋಡಂಡ ಎ. ರಫೀಕ್ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಡ್ತಿ

ಪೊನ್ನಂಪೇಟೆ: ಕೊಡಗು ಮೂಲದ ಕುಪ್ಪೋಡಂಡ ಎ. ರಫೀಕ್ ಅವರು ರಾಜ್ಯ ಪೊಲೀಸ್ ಇಲಾಖೆಯ ಅಧೀನದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಆಗಿ ಮುಂಬಡ್ತಿ ಹೊಂದಿದ್ದಾರೆ. ಇದುವರೆಗೂ ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (ಡಿ.ಎಸ್.ಐ.) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಪ್ಪೋಡಂಡ ಎ. ರಫೀಕ್ ಅವರಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ […]
ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಮಡಿಕೇರಿ:- ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿ.ಪಂ.ಸಿಇಒ ಆನಂದ ಪ್ರಕಾಶ್ ಮೀನಾ ಅವರು ನಗರದ ಡಿ.ಎ.ಆರ್.ಕವಾಯತು ಮೈದಾನದಲ್ಲಿ ಗುರುವಾರ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಪಿ.ದಿನೇಶ್ ಕುಮಾರ್ ಇತರರು ಇದ್ದರು. ನವೆಂಬರ್, 29 ರಂದು ಸಂಜೆ 4 ಗಂಟೆಗೆ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮೈಸೂರು ದಕ್ಷಿಣ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.
ವೀರಾಜಪೇಟೆಯಲ್ಲಿ ಗೋಮಾಂಸ ಮಾರಾಟ – ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು..!

ವೀರಾಜಪೇಟೆ : ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ವಿಜಯ ನಗರ ನಿವಾಸಿಗಳಾದ ಮೊಹಮ್ಮದ್ ಎಂಬವರ ಪುತ್ರ ಎಂ.ಎಂ. ಮುಸ್ತಾಫ(42), ಮೊಹಮ್ಮದ್ ಹುಸೈನ್ ಎಂಬವರ ಪುತ್ರ ಎಂ.ಎಸ್. ತನ್ವಿರ್(41) ಗೋಮಾಂಸ ಮಾರಾಟಕ್ಕೆ ಮುಂದಾಗಿ ಪೊಲೀಸರ ವಶಕ್ಕೆ ಸಿಕ್ಕವರು. ಇಬ್ಬರು ಸೇರಿಕೊಂಡು ವೀರಾಜಪೇಟೆಯ ವಿವಿಧೆಡೆ ಗೋಮಾಂಸ ಮಾರಾಟಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಜೂಜಾಟ – ಪೊಲೀಸರ ದಾಳಿ – ವಶಪಡಿಸಿಕೊಂಡ ಹಣ ಎಷ್ಟು ಗೊತ್ತಾ..!?

ವೀರಾಜಪೇಟೆ : ವಿವಾಹ ಸಮಾರಂಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಜೂಜಿಗೆ ಬಳಸಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮೊಗರಗಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯವಿತ್ತು. ಮಂಟಪದಲ್ಲಿನ ಕೊಠಡಿಯೊಂದರಲ್ಲಿ ಮದುವೆಗೆ ಬಂದಿದ್ದ ಕೆಲವರು ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗಿದ್ದರು. ಮಾಹಿತಿ ಅರಿತ ಪೊಲೀಸರು ಕಲ್ಯಾಣ ಮಂಟಪದ ಕೊಠಡಿಯ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳಿಂದ ಒಟ್ಟು 4,25,545/ ರೂ. ವಶಕ್ಕೆ ಪಡೆದಿದ್ದಾರೆ. ಜೂಜಾಟದಲ್ಲಿ ತೊಡಗಿದ್ದ 8 ಮಂದಿಯ ಮೇಲೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು […]
ಹಾರಂಗಿ ಹಿನ್ನೀರಿನಲ್ಲಿ ದುರಂತ : ಇಂದು ಪತ್ತೆಯಾಯ್ತು ಮತ್ತೋರ್ವ ವಿದ್ಯಾರ್ಥಿಯ ಮೃ*ತದೇಹ..!

ಸುಂಟಿಕೊಪ್ಪ : ಹಾರಂಗಿ ಹಿನ್ನೀರಿನಲ್ಲಿ ಬುಧವಾರ ನಡೆದಿದ್ದ ದುರಂತದಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಈಜರು ತೆರಳಿದ್ದ ಸಂದರ್ಭ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಆ ಪೈಕಿ ಚಂಗಪ್ಪ(17) ಮೃತದೇಹ ನಿನ್ನೆಯೇ ಪತ್ತೆಯಾಗಿತ್ತು. ಮಡಿಕೇರಿ ರಾಜಾಸೀಟ್ ಬಳಿಯ ನಿವಾಸಿ ತರುಣ್ ತಮ್ಮಯ್ಯ (17) ಮೃತದೇಹ ಇಂದು ಪತ್ತೆಯಾಗಿದೆ. ಹೆಬ ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸರು, ದುಬಾರೆ Rafting ತಂಡದವರು ಮೃತದೇಹ ಪತ್ತೆಯಾಗಿ ಕಾರ್ಯಾಚರಣೆ […]
Crime News : ಪತ್ನಿಯನ್ನು ಹೊಡೆದು ಕೊಂದ ಕ್ರೂರಿ ಪತಿ..!

ಸುಂಟಿಕೊಪ್ಪ : ಪತ್ನಿಯನ್ನು ಪತಿ ಹೊಡೆದು ಹತ್ಯೆಗೈದಿರುವ ಘಟನೆ ಕೊಡಗರಹಳ್ಳಿ ಬಳಿಯ ಅಂದಗೋವೆಯಲ್ಲಿ ನಡೆದಿದೆ. ಲತಾ(45) ಪತಿಯಿಂದ ಹತ್ಯೆಯಾದ ಮಹಿಳೆ. ಅಂದಗೋವೆಯ ಎಸ್ಟೇಟ್ ಒಂದರ ಲೈನ್‌ಮನೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಮುತ್ತ(50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಗಂಡ ಹಂಡತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿ ಲತಾ ಮೇಲೆ ಮುತ್ತ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ವಿಚಾರ ತಿಳಿದು ಹೆಚ್ಚುವರಿ […]
ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಬಿದ್ದಿದೆ : ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ. ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಸಂತಾಪ ಸಲ್ಲಿಸಿ ಮಾತನಾಡಿದರು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ ಕೆಲಸ. ಹಾಗೆಯೇ ಮಾದಕ ವಸ್ತು ಹಾವಳಿಗೂ ಬ್ರೇಕ್ […]
ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ವಿಜಯ್ ಕೊನೆಯುಸಿರು..!

ಮಡಿಕೇರಿ : ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನರಾಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್‌ನ DAR ನಲ್ಲಿ ಪೊಲೀಸ್ ಬ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್ ಮೃತ ಸಿಬ್ಬಂದಿ.ಇವರು ಫೊಲೀಸ್ ಮೈತ್ರಿ ಭವನದ ಮೇಲ್ವಿಚಾರಕರಾಗಿಯೂ ಕಾರ್ಯ ನಿರ್ವಹಿ ಚಿರಪರಿಚಿತರಾಗಿದ್ದರು. ಸದಾ ಹಸನ್ಮುಖಿಯಾಗಿದ್ದ ಇವರ ಅಕಾಲಿಕ ನಿಧನ ಇಲಾಖಾ ಸಿಬ್ಬಂದಿ ಹಾಗೂ ಸ್ನೇಹಿತ ಬಳಗಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
ಪೊಲೀಸರ ಭರ್ಜರಿ ಕಾರ್ಯಚರಣೆ : ಜಾನುವರು ಕಳ್ಳರ ಬಂಧನ

ಜೂ.24 ರಂದು ನೋಕ್ಯ ಗ್ರಾಮದ ನಿವಾಸಿ ಆನಂದ ಎ.ಎಸ್ ಅವರ ಎಸ್ಟೇಟ್ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಪಿ.ಪಿ. ಮುತ್ತಣ್ಣ, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡರು ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿಎಸ್ಪಿ, ವಿರಾಜಪೇಟೆ ಉಪವಿಭಾಗ, ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, […]