ಬಡತನ-ಹಸಿವಿನ ಅರಿವು ಮಕ್ಕಳಿಗಿರಬೇಕು- ಪೂಜಾ ಸಜೇಶ್

ಪೊನ್ನಂಪೇಟೆ: ಬಡತನ ಮತ್ತು ಹಸಿವಿನ ಮಹತ್ವ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತಿಳಿಯುವಂತಾಗಬೇಕು. ಜೊತೆಗೆ ಅನ್ನದ ಬೆಲೆಯನ್ನು (ಮೌಲ್ಯವನ್ನು) ಅರಿತಿರಬೇಕು. ಮಕ್ಕಳಿಗೆ ಬಡತನ ಮತ್ತು ಹಸಿವಿನ ಅರಿವು ಮೂಡಿಸುವುದು ಅವರಲ್ಲಿ ಕೃತಜ್ಞತೆ, ಸಹಾನುಭೂತಿ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸಲು ಪೂರಕವಾಗುತ್ತದೆ ಎಂದು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಹೇಳಿದ್ದಾರೆ. ವಿರಾಜಪೇಟೆಯ ಆರ್ಜಿಯಲ್ಲಿರುವ ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಈದ್ ಮಿಲಾದ್ ಅಂಗವಾಗಿ ಆಹಾರ ಸಾಮಗ್ರಿ ಮತ್ತು ಕ್ರೀಡಾ ಪರಿಕರಗಳನ್ನು ವಿತರಿಸಿದ […]