ಪೊಲೀಸರ ಭರ್ಜರಿ ಕಾರ್ಯಚರಣೆ : ಜಾನುವರು ಕಳ್ಳರ ಬಂಧನ

ಜೂ.24 ರಂದು ನೋಕ್ಯ ಗ್ರಾಮದ ನಿವಾಸಿ ಆನಂದ ಎ.ಎಸ್ ಅವರ ಎಸ್ಟೇಟ್ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಪಿ.ಪಿ. ಮುತ್ತಣ್ಣ, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡರು ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ ಮಹೇಶ್ ಕುಮಾರ್.ಎಸ್, ಡಿಎಸ್ಪಿ, ವಿರಾಜಪೇಟೆ ಉಪವಿಭಾಗ, ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, […]
ಕೊಡಗು ಎಸ್‌ಪಿ ಸೇರಿ ಮೂವರು ಪೊಲೀಸರಿಗೆ ‘ಡಿಜಿ – ಐಜಿಪಿ ಪ್ರಶಂಸಾ ಪದಕ’

ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ 2024-25ನೇ ಸಾಲಿನ ಪ್ರಶಸ್ತಿಗೆ ಕೊಡಗಿನ (Kodagu) ಪೊಲೀಸ್ ವರಿಷ್ಟಾದಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮುದ್ದು ಮಹದೇವ, ವಿಶೇಷ ಮಕ್ಕಳ ಘಟಕಲ್ಯಾಣಾಧಿಕಾರಿ ಮತ್ತು ಹೆಡ್ ಕಾನ್ಸಟೇಬಲ್, ಸುಮತಿ ಅವರು ಭಾಜನರಾಗಿದ್ದಾರೆ. ಅತ್ಯುತ್ತಮ ಕರ್ತವ್ಯ ನಿವ೯ಹಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಂದ ನೀಡಲ್ಪಡುವ ಪ್ರಶಸ್ತಿ ಇದಾಗಿದೆ. ಈ ಪದಕವನ್ನು ಮೇ 21ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.
ಸಂಪತ್ ಕೊಲೆ ಪ್ರಕರಣ: ಆರೋಪಿಗಳ ಬಂಧನ… ಕೊಲೆಗೆ ಕಾರಾಣವೇನು?

ಸಂಪತ್ (Sampath) ಅಲಿಯಾಸ್ ಶಂಭು ಅವರ ಮೃತದೇಹ ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ಆರೋಪಿಗಳ ಸೆರೆಗೆ ಪೊಲೀಸರು (Police) 2 ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸುತ್ತಿದ್ದರು. ಎಂಟು ದಿನಗಳಿಂದ ಆರೋಪಿಗಳ ಹಿಂದೆ ಬಿದ್ದಿದ್ದ ಕೊಡಗು ಜಿಲ್ಲಾ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಗಣಪತಿ ( ಗಣಪ) ಹಾಗೂ ಕಿರಣ್. ಕಿರಣ್ ಖಾಕಿ ಬಲೆಗೆ ಬಿದ್ದಿದ್ದ, ಆದರೆ ಗಣಪತಿ ತಲೆ ಮೆರೆಸಿಕೊಂಡಿದ್ದ. ಶನಿವಾರ ಬೆಳ್ತಂಗಡಿ ಬಳಿಯಲ್ಲಿ ಪೋಲಿಸರು ಆರೋಪಿ […]
Fact check: ಕೊಡಗಿನಲ್ಲಿ ಸಿಎಂ ಕಾರಿನ ಮೇಲೆ ಮೊಟ್ಟೆ ಎಸೆದವನು ಈತ ಅಲ್ಲ: ಶಂಭು ಕೊಲೆ ಸೆರೆಗಾಗಿ ಪೊಲೀಸರಿಂದ 2 ತಂಡ ರಚನೆ

2022ರಲ್ಲಿ ಸಿಎಂ ಸಿದ್ದರಾಮಯ್ಯ ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಕಾರಿನ ಮೇಲೆ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು. ಈ ಪ್ರಕರಣದ ಆರೋಪಿಯ ಶವ ಹಾಸನದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದ್ರೆ ಈ ವರದಿ ತಪ್ಪಾಗಿದ್ದು, ಈ ಸಂಪತ್ (Sampath) ಬೇರೆ. ಅದ್ರೆ ಒಂದೆ ಹೆಸರು ಆಗಿರುವುದರಿಂದ ಗೊಂದಲ ಉಂಟಾಗಿದ್ದು ಎನ್ನಲಾಗಿದೆ. ಸಂಪತ್ ಅಲಿಯಾಸ್ ಶಂಭು ಅವರ ಮೃತದೇಹ ಕೆಲ ದಿನಗಳ ಹಿಂದೆ ಪತ್ತೆಯಾಗಿದೆ. ಈ ಪ್ರಕರಣದ ಬಗ್ಗೆ ಆರೋಪಿಗಳ ಸೆರೆಗೆ ತೀವ್ರ […]
ಒಡಿಶಾ ಮೂಲದ ವ್ಯಕ್ತಿಯಿಂದ ಗಾಂಜಾ ಮಾರಾಟ ಯತ್ನ: ಪೊಲೀಸರ ವಶಕ್ಕೆ

ಒಡಿಶಾ ಮೂಲದ ವ್ಯಕ್ತಿಯೋರ್ವ ತನ್ನೂರಿನಿಂದ ಗಾಂಜಾವನ್ನು ತಂದು ಪೊನ್ನಂಪೇಟೆ (Ponnampet) ತಾಲೂಕು ಕಾನೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊನ್ನಂಪೇಟೆ ಪೊಲೀಸರು ಹೆಣೆದ ಬಲೆಗೆ ಬಿದ್ದಿದ್ದಾನೆ. ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರೊಬ್ಬರ ಬಳಿ ರಿಂಗ್ ಕೆಲಸ ನಿರ್ವಹಿಸುತ್ತಿದ್ದ, ಮೂಲತಃ ಒಡಿಶಾ ರಾಜ್ಯದ ಸಿರಿಂಗಿಂ ಗ್ರಾಮದ ಸಂಜಯ್ ನಾಯಕ್ ಎಂಬಾತ ಬಂಧಿತ ಆರೋಪಿಯಾಗಿದ್ದು ಈತನಿಂದ 3 ಕೆ.ಜಿ. 250 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಈತ ಪ್ರತಿ ವರ್ಷ 3 – 4 ಬಾರಿ ತನ್ನ ಊರಿಗೆ ತೆರಳಿ ಅಲ್ಲಿಂದ […]
ಕೊಡಗು ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ

ಕೊಡಗು ಪೊಲೀಸ್ ಇಲಾಖೆಯ ಶ್ವಾನ ಪೃಥ್ವಿ (Prithvi) ಹೃದಯಾಘಾತದಿಂದ ಮೃತಪಟ್ಟಿದೆ. 6 ತಿಂಗಳು ಬೆಂಗಳೂರಿನಲ್ಲಿ ತರಬೇತಿ ಪಡೆದ ಪೃಥ್ವಿ ತದನಂತರ ಕೊಡಗು ಜಿಲ್ಲೆಗೆ ನಿಯೋಜನೆಗೊಂಡಿದ್ದು, ಸುಮಾರು 500ಕ್ಕೂ ಹೆಚ್ಚು ವಿಐಪಿ/ ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿತ್ತು. ಗೋವಾ ಮತ್ತು ಪಾಂಡಿಚೇರಿಗಳಲ್ಲಿ ಪ್ರಧಾನ ಮಂತ್ರಿ ಕರ್ತವ್ಯ ನಿಮಿತ ಭಾಗಿಯಾಗಿದೆ. ದಕ್ಷಿಣ ವಲಯ ಮತ್ತು ಪೊಲೀಸ್ ಕರ್ತವ್ಯ ಕೋಟಗಳಲ್ಲಿ ಪದಕ ಗಳಿಸಿದ ಕೀರ್ತಿ ಪೃಥ್ವಿ ಸಲ್ಲುತ್ತದೆ.
ಬೆಂಗಳೂರಿನಲ್ಲಿ ಕೊಡಗಿನ ಪೊಲೀಸ್ ಅಧಿಕಾರಿಯ ಸಾಧನೆ

ಬೆಂಗಳೂರಿನ ಸಿದ್ದಾಪುರ ಪೊಲೀಸ್ (Police) ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಗ್ರಾಮದ ಬಿ.ಟಿ. ಕಿಶೋರ್ ಎಂಬುವವರೇ ಈ ಕಾರ್ಯಾಚರಣೆ ನಡೆಸಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾದವರಾಗಿದ್ದಾರೆ. ಬೆಂಗಳೂರು ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ದಿವಂಗತ ಲೋಕೇಶ್ ಎಂಬುವವರ ಪತ್ನಿ ಮಂಜುಳಾರವರು ದಿನಾಂಕ 24-11-2024 […]
ಮಡಿಕೇರಿಯಲ್ಲಿ ಗಮನ ಸೆಳೆದ ಪೊಲೀಸ್ ರನ್ ಮ್ಯಾರಾಥಾನ್

ಕರ್ನಾಟಕ ರಾಜ್ಯ ಪೊಲೀಸ್ (Police) ಇಲಾಖೆಯ ಫಿಟ್ನೆಸ್ ಫಾರ್ ಅಲ್ (Fitness for all) ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಭಾಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಪೊಲೀಸ್ ರನ್ ಮ್ಯಾರಾಥಾನ್ (Police Run Marathon) ನಡೆಯಿತು. ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು […]
ಪೊಲೀಸ್ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ಮಾ.09 ರಂದು ಮ್ಯಾರಥಾನ್

ಪೊಲೀಸ್ ಇಲಾಖೆ ವತಿಯಿಂದ ‘ಫಿಟ್‍ನೆಸ್ ಫಾರ್ ಆಲ್’ ಎಂಬ ಧ್ಯೇಯದೊಂದಿಗೆ ಸಮಾಜದ ಆರೋಗ್ಯ ಕಾಪಾಡುವ ಸಂದೇಶದೊಂದಿಗೆ ಹಾಗೂ ಮಾದಕ ಮುಕ್ತ ಕರ್ನಾಟಕ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಕರ್ನಾಟಕ ರಾಜ್ಯ ಪೊಲೀಸ್’ ಇಲಾಖಾ ವತಿಯಿಂದ ಮಾರ್ಚ್ 9 ರಂದು ಮ್ಯಾರಥಾನ್ (Marathon) ಓಟ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಕೇಂದ್ರಸ್ಥಾನದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಾರ್ಚ್ 9 ರಂದು ಬೆಳಗ್ಗೆ 8 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಪ್ರಾರಂಭಿಸಿ ನಗರದ […]
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಾಳಿಬೀಡಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ಆರೋಪಿ ಓರ್ವನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬೆಟ್ಟತ್ತೂರು ನಿವಾಸಿ ಜಿ.ಆರ್. ಕಿರಣ್ ಕುಮಾರ್ (35) ಎಂಬಾತ ಬಂಧಿಸಲ್ಪಟ್ಟಿರುವ ಆರೋಪಿಯಾಗಿದ್ದಾನೆ. ಆರೋಪಿ ದಿನಾಂಕ 28-02-2025 ರಂದು ಗಾಳಿಬೀಡು ಗ್ರಾಮದ ಗಣಪತಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸರಬರಾಜು ಮಾಡಲು ಯತ್ನಿಸುತ್ತಿದ್ದುದರ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 43 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡು […]