ಅಮೃತ ಯುವ ಮೊಗೇರ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ ಪಂದ್ಯ

Mogera cricket

ಅಮೃತ ಯುವ ಮೊಗೇರ ಸಿದ್ದಾಪುರ ಅಮ್ಮತಿ ಹೋಬಳಿ ಇವರ ವತಿಯಿಂದ ತೃತೀಯ ಬಾರಿಗೆ ರಾಜ್ಯ ಮಟ್ಟದ ಮೊಗೇರ ಕ್ರಿಕೆಟ್ (Mogera cricket) ಪಂದ್ಯವು ಮೇ 17 ಹಾಗೂ18 ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆಯಲಿದೆ. ಮೊಗೇರ ಬಾಂಧವರಿಗೆ ಮಾತ್ರ ಅವಕಾಶ ಇದ್ದು ಒಟ್ಟು 40 ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಪಂದ್ಯದ ಶುಲ್ಕ 3,000 ನಿಗದಿ ಪಡಿಸಲಾಗಿದ್ದು ಕ್ರೀಡಾ ಕೂಟದ ವಿನ್ನರ್ಸ್ ತಂಡಕ್ಕೆ 33,333 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 22,222 ನಗದು […]

IPL 2025: ಐಪಿಎಲ್ ಟೂರ್ನಿ ರದ್ದು, ಯಾವಾಗ ನಡೆಯಲಿದೆ ದ್ವಿತೀಯಾರ್ಧ?

IPL 2025

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಂಡಿಯನ್‌ ಪ್ರಿಮಿಯರ್‌ ಲೀಗ್‌ (IPL)‌ 2025 ಪಂದ್ಯಾವಳಿಯನ್ನು ಬಿಸಿಸಿಐ ರದ್ದುಗೊಳಿಸಲಾಗಿದೆ. ಆಟಗಾರರು, ಪ್ರಾಂಚೈಸಿ, ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು (ಮೇ 9) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿಮ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಒಟ್ಟು 9 ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ ಮೇಲೆ, ಉಭಯ […]

ನಾಳೆ ಕೊಡಗಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Indira Canteeen

ಕುಶಾಲನಗರ ಪುರಸಭೆ ವ್ಯಾಪ್ತಿಯ KSRTC ಬಸ್ ನಿಲ್ದಾಣದ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‍ನ್ನು (Indira Canteeen) ಮೇ, 10 ರಂದು ಬೆಳಗ್ಗೆ 11.30 ಗಂಟೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್‍ಗೌಡ ಅವರು ಸಾರ್ವಜನಿಕರ ಉಪಯೋಗಕ್ಕೆ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸಮಸ್ತ ನಾಗರಿಕರು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕುಶಾಲನಗರ ಪುರಸಭೆ ಅಧ್ಯಕ್ಷರು ಕೋರಿದ್ದಾರೆ.  

ಕೆ.ಎಂ.ಎ. ವತಿಯಿಂದ ಕುಪ್ಪಂದಿರ ಕೆ.ಯೂಸುಫ್ ಹಾಜಿಗೆ ಬೀಳ್ಕೊಡುಗೆ

KMA

ಪ್ರಪಂಚದಾದ್ಯಂತದ ವೈವಿಧ್ಯಮಯ ಭಾಷೆಗಳ, ವಿವಿಧ ವರ್ಣಗಳ ಮತ್ತು ವಿವಿಧ ಆರ್ಥಿಕ ವರ್ಗಗಳ ಜನರು ಒಟ್ಟು ಸೇರುವ ಪವಿತ್ರ ಹಜ್ ಯಾತ್ರೆಯು ಯಾತ್ರಾರ್ಥಿಗಳಲ್ಲಿ ಏಕತೆ ಮತ್ತು ಸಮಾನತೆಯ ಭಾವನೆ ಮೂಡಿಸುತ್ತದೆ. ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಒಬ್ಬನೇ ಸರ್ವಶಕ್ತನನ್ನು ಆರಾಧಿಸುವ ಈ ಹಜ್ಜ್ ನಿರ್ವಹಣೆ ವಿಶ್ವಾಸಿಗಳ ಜೀವನದ ಬಹುದೊಡ್ಡ ಆಧ್ಯಾತ್ಮಿಕ ಅನುಭವವಾಗಿದೆ. ಆಧ್ಯಾತ್ಮಿಕ ಉತ್ಕರ್ಷ, ಸಮಾನತೆ, ಸಹೋದರತೆಗಳನ್ನು ಬೆಳೆಸಿ ಮುಂದಿನ ಕೆಡುಕು ರಹಿತ ಬದುಕು ಮತ್ತು ಆತ್ಮ ಪರಿಶುದ್ಧತೆಯನ್ನು ಏಕೀಕರಿಸುವುದರಲ್ಲಿ ಹಜ್ಜ್ ಬಹು ದೊಡ್ಡ ಪಾತ್ರ ವಹಿಸುತ್ತದೆ […]

ಜಲಜೀವನ್ ಮಿಷನ್ ಯೋಜನೆ ಜೂನ್ ಅಂತ್ಯದೊಳಗೆ ಪ್ರಗತಿ ಸಾಧಿಸಿ: ಯದುವೀರ್

Jaljeevan Mission

ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಸಂಸದರಾದ ಯದುವೀರ್ (Yaduveer) ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಾಕೀತು ಮಾಡಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಇದರ ಗಂಭೀರತೆ ಅರ್ಥ ಮಾಡಿಕೊಂಡು ಬಾಕಿ ಇರುವ ಕಾಮಗಾರಿಯನ್ನು […]

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ: ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?

Rohit Sharma

ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದು ಈಗ ದೀರ್ಘ ಕಾಲದಿಂದ ನಿವೃತ್ತಿ ಬಗ್ಗೆ ಇರುವ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಹಿಟ್‌ ಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದೆ. ಇನ್ನ್ಮುಂದೆ ಏಕದಿನ ಮಾದರಿಯಲ್ಲಿ ಮಾತ್ರ ದೇಶದ ಪರವಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ ಅಬ್ಬರಿಸಲಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಹಿಟ್‌ ಮ್ಯಾನ್‌ […]

ಆಪರೇಷನ್‌ ಸಿಂಧೂರ್‌ ಯಶಸ್ವಿ: ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

Omkareshwar Temple

ಮಡಿಕೇರಿ: 2025 ರ ಏಪ್ರಿಲ್, 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಪ್ರತ್ಯುತ್ತರವಾಗಿ ಮೇ, 7 ರಂದು ಮುಂಜಾನೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ‘ಸಿಂಧೂರ್’ (Operation Sindoor) ಹೆಸರಿನಲ್ಲಿ ಸೇನಾ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಆದ್ದರಿಂದ ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ನಿರ್ದೇಶದಂತೆ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತಾ, […]

Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ…!

Power Cut

ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್‍ನಲ್ಲಿ ಮೇ, 08 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗ್ರತಾ ನಿರ್ವಹಣಾ ಕಾಮಗಾರಿ ನಡೆಸಬೇಕಿರುವುದರಿಂದ, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿ ಬೀದಿ, ಪೆನ್ಸನ್ ಲೇನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಹಳೆ ಪ್ರೈವೆಟ್ ಬಸ್ ಸ್ಟ್ಯಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಕುಶಾಲನಗರ 220/66/11 ಕೆ.ವಿ ಮತ್ತು ಸುಂಟಿಕೊಪ್ಪ […]

ಪಾಕ್ ಮೇಲೆ ಭಾರತದ ‘ಆಪರೇಷನ್ ಸಿಂಧೂರ’ – ಸೈನಿಕರ ಪರಾಕ್ರಮದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ..?

CM Siddaramaiah

ಬೆಂಗಳೂರು : ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಿನ್ನೆ‌ ಮಧ್ಯರಾತ್ರಿ ಭಾರತೀಯ ಸೇನೆ (Indian Army) ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoor) ದಾಳಿಯ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆಯ ಪ್ರಮುಖ ಅಂಶಗಳು ಹೀಗಿವೆ ನೋಡಿ… * ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. * ಸೇನೆ ನಡೆಸಿರುವ ಈ […]

Operation Sindoor: ಪಾಕ್​ ಒಳಗೆ ನುಗ್ಗಿ ಹೊಡೆದ ಬಗ್ಗೆ ಪಿನ್‌ ಟು ಪಿನ್ ಡೀಟೇಲ್ಸ್ ಬಿಚ್ಚಿಟ್ಟ ಸೇನೆ

Operation Sindoor

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಹದಿನೈದು ದಿನಗಳ ನಂತರ, ಮಂಗಳವಾರ-ಬುಧವಾರದ ಮಧ್ಯರಾತ್ರಿ ಭಾರತವು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಲು ಸಿದ್ಧ ಎಂಬುದನ್ನು ಭಾರತೀಯ ಸೇನೆ ನಿರೂಪಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಶಿಬಿರಗಳ ವಿರುದ್ಧ ‘ಆಪರೇಷನ್ ಸಿಂಧೂರ್’ (Operation Sindoor) ಅಡಿಯಲ್ಲಿ ನಿಖರವಾದ ದಾಳಿ ನಡೆಸಿದೆ. ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಹಂಚಿಕೊಂಡ ಮಾಹಿತಿ ಪ್ರಕಾರ, ಈ […]