ಸೆಸ್ಟೊಬಾಲ್ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕರ್ನಾಟಕಕ್ಕೆ ದ್ವಿತೀಯ ಸ್ಥಾನ, ಕೊಡಗಿನ ನಂದಿನಿ ಸಾಧನೆ

Cestoball National Championship

ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿಯ ಉಡಾನ್ ಗ್ಲೋಬಲ್ ಶಾಲೆಯಲ್ಲಿ ನಡೆದ 7ನೇ ವರ್ಷದ ಸೆಸ್ಟೊಬಾಲ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವು ಅಮೋಘ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಈ ತಂಡದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದ ಪ್ರತಿಭಾನ್ವಿತ ಕ್ರೀಡಾಪಟು ನಂದಿನಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕುಶಾಲನಗರದ ತರಬೇತುದಾರರಾದ ಜಾನ್ಸನ್ ಮತ್ತು ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆದಿದ್ದ ಕರ್ನಾಟಕ ತಂಡವು, ರಾಷ್ಟ್ರಮಟ್ಟದಲ್ಲಿ ಎದುರಾಳಿಗಳನ್ನು ಮಣಿಸಿ […]