ಸುಂಟಿಕೊಪ್ಪದಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವರ ತೆರೆ – ಮಾ. 22ರಿಂದ ಹಲವು ಕಾರ್ಯಕ್ರಮ
ಸುಂಟಿಕೊಪ್ಪ : ಇಲ್ಲಿನ ಶ್ರೀ ಚಾಮುಂಡೇಶ್ವರಿ(Chamundeshwari) ಮತ್ತು ಶ್ರೀ ಮುತ್ತಪ್ಪ(Mutthappa) ದೇವಸ್ಥಾನ ಸಮಿತಿಯ ಆಶ್ರಯದಲ್ಲಿ 22-03-2025 ರಿಂದ 24-03-2025ರವರೆಗೆ 57ನೇ ವರ್ಷದ ತೆರೆ ಮಹೋತ್ಸವ ಏರ್ಪಡಿಸಲಾಗಿದೆ. 22-03-2025 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ಗಣಪತಿ ಹವನ, 7.15 ಗಂಟೆಗೆ ಶುದ್ಧಿ ಪುಣ್ಯಾಹ ಪೂಜೆ ನೆರವೇರಲಿದೆ ಮತ್ತು 7.30 ಗಂಟೆಗೆ ಬಾವುಟ ಏರಿಸಲಾಗುವುದು. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, 6 ಗಂಟೆಗೆ ಚಂಡೆ ಮೇಳ ಮತ್ತು ರಾತ್ರಿ 7 ಗಂಟೆಗೆ ಶ್ರೀ […]
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ ನ್ಯಾಯಾಲಯ – ಕೋರ್ಟ್ ವಿಧಿಸಿದ ದಂಡವೆಷ್ಟು ಗೊತ್ತಾ..?
ಕುಶಾಲನಗರ : ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ(Drunk and Drive) ಅಂತ ಸರ್ಕಾರ, ಪೊಲೀಸ್ ಇಲಾಖೆ ಅದೆಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಜಾಗೃತರಾಗುವಂತೆ ಕಾಣುತ್ತಿಲ್ಲ. ಪ್ರತಿ ದಿನ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಇದೀಗ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ(court) ದಂಡ ವಿಧಿಸಿ ಬಿಸಿಮುಟ್ಟಿಸಿದೆ. ದಿನಾಂಕ 18/03/2025 ರಂದು ಕುಶಾಲನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗೇಟ್ ಬಳಿ ತಪಾಸಣೆ ವೇಳೆ ಕಿರಣ್, ಗಣೇಶ್ ಎಚ್.ಆರ್, ಶಂಭು, ಕುಮಾರ, […]
ವಿವಿಧತೆಯಲ್ಲಿ ಏಕತೆ ಘೋಷವಾಕ್ಯದೊಂದಿಗೆ ಶ್ರೀ ಕೋದಂಡ ರಾಮೋತ್ಸವ : ಉತ್ಸವದ ಸಿದ್ಧತೆಯಲ್ಲಿ ಉತ್ಸಾಹಿ ಮಹಿಳಾ ಸಮಿತಿ..!
ಮಡಿಕೇರಿ : ಮಡಿಕೇರಿಯ ಶ್ರೀ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಶ್ರೀ ಕೋದಂಡರಾಮ(kodanda rama) ದೇವಾಲಯದ ರಾಮೋತ್ಸವ ಸಮಿತಿಯ ವತಿಯಿಂದ ಈ ಬಾರಿ ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯದೊಂದಿಗೆ ೩೫ನೇ ವರ್ಷದ ರಾಮನವಮಿಯ ರಾಮೋತ್ಸವ ಹಾಗೂ ದೇವಾಲಯದ ದ್ವಿತೀಯ ವರ್ಷದ ಪ್ರತಿಷ್ಠಾಪನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ಕೋದಂಡ ರಾಮೋತ್ಸವ ಮಹಿಳಾ ಸಮಿತಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ(womens) ಸಮಿತಿಯ ಅಧ್ಯಕ್ಷೆ ಭಾರತಿ ರಮೇಶ್, ಏ.೫ ಮತ್ತು ೬ ರಂದು ನಡೆಯುವ ರಾಮೋತ್ಸವ ಕುರಿತು ಮಾಹಿತಿ ನೀಡಿದರು. ಎಲ್ಲಾ […]
ಕೊಡಗು ಜಮ್ಮಾಮಲೆ ಅಸೋಸಿಯೇಷನ್ ನಿಯೋಗದಿಂದ ಅರಣ್ಯ ಸಚಿವರ ಭೇಟಿ – ಮಲೆ ಹಿಡುವಳಿದಾರರ ಸಮಸ್ಯೆ ಬಗೆಹರಿಕೆಗೆ ಮನವಿ ಸಲ್ಲಿಕೆ…
ಬೆಂಗಳೂರು : ಕೊಡಗು ಜಮ್ಮಾಮಲೆ ಅಸೋಸಿಯೇಷನ್ ನೇತೃತ್ವದ ನಿಯೋಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮೀಸಲು ಅರಣ್ಯದಲ್ಲಿರುವ ಮಲೆ ಹಿಡುವಳಿದಾರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಸಮ್ಮುಖದಲ್ಲಿ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ನಿಯೋಗ ದಶಕಗಳಿಂದ ಈ ಭಾಗದ ಜನರನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆಯಿತು. ಮಾನವ-ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು. ಈ ಸಂಬಂಧ ಕೊಡಗು ಜಮ್ಮಾಮಲೆ […]
ಮಾ.27 ಮತ್ತು 28 ರಂದು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವಕೋಲ
ಮಡಿಕೇರಿ : ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಾ.27 ಮತ್ತು 28 ರಂದು ದೈವಕೋಲ ಜರುಗಲಿದೆ. ಎರಡು ದಿನ ಕಾಲ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಾ.27ರ ರಾತ್ರಿ 7 ಗಂಟೆಯಿಂದ ಮಾ.28ರ ಅಪರಾಹ್ನದವರೆಗೆ ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ, ಕುಟ್ಟಿಶಾಸ್ತಾನ್, ಉಚ್ಚಿಟ್ಟ ವೀರನ್ ಗುಳಿಗನ್, ಭೂತಂ, ಪಾಷಾಣಮೂರ್ತಿ ಮತ್ತು ಅಜ್ಜಪ್ಪ ತೆರೆ ನಡೆಯಲಿದೆ. ಮಾ.28 ರಂದು ರಾತ್ರಿ ಭಕ್ತಾಧಿಗಳಿಗೆ ಅನ್ನದಾನ ನಡೆಯಲಿದ್ದು, ಮಾ.28ರ ಬೆಳಿಗ್ಗೆ 5 ಗಂಟೆಗೆ […]
ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ಫಿಕ್ಸ್ – ಕನ್ನಡ ಪರ ಹೋರಾಟಗಾರರ ಸಭೆಯಲ್ಲಿ ಆದ ತೀರ್ಮಾನವೇನು ಗೊತ್ತಾ..?

ಬೆಂಗಳೂರು : ಎಂಇಎಸ್(mes) ಮತ್ತು ಶಿವಸೇನೆಯನ್ನ(Shivasena) ನಿಷೇಧಿಸುವಂತೆ ಆಗ್ರಹಿಸಿ ಮಾರ್ಚ್ 22 ರಂದು ಕರ್ನಾಟಕ ಬಂದ್ ನಿಶ್ಚಿತ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಬಂದ್ ಸಂಬಂಧ ಇಂದು ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್(Vatal Nagaraj) ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಕರ್ನಾಟಕ ಬಂದ್ ಮಾಡಲಾಗುತ್ತದೆ. ಬೆಳಗ್ಗೆ […]
ನವೋದಯ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಾರ್ಯಾಗಾರ – ಅನಂತಶಯನ, ಜಿ.ವಿ. ರವಿ ಕುಮಾರ್ ಅವರಿಂದ ಮಾರ್ಗದರ್ಶನ

ಮಡಿಕೇರಿ : ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಭವಿಷ್ಯ ರೂಪಿಸಲು ಸರಿಯಾದ ಆಯ್ಕೆ ಮಾಡಿಕೊಳ್ಳಬೇಕೆಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಕರೆ ನೀಡಿದರು. ಮಡಿಕೇರಿಯ ನವೋದಯ ವಿದ್ಯಾಲಯದಲ್ಲಿ(Navodaaya vidyalaya) ನಡೆದ ಪಿಎಂ ಶ್ರೀ ಪತ್ರಿಕೋದ್ಯಮದ(journalism) ಕುರಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಯ ತುಂಬಾ ಅಮೂಲ್ಯವಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಆ ಆಯ್ಕೆ ಬೇರೆಯವರ ಪಾಲಾಗಬಹುದು ಎಂದು ಕಿವಿಮಾತು ಹೇಳಿದರು. ಒಬ್ಬ ಪತ್ರಕರ್ತ(journalist) ಸಮಾಜಕ್ಕೆ ಎಷ್ಟು ಅಗತ್ಯ ಮತ್ತು ಪತ್ರಕರ್ತರ ಜವಾಬ್ದಾರಿಗಳೊಂದಿಗೆ ಸಮಾಜ […]
ಆರೋಗ್ಯ ಇಲಾಖೆ ಚಾಲಕ ಪಿ. ಆನಂದ ನಿಧನ

ಮಡಿಕೇರಿ : ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿದ್ದ ಪಿ. ಆನಂದ(೫೨) ನಿಧನರಾಗಿದ್ದಾರೆ. ಸುಂಟಿಕೊಪ್ಪ(suntikoppa) ಟಿ.ಸಿ.ಎಲ್. ರಸ್ತೆಯ ನಿವಾಸಿ, ವರ್ತಕ ಪಳನಿ ಸ್ವಾಮಿ ಅವರ ಪುತ್ರರಾಗಿರುವ ಆನಂದ ಮಡಿಕೇರಿಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಮಡಿಕೇರಿಯ(madikeri) ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಂತಿಮ ದರ್ಶನಕ್ಕಾಗಿ ಸುಂಟಿಕೊಪ್ಪದ ಸ್ವಗೃಹದಲ್ಲಿ ಇರಿಸಲಾಗಿದ್ದು, ಇಂದು ಸಂಜೆ ಸುಂಟಿಕೊಪ್ಪ ಹಿಂದೂ(hindu) ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
ತಲಕಾವೇರಿಗೆ ಭೇಟಿ ನೀಡಲಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್ – ಕಾರಣ ಏನು ಗೊತ್ತಾ..?

ಮಡಿಕೇರಿ : ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಮಾರ್ಚ್ 21ರಂದು ತಲಕಾವೇರಿಗೆ(thalakaveri) ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ತಲಕಾವೇರಿಗೆ ಆಗಮಿಸಿದ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಭಾಗಮಂಡಲಕ್ಕೆ ಆಗಮಿಸಲಿರುವ ಡಿಕೆಶಿ, ಬಳಿಕ ರಸ್ತೆ ಮಾರ್ಗ ಮೂಲಕ ಜೀವನದಿ ಉಗಮ ಸ್ಥಾನಕ್ಕ ತೆರಳಲಿದ್ದಾರೆ. ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ, ಬಳಿಕ ಬೆಂಗಳೂರಿನಲ್ಲಿ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕಾವೇರಿ ತೀರ್ಥ ಸಂಗ್ರಹಿಸಿ ಬೆಂಗಳೂರಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಅವರಿಗೆ […]
ಸಚಿವರಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಗತಿ ಪರಿಶೀಲನಾ ಸಭೆ – ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಸೆಂಟರ್ ಆರಂಭ..?

ಬೆಂಗಳೂರು : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜಿನ ಪ್ರಗತಿ ಪರಿಶೀಲನಾ ಸಭೆ ಬೆಂಗಳೂರಿನಲ್ಲಿ ನಡೆಯಿತು. ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟಿಲ್ ಕಾಲೇಜಿನ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಕಾಲೇಜಿನಲ್ಲಿ ಖಾಲಿಯಿರುವ ನರ್ಸಿಂಗ್ ಆಫಿಸರ‍್ಸ್ ಮತ್ತು ವೈದ್ಯರ ಹುದ್ದೆಯನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡುವಂತೆ ಸಚಿವರು ಸೂಚಿಸಿದರು. ಕಾರ್ಡಿಯಾಲಜಿ ಕೇಂದ್ರ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ಶಾಸಕ ಡಾ. ಮಂಥರ್ ಗೌಡ ಹಾಗೂ ಅಧೀಕ್ಷಕ […]