ನದಿಯಲ್ಲಿ ಸ್ನಾನಕ್ಕೆ ತೆರಳಿದ ಯುವಕರಿಬ್ಬರು ನೀರುಪಾಲು

kaveri river

ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ 8 ಜನ ಯುವಕರ ಪೈಕಿ ಇಬ್ಬರು ನೀರು ಪಾಲಾಗಿರುವ ಘಟನೆ ನಾಪೋಕ್ಲು ಸಮೀಪದ ಎಮ್ಮೆಮಾಡುವಿನ ಕೂರುಳಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಚೇರಂಬಾಣೆ ಮೂಲದ ಗಿರೀಶ್‌ (16) ಮತ್ತು ಅಯ್ಯಪ್ಪ (18) ಎಂಬಿಬ್ಬರು ಯುವಕರು ಕಾವೇರಿ ನದಿಯಲ್ಲಿ (kaveri river) ಈಜಲು ತೆರಳಿ ಜಲ ಸಮಾಧಿ ಆಗಿರುವ ನತದೃಷ್ಟ ರಾಗಿದ್ದಾರೆ. ಇವರ ಪೈಕಿ ಓರ್ವನ ಮೃತದೇಹ ದೊರಕಿದೆ, ಇನ್ನೊರ್ವನ ಮೃತದೇಹದ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳಕ್ಕೆ ನಾಪೋಕ್ಲು ಪಿ.ಎಸ್.ಐ ಮಂಜುನಾಥ್‌ ಹಾಗೂ ಸಿಬ್ಬಂದಿಗಳು […]

ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಹೆಚ್. ಕೆ. ಸಣ್ಣಯ್ಯ ನಿಧನ

Sannaiah

ದಲಿತ ಸಂಘರ್ಷ ಸಮಿತಿಯ ವೀರಾಜಪೇಟೆ ತಾಲೂಕಿನಲ್ಲಿ ದಲಿತ ಸಂಘರ್ಷ ಸಮಿತಿಯನ್ನೂ ಹುಟ್ಟು ಹಾಕಿದ ಹಿರಿಯ ಹೋರಾಟಗಾರ ಹಾಗೂ ವಿರಾಜಪೇಟೆಯ ಅಂಬೇಡ್ಕರ್ ಭವನಕ್ಕೆ ಮುಖ್ಯ ಕಾರಣ ಕರ್ತರಾದ, ಹೆಚ್. ಕೆ. ಸಣ್ಣಯ್ಯ (H. K. Sannaiah) ನಿಧನರಾಗಿದ್ದಾರೆ. ಇವರ ಅಂತಿಮ ಸಂಸ್ಕಾರ ವು ನಾಳೆ ಅವರ ಸ್ವಗ್ರಾಮ ಆದ ಹಾಸನ ಜಿಲ್ಲೆಯ ಬೆಳವಾಡಿಯಲ್ಲಿ ನಡೆಯಲಿದ್ದು ಇಂದು ಬೆಂಗಳೂರಿನಿಂದ ಹೊರಟು ಅವರ ವೀರಾಜಪೇಟೆಯ ರಾಮನಗರದ ಸ್ವಂತ ಮನೆಗೆ ಬರಲಿದ್ದು ನಾಳೆ ಬೆಳಿಗ್ಗೆ ಹುಟ್ಟೂರಿಗೆ ಪ್ರಾರ್ಥಿರ್ವ ವನ್ನು ರವಾನಿಸಲಾಗುತ್ತದೆ, ನಾಳೆ ಅಂತ್ಯಕ್ರಿಯೆ […]

ತೆಳುವಾದ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್56 ಬಿಡುಗಡೆ: ಬೆಲೆ ಎಷ್ಟು?

Samsung Galaxy F56 5G

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಇದೀಗ ಎಫ್-ಸೀರೀಸ್‌ನ ಅತಿ ತೆಳುವಾದ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್56 5ಜಿ (Samsung Galaxy F56 5G) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಕೇವಲ 7.2 ಮಿಮೀನಷ್ಟು ತೆಳುವಾಗಿದ್ದು, ಅತ್ಯುತ್ತಮ ಕ್ಯಾಮೆರಾ, 6 ಜನರೇಷನ್ ಆಂಡ್ರಾಯ್ಡ್ ಅಪ್‌ಗ್ರೇಡ್, ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಪ್ರೊಟೆಕ್ಷನ್ ಮತ್ತು ಅತ್ಯಾಧುನಿಕ ಎಐ ಎಡಿಟಿಂಗ್ ಟೂಲ್ ಗಳಂತಹ ವಿಭಾಗ ಶ್ರೇಷ್ಠ ವಿಶಿಷ್ಟ ಫೀಚರ್ ಗಳನ್ನು ಹೊಂದಿದೆ. ಈ ಕುರಿತು […]

ರಾಷ್ಟ್ರಮಟ್ಟದ ಪ್ಯಾರಾ ಟೆನ್ಪಿನ್ ಬೌಲಿಂಗ್ ಕ್ರೀಡಾಕೂಟದಲ್ಲಿ ಕೆ.ಎಂ. ಹಸ್ಸನ್‌ಗೆ ಕಂಚಿನ ಪದಕ

KM Hassan

ಪ್ಯಾರಾ ಟೆನ್ಪಿನ್ ಬೌಲಿಂಗ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ದಿನಾಂಕ 05/05/2025 ರಿಂದ 07/05/2025 ರವರೆಗೆ ಬೆಂಗಳೂರುನಲ್ಲಿ ನಡೆದ 5ನೇ ರಾಷ್ಟ್ರಮಟ್ಟದ ಪ್ಯಾರಾ ಟೆನ್ಪಿನ್ ಬೌಲಿಂಗ್ ಕ್ರೀಡಾಕೂಟದಲ್ಲಿ ಕೊಡಗು (Kodagu) ಜಿಲ್ಲೆಯ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷಚೇತನರಾದ ಕೆ.ಎಂ. ಹಸ್ಸನ್ (Hassan) ಅವರಿಗೆ ಕಂಚಿನ ಪದಕ ದೊರೆತಿದೆ.

ವಿರಾಟ್‌ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ

Virat kohli test cricket

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat kohli) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದೆ. ಇಂಗ್ಲೆಂಡ್‌ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇದರ ಬೆನ್ನಲ್ಲೇ ಕೊಹ್ಲಿ ಕೂಡ ಅದೇ ನಿ ನಿರ್ಧಾರ ತೆಗೆದುಕೊಂಡಿದ್ದಾರೆ. 2011 ರಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಕಿಂಗ್ ಕೊಹ್ಲಿ 2019 ರವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 54ರಲ್ಲಿ, 27 ಶತಕಗಳನ್ನು ಗಳಿಸಿದ್ದರು. ಆದರೆ 2020 ರ ನಂತರ ಬ್ಯಾಟಿಂಗ್‌ ನಿಧಾನವಾಯಿತು. […]

ಮಡಿಕೇರಿ ಭಾಗಮಂಡಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

A. S. Ponnanna

ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ, ತೀರ್ಥಕ್ಷೇತ್ರ ತಲಕಾವೇರಿ-ಭಾಗಮಂಡಲ (Bhagamandala) ಸಂಪರ್ಕಿಸುವ ಮಡಿಕೇರಿ (Madikeri) ಭಾಗಮಂಡಲ ಮುಖ್ಯರಸ್ತೆಯ ಅಪ್ಪಂಗಳ-ಬೆಟ್ಟಗೇರಿ ಭಾಗದಲ್ಲಿ ರಸ್ತೆ ಹದಗೆಟ್ಟಿರುವುದನ್ನು ಮನಗಂಡ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ (A. S. Ponnanna) ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ತಂದು, ಸುಮಾರು ₹4 ಕೋಟಿ ವೆಚ್ಚದಲ್ಲಿ ಅಪ್ಪಂಗಳ ಜಂಕ್ಷನ್ ನಿಂದ ಬೆಟ್ಟಗೇರಿ ತನಕದ ರಸ್ತೆಯ ಪುನರ್ ನಿರ್ಮಾಣ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದರು. ದಿನವೊಂದಕ್ಕೆ ಸಾವಿರಾರು ಭಕ್ತಾದಿಗಳು ಹಾಗೂ […]

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್: ವಿಚಾರಣೆಗೆ ಹಾಜರಾದ ತೆನ್ನಿರ ಮೈನಾ

Thennira Maheena

ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಕೊಡಗು ಮೂಲದ ಬಿಜೆಇಪ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಮುಖಂಡ ತೆನ್ನಿರ ಮೈನಾ (Thennira Maheena) ಕೊನೆಗೂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗಲು ಬೆಂಗಳೂರಿನ ಹೆಣ್ಣೂರು ಪೊಲೀಸರು ನೊಟೀಸ್‌ ನೀಡಿದ್ದರು. ಅದರಂತೆ ಠಾಣೆಯ ಇನ್ಸ್‌ಪೆಕ್ಟರ್ ಎದುರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ಕೊಡಗು ಮೂಲದ ವಿನಯ್ ಸೋಮಯ್ಯ ನವರು ಏಪ್ರಿಲ್ 4 ರಂದು ಮುಂಜಾನೆ ನಾಗವಾರದದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ […]

ಲೋಕ ಕಲ್ಯಾಣಕ್ಕಾಗಿ ಕೊಡಗಿನಲ್ಲಿ ಜಪಯಜ್ಞ – ಸಹಸ್ರ ಮೋದಕಗಳಿಂದ ಮಹಾಗಣಪತಿ ಹೋಮ

ಮಡಿಕೇರಿ : ಜೀವನದಿ ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಮೇ೧೧ ರಿಂದ ಅತಿರುದ್ರ ಜಪಯಜ್ಞ ಆರಂಭಗೊಂಡಿದೆ. ಬೆಳಗ್ಗೆ ೬.೩೦ಕ್ಕೆ ಜಪಯಜ್ಞದೊಂದಿಗೆ ಧಾರ್ಮಿಕ ಕಾರ್ಯ ಆರಂಭವಾಗಿದ್ದು, ಬಳಿಕ ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ. ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯುತ್ತಿದೆ. ಮೇ ೧೧ರಿಂದ ೨೧ರವರೆಗೆ ನಡೆಯುವ ಜಪಯಜ್ಞಕ್ಕೆ ರಾಜ್ಯದೆಲ್ಲೆಡೆಯಿಂದ ೫೦ಕ್ಕೂ ಅಧಿಕ ಋತ್ವಿಜರು ಆಗಮಿಸಲಿದ್ದಾರೆ. ಅವಧೂತರಾದ ಶ್ರೀ ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ […]

ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ಮಹಾಸಭೆ ಮೇ ೧೪ಕ್ಕೆ

ಮಡಿಕೇರಿ : ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ವಾರ್ಷಿಕ ಮಹಾಸಭೆಯು ಮೇ ೧೪ ರಂದು ಮಡಿಕೇರಿಯಲ್ಲಿ(madikeri) ನಡೆಯಲಿದೆ. ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರಸಭಾ ಆವರಣದಲ್ಲಿರುವ ಸಂಘದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ಹಾಜರಾಗುವಂತೆ ಸಂಘದ ಅಧ್ಯಕ್ಷ ಜೆ.ಎ.ಮಹೇಶ್ವರ್ ತಿಳಿಸಿದ್ದಾರೆ.

ಮುಂಗಾರಿಗೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ವಹಿಸಿ: ಜಿಲ್ಲಾಧಿಕಾರಿ

District Collector

ಮುಂಗಾರು ಸಂಬಂಧ ನೋಡಲ್ ಅಧಿಕಾರಿಗಳು ಹಾಗೂ ಎಂಜಿನಿಯರ್‍ಗಳು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು. ಮುಂಗಾರು ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, […]