ಕೊಡಗಿನ ಮಾದರಿ ಗ್ರಾಮಕ್ಕೆ ಅಂಡಮಾನ್‌, ನಿಕೋಬಾರ್‌ ದ್ವೀಪದ ಅಧಿಕಾರಿಗಳ ಭೇಟಿ – ಅಭಿವೃದ್ಧಿ ಬಗ್ಗೆ ಅಧ್ಯಯನ..!

ಮೂರ್ನಾಡು : ಒಂದು ಪ್ರದೇಶದ ಅಭಿವೃದ್ಧಿಯ ಅಧ್ಯಯನ ಸಂಬಂಧ ಬೇರೆ ಬೇರೆ ಕಡೆಯ ತಂಡಗಳು ಬಂದು ಪರಿಶೀಲನೆ ಮಾಡುತ್ತವೆ. ಅದೇ ರೀತಿ ಕೊಡಗಿನ ಮಾದರಿ ಗ್ರಾಮ ಪಂಚಾಯಿತಿಯೊಂದಕ್ಕೆ ಅಂಡಮಾನ್‌ ನಿಕೋಬಾರ್‌ ದ್ವೀಪದ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಗೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿದರು.  ಪಂಚಾಯಿತ ವ್ಯಾಪ್ತಿಯ ವಿವಿಧ ರೀತಿಯ ಅಭಿವೃದ್ಧಿ ಬಗ್ಗೆ ಇಲ್ಲಿನ […]

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ – ರೌಡಿಶೀಟರ್‌ ಹಾಕುವ ಬೆದರಿಕೆವೊಡ್ಡಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು..!

ಮಡಿಕೇರಿ : ವಿನಯ್ ಸೋಮಯ್ಯ(vinay somaiah) ಮತ್ತು ವಿಷ್ಣು ನಾಚಪ್ಪ) ವಿರುದ್ಧ ರೌಡಿ ಶೀಟರ್ ಹಾಕುವುದಾಗಿ ಹೇಳಿದ್ದ ಪೊಲೀಸ್ ಸಿಬ್ಬಂದಿ ವಿರುದ್ದ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಯಿತು. ಮೃತ ವಿನಯ್ ಸೋಮಯ್ಯ ಸಹೋದರ ಜೀವನ್ ಮಾಜಿ ಸಂಸದ ಪ್ರತಾಪ್ ಸಿಂಹ(pratap simha), ಮಾಜಿ ಶಾಸಕ ಕೆ.ಜಿ ಬೋಪಯ್ಯ(kg bopaiah), ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಮುಖರಾದ ಭಾರತೀಶ್, ರಾಬಿನ್ ದೇವಯ್ಯ ಹಾಗೂ ಪ್ರಮುಖ ಮುಖಂಡರು ಈ ಸಂದರ್ಭ ಇದ್ದರು.

ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

Athletes

ಪ್ರಸಕ್ತ(2025-26) ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ 8 ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಅವಕಾಶ ವಂಚಿತರಾದ ಪ್ರತಿಭಾನ್ವಿತ ಕ್ರೀಡಾಪಟುಗಳ (athletes) ಆಯ್ಕೆಯನ್ನು ಏಪ್ರಿಲ್, 15 ರಂದು ಹಾಕಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ, ಜಿಮ್ನಾಸ್ಟಿಕ್ಸ್ ತುಮುಕೂರು ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಏಪ್ರಿಲ್, 17 ರಂದು ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ವಾಲಿಬಾಲ್ ಮತ್ತು ಕಬಡ್ಡಿ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ […]

ನೂತನ ಎಎಸ್‌ಪಿಯಾಗಿ ಬಾರಿಕೆ ದಿನೇಶ್ ಕುಮಾರ್ ನೇಮಕ

Barike Dinesh Kumar

ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ (ASP) ಸುಂದರರಾಜ್ ರವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೊಡಗು ಮೂಲದ ಬಾರಿಕೆ ದಿನೇಶ್ ಕುಮಾರ್ (Dinesh Kumar) ನೇಮಕ. 2 ವರ್ಷಗಳ ಹಿಂದೆ ಡಿ ವೈ ಎಸ್ ಪಿ ಆಗಿ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಯುವ ಜನತೆಗೆ ಸಹಕಾರಿ ಕ್ಷೇತ್ರದ ಅರಿವು ಕಾರ್ಯಕ್ರಮ

Cooperative sector awareness

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶ, ಅರ್ಥಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಯುವ ಜನತೆಗೆ ಸಹಕಾರಿ ಕ್ಷೇತ್ರದ ಅರಿವು ಕಾರ್ಯಕ್ರಮವು (program) ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಡಾ.ದಯಾನಂದ.ಕೆ.ಸಿ ಅವರು ಉದ್ಘಾಟಿಸಿದರು. ಕೊಡಗು ಜಿಲ್ಲಾ ಸಹಕಾರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ ರೇಣುಕಾ ಆರ್.ಎಸ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಹಕಾರಿ ಕ್ಷೇತ್ರದ ಮೂಲ ತತ್ವಗಳು, ಸಹಕಾರಿ ಸಂಘಗಳ ಕಾರ್ಯ ಚಟುವಟಿಕೆ, ವಿವಿಧ […]

2nd PUC Result: ನಾಳೆ ದ್ವಿತೀಯ ಪಿಯು ಫಲಿತಾಂಶ: ನೋಡುವುದು ಹೇಗೆ?

2nd PUC Result

ದ್ವಿತೀಯ ಪಿಯು (2nd PUC) ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್. ಮಾರ್ಚ್ 1ರಿಂದ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಅಂದರೆ ಏಪ್ರಿಲ್ 8ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ವೆಬ್​ಸೈಟ್​ನಲ್ಲಿ PUC ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಆನ್​​ಲೈನ್​​ನಲ್ಲಿ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ, ಅಂಕಪಟ್ಟಿ ಡೌನ್​ಲೋಡ್ […]

ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಶ್ರೀರಾಮ ನವಮಿ ಆಚರಣೆ

ಮಡಿಕೇರಿ : ಕತ್ತಲೆಕಾಡು ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ಶ್ರೀ ರಾಮನವಮಿಯನ್ನು ಸಂಭ್ರಮದಿಂದ‌ ಆಚರಿಸಲಾಯಿತು. ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗಿಯಾಗಿದ್ದರು. ಮಹಿಳೆಯರು ಆವರಣದಲ್ಲಿ ದೀಪ ಬೆಳಗಿದರು. ಬಳಿಕ ಶ್ರೀರಾಮನಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು. ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡದ ಸುರೇಶ್ ಮಾವಟ್ಕರ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ‌ ಮಾಡಿದರು. ರಾಮನವಮಿಯನ್ನು ದೇಶದೆಲ್ಲೆಡೆ ಹಿಂದುಗಳು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಮರ್ಯಾದ […]

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಹಾಗೂ ಸಂಬಂಧಿಸಿದ ಕಾಯ್ದೆ ಕಾರ್ಯಾಗಾರ

Karnataka Land Grabbing Prohibition Act

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ (Karnataka Land Grabbing Prohibition Act) ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಇವರ […]

ವಿಶೇಷ ಕಾರ್ಯಕ್ರಮದ ಮೂಲಕ ಅನಾಥ ಹೆಣ್ಣು ಮಕ್ಕಳಿಗೆ ನೆರವು

special program

ಬೆಂಗಳೂರು: ನೆಲೆ ಫೌಂಡೇಶನ್ನಲ್ಲಿ ನೆಲೆಸಿರುವ 50 ಹೆಣ್ಣು ಮಕ್ಕಳಿಗೆ (Girls) ನೆರವಾಗುವ ನಿಟ್ಟಿನಲ್ಲಿ ವಿಜಯನಗರದ ಕಾಸಿಯಾ ಭವನದಲ್ಲಿ ಶೈನಿಂಗ್ ಸ್ಟಾರ್ಸ್ ವಿಶೇಷ ಕಾರ್ಯಕ್ರಮವನ್ನು (program) ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳ ಫ್ಯಾಷನ್ ಶೋ, ತಾಯಿ ಮಗುವಿನ ರ್ಯಾಂಪ್ ವಾಕ್, ಮಹಿಳೆಯರ ವಿಭಿನ್ನ ರೀತಿಯ ಸ್ಯಾರಿ ರ್ಯಾಂಪ್ ವಾಕ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಸಂಗ್ರಹವಾಗುವ ಹಣವನ್ನು ಫೌಂಡೇಶನ್ ಗೆ ನೀಡಲಾಗುತ್ತದೆ. ಅನ್ಷುಲಾ ಲೇಡೀಸ್ ಎಂಟ್ರಿಪ್ರಿನರ್ ಕ್ಲಬ್ ಮತ್ತು ಮಧುರಾ ವುಮೆನ್ಸ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ […]

ಮನೆ ಯಜಮಾನಿಯರ ಗಮನಕ್ಕೆ: ಗೃಹಲಕ್ಷ್ಮೀ ಯೋಜನೆ ಹೊಸ ಅಪ್ಡೇಟ್

Gruha Lakshmi Scheme

ಸೋಮವಾರಪೇಟೆ ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂದಿಸಿದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಗೃಹಲಕ್ಷ್ಮಿ” ಯೋಜನೆಗೆ (Gruha Lakshmi Scheme) ಸಂಬಂಧಿಸಿದ ಸಾರ್ವಜನಿಕ (ಫಲಾನುಭವಿಗಳ)ರ ಮಾಹಿತಿಗಾಗಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ತೋರಿಸುತ್ತಿರುವ ಫಲಾನುಭವಿಗಳು ಹಾಗೂ ಈಗಾಗಲೇ ದಾಖಾಲಾತಿಯನ್ನು ಸಲ್ಲಿಸಿರುವ ಫಲಾನುಭವಿಗಳ ಮಾಹಿತಿಗಾಗಿ ಸರ್ಕಾರದ ಆದಾಯ ತೆರಿಗೆ ಇಲಾಖೆಯಿಂದ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ಫಲಾನುಭವಿಗಳ ದತ್ತಾಂಶದ ಪರಿಶೀಲನೆಯ ಮಾಹಿತಿ ಸ್ವೀಕೃತವಾದ ನಂತರ ಫಲಾನುಭವಿಗಳಿಗೆ ಧನಸಹಾಯ ಪಾವತಿಸುವ ಕುರಿತು […]