ಬಿದ್ದು ಸಿಕ್ಕ ಪರ್ಸ್‌ವೊಂದನ್ನು ಮಾಲಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಶಾಫಿ, ಮುಕ್ರಂ

wallet found in Virajpet city

ವಿರಾಜಪೇಟೆ (virajpet)  ನಗರದ ನಿವಾಸಿಗಳಾದ ಮೊಹಮ್ಮದ್ ಶಾಫಿ ಮತ್ತು ಮುಕ್ರಂ ಅವರು ಮಾನವೀಯತೆಯ ಸ್ಫೂರ್ತಿದಾಯಕ ಉದಾಹರಣೆಯಾಗಿ, ವಿರಾಜಪೇಟೆ ನಗರದಲ್ಲಿ ಬಿದ್ದು ಸಿಕ್ಕಿದ್ದ ಪರ್ಸ್‌ನ್ನು ಅದರೊಳಗಿನ ನಗದು ಹಣ, ಮೊಬೈಲ್ ಫೋನ್ ಹಾಗೂ ಮಹತ್ವದ ಬ್ಯಾಂಕ್ ದಾಖಲೆಗಳೊಂದಿಗೆ ಕೂಡಲೇ ಪೊಲೀಸ್ ಠಾಣೆಗೆ ಹಾಜರುಪಡಿಸಿ, ತಕ್ಷಣವೇ ಪರ್ಸ್ (purse)  ಅನ್ನು ಮಾಲಿಕರಾದ ಬಾಳುಗೋಡು ಗ್ರಾಮದ ಲೀಲಾವತಿ ಅವರಿಗೆ ಹಿಂತಿರುಗಿಸುವ ಮೂಲಕ ತಮ್ಮ ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮಾಜದ ಪರವಾದ ಮಾನವೀಯ ಮೌಲ್ಯಗಳನ್ನು ಮೆರೆದಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮಹತ್ತರ ಬದಲಾವಣೆ – ಎರಡನೇ, ನಾಲ್ಕನೇ ಶನಿವಾರವೂ ಕಚೇರಿಗಳು ಕಾರ್ಯನಿರ್ವಹಣೆ..!

ನವದೆಹಲಿ : ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ಮಾಡಿದೆ. ಅದೇನೆಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೆಲಸದ ಅವಧಿಯಲ್ಲಿನ ಮಾರ್ಪಾಡು. ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ಇದ್ದು, ಈವರೆಗೆ ಅದು ಸುಪ್ರೀ ಕೋರ್ಟ್‌ ಕಚೇರಿ ವ್ಯಾಪ್ತಿಗೂ ಅನ್ವಯವಾಗಿತ್ತು. ಆದರೆ ಈಗ ಆಗಿರುವ ಸುಪ್ರೀಂ ಕೋರ್ಟ್‌ ತಿದ್ದುಪಡಿ ನಿಯಮದ ಪ್ರಕಾರ ಈ ಎರಡು ದಿನಗಳನ್ನು ಕೆಲಸದ ವ್ಯಾಪ್ತಿಗೆ ತರಲಾಗಿದೆ. ಅಂದರೆ ಇನ್ನು ಮುಂದೆ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡಾ […]

ಯೋಗ ಭಾರತಿ ಹಾಗೂ ಯೋಗ ಸಂಧ್ಯಾ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮಡಿಕೇರಿ : ಯೋಗ ಭಾರತಿ ಹಾಗೂ ಯೋಗ ಸಂಧ್ಯಾ ವತಿಯಿಂದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. ೧೧ರಂದು ನಡೆಯಲಿದೆ. ಅಂದು ಬೆಳಗ್ಗೆ 6.30ರಿಂದ 8.30ರವರೆಗೆ ಮಡಿಕೇರಿಯ ಗೌಡ ಸಮಾಜ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸರಳ ಯೋಗ ಮತ್ತು ಪ್ರಾಣಾಯಾಮ ಅಭ್ಯಾಸವನ್ನು ಯೋಗ ಗುರುಗಳು ಮಾಡಿಸಲಿದ್ದಾರೆ. ಈ ಬಾರಿ ʼಒನ್‌ ಅರ್ಥ್‌ ಒನ್‌ ಹೆಲ್ತ್‌ʼ(one earth, one health) ಧ್ಯೇಯದೊಂದಿಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆ ಪ್ರಮುಖರು ಕೋರಿದ್ದಾರೆ. ಯೋಗ […]

ಸೋಮವಾರಪೇಟೆ ತಹಸೀಲ್ದಾರ್‌ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಭೇಟಿ – ಮಳೆಗಾಲದ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಸೂಚನೆ..!

ಸೋಮವಾರಪೇಟೆ : ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ಭೇಟಿ ನೀಡಿ ಭೂಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು. ಭೂ ಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವ ಹಿನ್ನೆಲೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಜಾರಿಗೊಳಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಸಕಾಲ ಯೋಜನೆ, ಪಿಂಚಣಿ ಯೋಜನೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ […]

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಕೊಡಗಿನ ಯುವ ಸಾಹಿತಿ ಮೂಕೊಂಡ ನಿತಿನ್‌ ಕುಶಾಲಪ್ಪ..!

ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ 2025ನೇ ಸಾಲಿನ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಕೊಡಗಿನ ಮೂಕೊಂಡ ನಿತಿನ್‌ ಕುಶಾಲಪ್ಪ ಸೇರಿದಂತೆ ಮೂವರು ಕನ್ನಡಿಗರಿಗೆ ಪ್ರಶಸ್ತಿ ಲಭಿಸಿದೆ. ಮೂಕೊಂಡ ನಿತಿನ್‌ ಅವರ ‘ದಕ್ಷಿಣ್ ಸೌಥ್ ಇಂಡಿಯನ್ ಮಿಥ್ಸ್‌ & ಫೇಬಲ್ಸ್ ರೀಟೋಲ್ಡ್’ ಕಥಾಸಂಕಲನಕ್ಕೆ ‘ಇಂಗ್ಲಿಷ್’ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಯುವ ಪುರಸ್ಕಾರ ಲಭಿಸಿದೆ. ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ […]

ದಶಮಾನೋತ್ಸವ ಸಂಭ್ರಮದಲ್ಲಿ ನ್ಯೂಸ್‌ ಡೆಸ್ಕ್‌ – Coorg Buzz ಬಳಗದಿಂದ ಶುಭ ಹಾರೈಕೆ..!

ಮಡಿಕೇರಿ : ಜಿಲ್ಲೆಯ ಪ್ರಮುಖ ಸುದ್ದಿ ಸಂಸ್ಥೆ ಹಾಗೂ ಡಿಜಿಟಲ್‌ ಸುದ್ದಿ ಮಾಧ್ಯಮ News desk ಹತ್ತನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಹಿರಿಯ ಪತ್ರಕರ್ತ ಎಸ್‌.ಕೆ. ಲಕ್ಷ್ಮೀಶ್‌ ಅವರ ಸಂಪಾದಕತ್ವದಲ್ಲಿ ಆರಂಭವಾಗಿ ಮುನ್ನಡೆಯುತ್ತಿರುವ ಸಂಸ್ಥೆ ಜೂನ್‌ 19, 2025ಕ್ಕೆ ಹತ್ತು ವಸಂತಗಳನ್ನು ಪೂರೈಸಿ ಹನ್ನೊಂದರ ಹರೆಯಕ್ಕೆ ಕಾಲಿಟ್ಟಿದೆ. ಕೊಡಗಿನ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನ್ಯೂಸ್‌ ಡೆಸ್ಕ್‌ನ ದಶ ವಾರ್ಷಿಕೋತ್ಸವ ಶುಭ ಸಂದರ್ಭದಲ್ಲಿ ಮತ್ತಷ್ಟು ಯಶಸ್ಸು, ಕೀರ್ತಿ, ಪ್ರೋತ್ಸಾಹ ಗಳಿಸಲಿ ಎಂದು Coorg Buzz ಬಳಗವು ಪ್ರೀತಿಯಿಂದ ಹಾರೈಸುತ್ತಿದೆ. […]

ದುಬೈ ಕೂರ್ಗ್‌ ಕ್ರಿಕೆಟ್‌ ಫೆಸ್ಟ್‌ ಸೀಸನ್‌ 02 – ತಂಡಗಳ ಖರೀದಿಗೆ ಜು.20ರವರೆಗೆ ಅವಕಾಶ..!

Coorg Buzz Correspondent Dubai : ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ದುಬೈನಲ್ಲಿ ನೆಲೆಸಿರುವ ಕೊಡಗಿನ ಯುವಕರಿಗಾಗಿ ದುಬೈ ಕೂರ್ಗ್‌ ಕ್ರಿಕೆಟ್‌ ಫೆಸ್ಟ್‌ ಸೀಸನ್‌ 02 ಆಯೋಜಿಸಲಾಗಿದೆ. ಕೊಡಗಿನ ಯುವಕರ ತಂಡ ಕಳೆದ ಬಾರಿ ಸೀಸನ್‌ 01 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದೀಗ ಎರಡನೇ ವರ್ಷದ ಟೂರ್ನಿಗಾಗಿ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಬಾರಿ ಹತ್ತು ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಗ್ರೂಪ್‌ಗಳಾಗಿ ಮಾಡಿ ಲೀಗ್‌ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಪಂದ್ಯವು 05 ಓವರ್‌ಗೆ […]

ಮಾಜಿ ಸೈನಿಕ ಗಿರೀಶ್ ನಾಪತ್ತೆ: ಶೋಧ ಕಾರ್ಯ ಚುರುಕು

girish

ಚೆಟ್ಟಳ್ಳಿ ನಿವಾಸಿ ಮಾಜಿ ಸೈನಿಕ ಗಿರೀಶ್ (Girish) (46)ಎಂಬವರು ನಾಪತ್ತೆ. ಗಿರೀಶ್ ಕುಶಾಲನಗರದ (Kushalnagara) ಎಸ್.ಎಲ್.ಎನ್ ಸಂಸ್ಥೆ ಯ ಉದ್ಯೋಗಿ ಇವರ ಬೈಕ್ ಕುಶಾಲನಗರದ ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ತೆಪ್ಪದಕಂಡಿ ಬಳಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದು ಶಂಕೆಯಾಗಿದೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳ, ಎನ್ ಡಿಆರ್ ಎಫ್ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ (investigation) ನಡೆಯುತ್ತಿದೆ.  

ಹೃದಯಾಘಾತ ತಡೆಯಲು ಈ ಆಹಾರಗಳನ್ನು ಸೇವಿಸಿ

heart attack

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ (Heart attack) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿದೆ, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಮಾತ್ರೆಯೊಂದೇ ಪರಿಹಾರವಲ್ಲ.ಇದು ಬಹುಮುಖ್ಯವಾದ ವಿಷಯ. ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿರುವುದು ನಿಜ. ಜೀವನಶೈಲಿ, ಆಹಾರ, ಮಾನಸಿಕ ಒತ್ತಡ ಮತ್ತು ಶಾರೀರಿಕ ಚಟುವಟಿಕೆಗಳ ಕೊರತೆ ಈ ಬೆಳವಣಿಗೆಗೆ ಕಾರಣವಾಗಿವೆ. ಈ ಹೃದಯಾಘಾತವನ್ನು ಆಹಾರದಿಂದಲ್ಲೇ ತಡೆಗಟ್ಟಬಹುದು ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಜಪಾನ್‌ನ 9Japan) ಟೋಕಿಯೊದಲ್ಲಿರುವ ಟೊಹೊ ವಿಶ್ವವಿದ್ಯಾಲಯದ (Toho University)  ಹೊಸ ಸಂಶೋಧನೆಯ ಪ್ರಕಾರ, ಅಕ್ಕಿ, ಕಾಫಿ ಮತ್ತು […]

ಕೊಡಗಿನಲ್ಲಿ ತುರ್ತಾಗಿ BSNL ಸೇವೆ ಸರಿಪಡಿಸಲು ಕೇಂದ್ರ ಸಚಿವರಿಗೆ ಯದುವೀರ್‌‌ ಮನವಿ

BSNL Network

  ಕೊಡಗಿನಲ್ಲಿ ಹೆಚ್ಚಾಗಿರುವ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ( BSNLNetwork) ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಮೈಸೂರು-ಕೊಡಗು ಸಂಸದ ಯದುವೀರ್‌ (Yaduveer) ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಯದುವೀರ್‌, ಕೊಡಗಿನಲ್ಲಿ ಈಗ ಅತ್ಯಂತ ತುರ್ತಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.ಈ ಸಂಬಂಧ ಯದುವೀರ್‌ ಅವರು ಪತ್ರವೊಂದನ್ನು ಸಚಿವರಿಗೆ ನೀಡಿದ್ದಾರೆ ಕೊಡಗಿನಲ್ಲಿ ಇತ್ತೀಚೆಗೆ ಧಾರಾಕಾರ […]