ಕಾವೇರಿ ಕಾಲೇಜಿನಲ್ಲಿ ನಡೆದ ಹಾಕಿ ತೀರ್ಪುಗಾರರ ಕಾರ್ಯಾಗಾರ ಸಮಾರೋಪ

ವಿರಾಜಪೇಟೆ ಕಾವೇರಿ ಕಾಲೇಜು, ಕೊಡವ ಹಾಕಿ ಅಕಾಡೆಮಿ ಹಾಗೂ ಹಾಕಿ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಗುರುವಿರ ನಡೆದ ಹಾಕಿ ತೀರ್ಪುಗಾರರ ಕಾರ್ಯಗಾರದ (Hockey Referee Workshop) ಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೋಮವಾರಪೇಟೆ ತಾಲೂಕು ಕೊಡವ ಹಾಕಿ ((Hockey) ಮಿಯ ಕಾರ್ಯನಿರತ ಉಪಾಧ್ಯಕ್ಷರಾದ ಕುಕ್ಕೆರ ಜಯ ಚಿನ್ನಪ್ಪ ಮಾತನಾಡಿ, ನಮ್ಮ ಕಾಲದ ಹಾಕಿ ಆಟಕ್ಕೂ ,ಈ ಕಾಲದ ಹಾಕಿಯ ಆಟಕ್ಕೂ ಬಹಳ ಬದಲಾವಣೆಯಾಗಿದೆ. ಈ ರೀತಿಯ ಕಾರ್ಯಗಾರಗಳು ನಡೆದಂತಹ ಸಂದರ್ಭದಲ್ಲಿ […]
SSLC ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ಖಾಸಗಿ ಬಸ್ ಸೇವೆ

ವಿದ್ಯಾರ್ಥಿಗಳು ಎಸ್.ಎಸ್. ಎಲ್. ಸಿ. ಪರೀಕ್ಷೆ (SSLC Exam) ಮುಗಿಸಿ ಮನೆಗೆ ಹಿಂತಿರುಗಲು ಅನುಕೂಲವಾಗುವ ಸದುದ್ದೇಶದಿಂದ ಖಾಸಗಿ ಬಸ್ ಮಾಲೀಕರೊಬ್ಬರು ತನ್ನ ಒಡೆತನದ ಬಸ್ ಅನ್ನು ಒದಗಿಸುವ ಮೂಲಕ ಪೋಷಕರ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಯಲಕ್ಷ್ಮಿ ಬಸ್ ಮಾಲಿಕರಾದ ಕಾಡೇಮಾಡ ಗೌತಮ್ ಅವರು ತಮ್ಮ ಖಾಸಗಿ ಬಸ್ ಅನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿ ಜನಮೆಚ್ಚುಗೆಗೆ ಪಾತ್ರರಾದವರಾಗಿದ್ದಾರೆ. ಪೊನ್ನಂಪೇಟೆ ತಾಲೂಕು ತಿತಿಮತಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರವಿದ್ದು, ಇಲ್ಲಿ ಪರೀಕ್ಷೆ ಬರೆದ ನಂತರ ಬಾಳೆಲೆ, ಪೊನ್ನಪಸಂತೆ, […]
ಹೋಂ ಸ್ಟೇ ನೋಂದಣಿ ಮಾಡಿಕೊಳ್ಳಲು ಅವಕಾಶ – ತಪ್ಪಿದಲ್ಲಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಡಳಿತ
ಮಡಿಕೇರಿ : ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂ-ಸ್ಟೇಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು […]
ಬಿಳಿಗೇರಿಯಲ್ಲಿ 35ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟ – ಹಲವು ಕ್ರೀಡಾ ಸ್ಪರ್ಧೆ ಆಯೋಜನೆ…
ಮಡಿಕೇರಿ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ ಹಾಗೂ ರ‍್ವತ್ತೋಕ್ಲು, ಬಿಳಿಗೇರಿ ಮತ್ತು ಕುಂಬಳದಾಳು ಪೆರಾತ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ೩೫ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟ ಏ.೬ ರಂದು ಬಿಳಿಗೇರಿ ಗ್ರಾಮದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ಕುರಿತು ಮಾಹಿತಿ ನೀಡಿದ ಪೆರಾತ ಯುವಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ […]
ಸ್ತನ ಹಿಡಿಯುವುದು, ಪೈಜಾಮದ ದಾರ ಎಳೆಯುವುದು ಅತ್ಯಾಚಾರದ ಅಪರಾಧವನ್ನ ಎಂದ ನ್ಯಾಯಾಲಯ..!
ಬೆಂಗಳೂರು : ಸ್ತನಗಳನ್ನು ಹಿಡಿಯುವುದು, ಪೈಜಾಮಾದ ದಾರವನ್ನು ಹಿಡಿದು ಎಳೆಯುವುದು ಮತ್ತು ಓಡಿಹೋಗುವ ಮುನ್ನ ಸಂತ್ರಸ್ತೆಯನ್ನು ಮೋರಿಗೆ ಎಳೆದೊಯ್ಯಲು ಪ್ರಯತ್ನ ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನದ ಅಪರಾಧ ಆಗುವುದಿಲ್ಲವೆಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಆರೋಪಿಗಳಾದ ಪವನ್ ಮತ್ತು ಆಕಾಶ್ ಎನ್ನುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೋ(pocso) ಕಾಯ್ದೆಯ ಸೆಕ್ಷನ್ 18ರ (ಅಪರಾಧ ಎಸಗಲು ಯತ್ನಿಸಿದ್ದಕ್ಕೆ ಶಿಕ್ಷೆ) ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಅವರ ವಿರುದ್ಧದ ಆರೋಪಗಳನ್ನು ಹೈಕೋರ್ಟ್ […]
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜನಪದ ಹಬ್ಬ

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜನಪದ ಹಬ್ಬವನ್ನು (Folklore festival) ಇತ್ತೀಚೆಗೆ ಆಚರಿಸಲಾಯಿತು. ನಗರದ ಹಿರಿಯ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಅವರು ಉದ್ಫಾಟಿಸಿ ಮಾತನಾಡಿ, ಕೊಡಗು ತನ್ನದೇ ಆದ ಜಾನಪದ ಶ್ರೀಮತಿಕೆ ಹೊಂದಿದ್ದು, ತನ್ನದೇ ಆದ ಹೆಸರು ಗಳಿಸಿದೆ. ಕರ್ನಾಟಕದ ಜಾನಪದ ಪರಂಪರೆಯನ್ನು ಕೋಲಾಟ, ಕಂಸಾಳೆ, ಯಕ್ಷಗಾನ, ಡೊಳ್ಳುಕುಣಿತ, ಸುಗ್ಗಿಕುಣಿತ ಮುಂತಾದ ಜಾನಪದ ಕಲ್ಲು, ರಾಗಿಕಲ್ಲು, ರಾಡೆ ಇವೆಲ್ಲ ಮಾಯವಾಗಿದೆ. ಅವುಗಳ ಸ್ಥಾನದಲ್ಲಿ ಆಧುನಿಕ ವಸ್ತುಗಳು ಸ್ಥಾನ ಪಡೆದುಕೊಂಡಿದೆ. ಜನಪದದಲ್ಲಿ ಮನುಷ್ಯ ಪ್ರೀತಿ, ಸಮಾಜದ […]
ಮಡಿಕೇರಿಯಲ್ಲಿ ರಾಮೋತ್ಸವಕ್ಕೆ ತಯಾರಿ – ಕೋದಂಡರಾಮ ದೇವಾಲಯದಲ್ಲಿ ಪೂರ್ವಭಾವಿ ಸಭೆ…
ಮಡಿಕೇರಿ : ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ರಾಮೋತ್ಸವ ಆಡಳಿತ ಮಂಡಳಿ ವತಿಯಿಂದ ಏ.5 ಮತ್ತು 6 ರಂದು ನಡೆಯಲಿರುವ ರಾಮೋತ್ಸವದ ಪೂರ್ವಭಾವಿ ಸಭೆ ದೇವಾಲಯದಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಉಪಸಮಿತಿಗಳ ಪದಾಧಿಕಾರಿಗಳೊಡನೆ ಚರ್ಚಿಸಲಾಯಿತು. ರಾಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ದೇಣಿಗೆ ಸಂಗ್ರಹ, ಅನ್ನದಾನಕ್ಕೆ ದಾನಿಗಳಿಂದ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಲು ತೀರ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಈಗಾಗಲೇ ರಾಮೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಎಲ್ಲಾ ಸಮಿತಿಗಳು […]
GPL- ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಕಲರವ ಏಪ್ರಿಲ್ 20ರಿಂದ – 10 ಫ್ರಾಂಚೈಸಿ ತಂಡಗಳು ಭಾಗಿ
ಮಡಿಕೇರಿ : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏ.೨೦ ರಿಂದ ಮೇ ೪ರವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ “ಜಿಪಿಎಲ್-ಗೌಡ ಪ್ರೀಮಿಯರ್ ಲೀಗ್” ಲೆದರ್ ಬಾಲ್ ಟಿ-೨೦ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಕೊಡಗು ಗೌಡ ಯುವ ವೇದಿಕೆ ಶಿಸ್ತು ಸಮಿತಿ ಅಧ್ಯಕ್ಷ ನವೀನ್ ದೇರಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಗೌಡ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಗೌಡ ಜನಾಂಗ ಬಾಂಧವರಿಗೆ ಕ್ರೀಡಾಕೂಟ ಮತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು […]
ಡೈರೆಕ್ಟರ್ ಕ್ಯಾಪ್ ತೊಟ್ಟ ನಟಿ ಹರ್ಷಿಕಾ ಪೂಣಚ್ಚ – ಚಿ. ಸೌಜನ್ಯ ಪೋಸ್ಟರ್ ಬಿಡುಗಡೆ ಮಾಡಿದ ಕೊಡಗಿನ ಕುವರಿ… ಮೊದಲ ನಿರ್ದೇಶನದಲ್ಲೇ ಸಖತ್ ಸದ್ದು ಮಾಡಿದ ಹರ್ಷಿಕಾ..!
ಮಡಿಕೇರಿ : ರಾಜ್ಯದಲ್ಲಿ ಈಗ ಧರ್ಮಸ್ಥಳದ ಸೌಜನ್ಯ ಪ್ರಕರಣ ಸದ್ದು ಮಾಡುತ್ತಿದೆ. ದೌರ್ಜನ್ಯಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಯುವತಿಗೆ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ. ಈ ನಡುವೆ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ಚಿ. ಸೌಜನ್ಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾಯ್ತನದ ಸಂಭ್ರಮದಲ್ಲಿದ್ದ ಹರ್ಷಿಕಾ ಪೂಣಚ್ಚ ಮತ್ತೆ ಫೀಲ್ಡ್‌ಗೆ ರೀ ಎಂಟ್ರಿಯಾಗಿದ್ದಾರೆ. ಅದು ಕೂಡಾ ಡೈರೆಕ್ಟರ್ ಕ್ಯಾಪ್ ತೊಡುವ ಮೂಲಕ. ಮೊದಲ ಬಾರಿಗೆ ಡೈರೆಕ್ಷನ್‌ಗೆ […]
ಕೋಟಿ ಚೆನ್ನಯ್ಯ ಪ್ರೀಮಿಯರ್ ಲೀಗ್ ಸೀಸನ್ 01 – ಪಂದ್ಯಾವಳಿಯ ಲೋಗೋ ಬಿಡುಗಡೆ…
ಮಡಿಕೇರಿ : ಕುಶಾಲನಗರದ(kushalanagar) ಕೋಟಿ ಚೆನ್ನಯ್ಯ(koti chennaiah) ಬಿಲ್ಲವ ಸಮಾಜ ವತಿಯಿಂದ ಏಪ್ರಿಲ್ ೨೬, ೨೭ರಂದು ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ಬಾಂಧವರ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಆ ಪ್ರಯುಕ್ತ ಪಂದ್ಯಾವಳಿಯ ಲೋಗೋ(Logo) ಬಿಡುಗಡೆ ಕಾರ್ಯಕ್ರಮ ಬೈಚನಹಳ್ಳಿಯ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಬಿ.ಟಿ. ರಮೇಶ್, ಅಧ್ಯಕ್ಷ ಸುಧೀರ್ ಲೋಗೋ ಬಿಡುಗಡೆಗೊಳಿಸಿದರು. ಪಂದ್ಯಾವಳಿ ಯಶಸ್ಸಿಗೆ ಸಮುದಾಯದ ತಂಡಗಳು, ಬಾಂಧವರು ಸಕಲ ರೀತಿಯಲ್ಲಿ ಕೈಜೋಡಿಸುವಂತೆ ಕೋರಿದರು.