ಬೇಸಿಗೆಯಲ್ಲಿ ಗಿಡಗಳಿಗೆ ನೀರು ಹಾಕಲು ಯಾವುದು ಬೆಸ್ಟ್ ಟೈಮ್?

ಬೇಸಿಗೆಯ ತೀವ್ರತರವಾದ ಬಿಸಿಲಿನ ತಾಪಕ್ಕೆ ಮನುಷ್ಯರು ಹಾಗೂ ಪ್ರಾಣಿಗಳಂತೆ ಮನೆಯಲ್ಲಿ ಬೆಳೆಸುವ ಮರಗಿಡಗಳು ಸಹ ತೀವ್ರವಾಗಿ ಬಾಡುತ್ತವೆ. ಇಂತಹ ಪ್ರತಿಕೂಲ ಹವಾಮಾನದಲ್ಲಿ ಸಸ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯವಾಗಿರುತ್ತದೆ. ಅತಿಯಾದ ಉಷ್ಣಾಂಶದಿಂದ ಗಿಡಗಳು ಒಣಗುವ ಮತ್ತು ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ, ಸಸ್ಯಗಳ ರಕ್ಷಣೆಗೆ ಸೂಕ್ತ ನಿರ್ವಹಣೆ ಮತ್ತು ಸರಿಯಾದ ಪ್ರಮಾಣದ ನೀರಿನ ಪೂರೈಕೆ ಪ್ರಮುಖ ಪಾತ್ರ ವಹಿಸುತ್ತದೆ. ಬಿಸಿಲಿನ ಝಳಕ್ಕೆ ಸಸಿಗಳು ಒಣಗದಂತೆ ತಡೆಯಲು ಬಹುತೇಕರು ಬೆಳಗ್ಗೆ ಮತ್ತು ಸಂಜೆ ನಿರಂತರವಾಗಿ ನೀರನ್ನು ಹಾಕುತ್ತಾರೆ. […]