ವಿರಾಜಪೇಟೆ ಕಾವೇರಿ ಕಾಲೇಜು ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

ಆಧುನಿಕ ಜೀವನ ಶೈಲಿಯಿಂದ ಕೃಷಿ ಭೂಮಿಯಿಂದ ದೂರ ಉಳಿದ ಯುವ ಜನತೆ ಒಂದು ದಿನವಾದರೂ ಕೃಷಿ ಭೂಮಿಯ ಸಂಪರ್ಕಕ್ಕೆ ಬಂದು ರೈತಾಪಿ ಬದುಕಿನ ಅನುಭವ ಪಡೆಯಬೇಕು ಎಂದು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಅಭಿಪ್ರಾಯ ಪಟ್ಟರು. ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಟ್ಟಂಗಾಲದ ನಿವೃತ್ತ ಪೋಲಿಸ್ ಉನ್ನತಾಧಿಕಾರಿ.ಬಿ.ಡಿ.ಮಂದಪ್ಪ ರವರ ಗದ್ದೆಗಳಲ್ಲಿ ಬುಧವಾರ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ವರ್ಷದಲ್ಲಿ ಯುವಜನತೆ ಕೃಷಿ ಭೂಮಿಯಿಂದ ದೂರ ಸರೆಯುತಿದ್ದು, […]
ಕಾವೇರಿ ಕಾಲೇಜಿನ ದೈಹಿಕ ನಿರ್ದೇಶಕ ತಮ್ಮಯ್ಯಗೆ ಅಧ್ಯಾಪಕ ಭೂಷಣ ಪ್ರಶಸ್ತಿ

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಬೇಗೂರು ಕೆಚೆಟ್ಟಿರ .ಎಸ್. ತಮ್ಮಯ್ಯನವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ(ರಿ) ಮಂಗಳೂರು ವಿಭಾಗ ವತಿಯಿಂದ ನೀಡಲಾಗುವ ಅಧ್ಯಾಪಕ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ ಮೂಡಬಿದಿರೆ ಆಳ್ವಾಸ್ ಕ್ಯಾಂಪನ್ ನಲ್ಲಿ ನಡೆದ ಪ್ರೇರಣ ದಿವಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ ಚಂದ್ ಗೊಹ್ಲೋಟ್ ರವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಕ್ರೀಡಾ ವಿಭಾಗದಲ್ಲಿ ಇವರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು ಮಾಡಿದ ಸಾಧನೆಯ ಹಿನ್ನಲೆ ಅತ್ಯುತ್ತಮ ದೈಹಿಕ ನಿರ್ದೇಶಕ ಎಂಬ ನೆಲೆಯಲ್ಲಿ […]
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಅಣಬೆ ಬೇಸಾಯದ ಕುರಿತು ಕಾರ್ಯಗಾರ

ವಿರಾಜಪೇಟೆ ಕಾವೇರಿ ಕಾಲೇಜು (Cauvery College) ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಅಣಬೆ (Mushroom) ಬೇಸಾಯದ ಕುರಿತ ಪ್ರಯೋಗಾತ್ಮಕವಾದ ಕಾರ್ಯಗಾರವು (Workshop) ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಮಂಗಳವಾರ ನಡೆಯಿತು . ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಬಡತನದಲ್ಲಿ ಹುಟ್ಟೋದು ನಮ್ಮ ತಪ್ಪಲ್ಲ ಆದರೆ ಬಡವರಾಗಿ ಸಾಯುವುದು ನಮ್ಮ ತಪ್ಪು. ಪ್ರತಿಯೊಬ್ಬ ಮನುಷ್ಯ ಸಾಧಿಸುವ ಚಲವಿದ್ದರೆ ಹಲವಾರು ಅವಕಾಶಗಳಿವೆ . ಆರ್ಥಿಕ […]
ರಾಜ್ಯಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ ಕಾವೇರಿ ಕಾಲೇಜು

ಮೈಸೂರು ಸೇಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿರಾಜಪೇಟೆಯ ಕಾವೇರಿ ಪದವಿ ಹಾಗೂ ಪದವಿ ಪೂರ್ವ ಪೈನಲ್ ಪಂದ್ಯ ಆಡುದರ ಮೂಲಕ ಒಂದೇ ವಿದ್ಯಾಸಂಸ್ಥೆಯ ಎ ಹಾಗೂ ಬಿ ತಂಡಗಳು ಪೈನಲ್ ಹಣಾಹಣಿಯಲ್ಲಿ ಆಡಿದ ಇತಿಹಾಸ ಸೃಷ್ಟಿ ಮಾಡಿದೆ. ಒಟ್ಟು 16 ತಂಡಗಳು ಭಾಗವಹಿಸಿದ್ದ ರಾಜ್ಯ ಮಟ್ಟದ 5ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕಾವೇರಿ ಪದವಿ ಕಾಲೇಜು (Cauvery College) 4 -1 ಗೋಲುಗಳ ಅಂತರದಲ್ಲಿ ವಿರಾಜಪೇಟೆ […]
ಕಾವೇರಿ ಕಾಲೇಜಿನಲ್ಲಿ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರ ಸಮಾರೋಪ

ವಿರಾಜಪೇಟೆ ಕಾವೇರಿ ಕಾಲೇಜು, ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಗುರುವಿರ ನಡೆದ ಹಾಕಿ ತೀರ್ಪುಗಾರರ ಕಾರ್ಯಗಾರದ (Hockey Referee Workshop) ಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಮವಾರಪೇಟೆ ತಾಲೂಕು ಕೊಡವ ಹಾಕಿ ((Hockey) ಮಿಯ ಕಾರ್ಯನಿರತ ಉಪಾಧ್ಯಕ್ಷರಾದ ಕುಕ್ಕೆರ ಜಯ ಚಿನ್ನಪ್ಪ ಮಾತನಾಡಿ, ನಮ್ಮ ಕಾಲದ ಹಾಕಿ ಆಟಕ್ಕೂ ,ಈ ಕಾಲದ ಹಾಕಿಯ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿಯ ಕಾರ್ಯಗಾರಗಳು ನಡೆದಂತಹ ಸಂದರ್ಭದಲ್ಲಿ […]
ಕಾವೇರಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಶಿಕ್ಷಣ ಸಚಿವರಿಗೆ ಪೊನ್ನಣ್ಣ ಮನವಿ

1968ರಲ್ಲಿ ಪ್ರಾರಂಭವಾಗಿ ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ವಿರಾಜ್ ಪೇಟೆಯಲ್ಲಿ ಎರಡು ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣ ಸಾಧನೆ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಒಳ್ಳೆಯ ಸ್ಥಾನ ಗುರುತಿಸಿಕೊಂಡಿದೆ. 20 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜುಗಳನ್ನು ಬೇರ್ಪಡಿಸಿದಾಗ ಪಿಯು ಕಾಲೇಜು ಸಿಬ್ಬಂದಿಗಳು ಪೂರ್ಣಪ್ರಮಾಣದಲ್ಲಿ ಅನುದಾನಕ್ಕೆ ಒಳಪಡಬೇಕಾಗಿತ್ತು. ಆದರೆ ಆಗಲಿಲ್ಲ ಹಾಗಾಗಿ ಈ ಎರಡು ಕಾಲೇಜು ಸಂಸ್ಥೆಗಳನ್ನು ವಿಶೇಷ ಪ್ರಕರಣವೆಂದು […]