ಹಾಸನದಿಂದ ಬೂಕರ್‌ವರೆಗೆ ಬಾನು ಮುಷ್ತಾಕ್‌ ಪಯಣ – Coorg Buzzನಲ್ಲಿ ಪ್ರಸಾರವಾಗಲಿದೆ ಸಾಧಕಿಯ ಸಂದರ್ಶನ..!

ಮಡಿಕೇರಿ : ಸಾಹಿತ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ʼಬೂಕರ್‌ ಪ್ರಶಸ್ತಿʼ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು Coorg Buzz ಸಂದರ್ಶಿಸಿದೆ. ಹಾಸನದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಕೂರ್ಗ್‌ ಬಜ್ಹ್‌ ತಂಡ ಅವರನ್ನು ಅಭಿನಂದಿಸಿತು. ಬಳಿಕ ಬಾನು ಮುಷ್ತಾಕ್‌ ಅವರು ನಮ್ಮ ವಾರದ ವಿಶೇಷ ಪಾಡ್‌ಕಾಸ್ಟ್ ʼin & out’ಗಾಗಿ ವಿಶೇಷ ಸಂದರ್ಶನ ನೀಡಿದರು.‌ ನಿರಂತರ ಪ್ರವಾಸ, ಪ್ರತಿನಿತ್ಯ ಹಲವಾರು ಕಾರ್ಯಕ್ರಮ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಒಂದು ಗಂಟೆ ಕಾಲ ನಮ್ಮ ಮಾತುಕೆಯಲ್ಲಿ ಭಾಗಿಯಾದರು. […]

ಕೊಡಗಿನ ಆದ್ಯ ಸಿಂಗ್‌ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

ವಿರಾಜಪೇಟೆಯ ತೆಲುಗರ ಬೀದಿ ನಿವಾಸಿಗಳಾದ ಅಜಯ್ ಸಿಂಗ್ ಹಾಗು ವಿಭಾ ದಂಪತಿಗಳ ಮಗಳು ಹಾಗೂ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರಾಜಾಸೀಟಿನಲ್ಲಿ ‘ಪುಟಾಣಿ ರೈಲು’ ಆರಂಭಕ್ಕೆ ಕ್ರಮ: ವೆಂಕಟ್ ರಾಜಾ

ಮಡಿಕೇರಿ: ರಾಜಾಸೀಟಿನಲ್ಲಿ ‘ಮಕ್ಕಳ ಪುಟಾಣಿ ರೈಲು’ ಆರಂಭ ಸಂಬಂಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‍ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‍ಗಳು ಮಾಹಿತಿ ಪಡೆದಿದ್ದು, ಈ […]

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮುತ್ತಾರ್ಮುಡಿ ಗದ್ದೆಯಲ್ಲಿ ಬೇಲ್‍ರ ಕೋಯಿಮೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಾಗೂ ಕನೆಕ್ಟಿಂಗ್ ಕೊಡವಾಸ್ ಇವರ ಸಹಯೋಗದಲ್ಲಿ ಮುತ್ತಾರ್ಮುಡಿ ಗದ್ದೆಯಲ್ಲಿ ಬೇಲ್‍ರ ಕೋಯಿಮೆ ಕಾರ್ಯಕ್ರಮವು ಸೋಮವಾರ ನಡೆಯಿತು. ಮೂರ್ನಾಡು ಪಿಯು ಕಾಲೇಜು, ಜ್ಞಾನಜ್ಯೋತಿ ಕಾಲೇಜು, ಕೊಡಗು ವಿದ್ಯಾಲಯ, ಮಾರುತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಬೇಲ್‍ರ ಕೋಯಿಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರು ಮಾತನಾಡಿ ಕೊಡಗು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿದ್ದೇವೆ. ಆ ನಿಟ್ಟಿನಲ್ಲಿ […]

Power Cut: ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ!

Power Cut

ಮಡಿಕೇರಿ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ಜುಲೈ, 15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಸಂಪಿಗೆ ಕಟ್ಟೆ, ಕನ್ನಂಡಬಾಣೆ, ಎ.ವಿ.ಶಾಲೆ, ಗದ್ದಿಗೆ, ಉಕ್ಕುಡ, ಅಜಾದ್‍ನಗರ, ತ್ಯಾಗರಾಜ ಕಾಲೋನಿ, ಅಬ್ಬಿಫಾಲ್ಸ್ ರಸ್ತೆ, ಭಗವತಿ ನಗರ, ಮಲ್ಲಿಕಾರ್ಜುನ ನಗರ, ರಾಣಿಪೇಟೆ, ಮಾರ್ಕೇಟ್ ರಸ್ತೆ, ಮಹದೇವ ಪೇಟೆ, ಕಾನ್ವೆಂಟ್ ಜಂಕ್ಷನ್, ಕೂರ್ಗ್ ಇಂಟರ್ ನ್ಯಾಷನಲ್, ಐಟಿಐ ಕಾಲೇಜು ಹಿಂಭಾಗ, ಕಾವೇರಿ ಲೇಔಟ್, ಟಿ.ಜಾನ್ ಲೇಔಟ್, ಅಬ್ದುಲ್ ಕಲಾಮ್ ಲೇಔಟ್ ಹಾಗೂ […]

ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ LKG-UKG ಪ್ರಾರಂಭೋತ್ಸವ

ಮರಗೋಡು : ಅರೆಕಾಡು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭೋತ್ಸವ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಹಳ್ಳಿಗಳಲ್ಲಿ ಎಲ್‌ಕೆಜಿ ಇಲ್ಲದಿರುವುದರಿಂದ ಇಂಗ್ಲಿಷ್ ಕಲಿಕೆಗಾಗಿ ಪೋಷಕರು ತಮ್ಮ ಮಕ್ಕಳನ್ನು ದೂರದಲ್ಲಿರುವ ಶಾಲೆಗೆ ವಾಹನಗಳಲ್ಲಿ ಮಕ್ಕಳ ದೈಹಿಕ, ಮಾನಸಿಕ ಒತ್ತಡವನ್ನು ಲೆಕ್ಕಿಸದೆ ಕಳುಹಿಸುತ್ತಿದ್ದರು. ಆದರೆ ಇನ್ನು ಮುಂದೆ ಅಂಗನವಾಡಿ ಕೇಂದ್ರದಲ್ಲಿ LKG, UKG ಶಿಕ್ಷಣವನ್ನು ಪಡೆಯಬಹುದು. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಗ್ರಾಮ ಪಂಚಾಯಿತಿಯಿಂದ […]

ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌(ರಿ) ವಿದ್ಯಾರ್ಥಿ ಘಟಕ ಪುನಾರಚನೆ – ಅಧ್ಯಕ್ಷರಾಗಿ ಟಿ.ಕೆ. ಕಿರಣ್‌ ಆಯ್ಕೆ

ಮಡಿಕೇರಿ : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌(ರಿ) ಇದರ ವಿದ್ಯಾರ್ಥಿ ಘಟಕವನ್ನು ಪುನಾರಚಿಸಲಾಗಿದೆ. ನೂತನ ಅಧ್ಯಕ್ಷರಾಗಿ ಟಿ.ಕೆ. ಕಿರಣ್‌, ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಟ್ರಸ್ಟ್‌ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವೈ.ಒ. ಶ್ರಾವ್ಯ, ಸಹಕಾರ್ಯದರ್ಶಿಯಾಗಿ ಬಿ.ಜೆ. ದೀಕ್ಷಾ, ಖಜಾಂಜಿಯಾಗಿ ಪಿ.ವಿ. ನವಿತ್, ಯು.ಯು. ಮೇಘನಾ, ಕ್ರೀಡಾ ಸಂಚಾಲಕರಾಗಿ ಬಿ.ವೈ. ಸುಜನ್, ಲಿಖಿತ ರೈ, ಪೂಜಾ ಕಾರ್ಯಕ್ರಮದ ಉಸ್ತುವಾರಿಗಳಾಗಿ ಟಿ.ಕೆ. ವಿನಯ್, ಕೆ.ಪಿ. ಪ್ರಜಿತ್, ಆರಾಧ್ಯ, ಕಾವ್ಯಶ್ರೀ, ಭಜನೆ ಕಾರ್ಯಕ್ರಮದ ಉಸ್ತುವಾರಿಗಳಾಗಿ ಯಶಸ್ವಿನಿ, […]

ʼಬೆಳ್ಳಿ ಗೆಜ್ಜೆʼ ಕವನ ಸಂಕಲನ ಬಿಡುಗಡೆ ಜುಲೈ 15ಕ್ಕೆ

ಸೋಮವಾರಪೇಟೆ : ಯುವ ಸಾಹಿತಿ ಹೇಮಂತ್‌ ಪಾರೇರ ಬರೆದಿರುವ ʼಬೆಳ್ಳಿ ಗೆಜ್ಜೆʼ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಜು.15ರಂದು ನಡೆಯಲಿದೆ. ಕನ್ನಡಸಿರಿ ಸ್ನೇಹ ಬಳಗ ವತಿಯಿಂದ ಅಂದು ಸಂಜೆ 04 ಗಂಟೆಗೆ ಸೋಮವಾರಪೇಟೆ ಪತ್ರಿಕಾ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.‌ ಲೋಕೇಶ್‌ ಸಾಗರ್‌ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ಸಿದ್ದಲಿಂಗಪುರ ಅರಿಸಿನಗುಪ್ಪೆ ಮಂಜುನಾಥ ದೇವಾಲಯದ ರಾಜೇಶನಾಥ ಗುರೂಜಿ ಉದ್ಘಾಟಿಸಲಿದ್ದಾರೆ. ಕೃತಿ ಪರಿಚಯವನ್ನು ಲೇಖಕಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ […]

ಕಡಗದಾಳು ಅಂಗನವಾಡಿಯಲ್ಲಿ LKG, UKG ಪ್ರಾರಂಭೋತ್ಸವ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ

ಮಡಿಕೇರಿ : ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಪ್ರಾರಂಭೋತ್ಸವ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಐಸಿಡಿಎಸ್ ಸುವರ್ಣ ಮಹೋತ್ಸವದ ಅಂಗವಾಗಿ ಸರ್ಕಾರ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಪ್ರಾರಂಭಿಸುತ್ತಿದ್ದು, ಮಡಿಕೇರಿ ತಾಲೂಕಿನ 10 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಯುಕೆಜಿ ಪ್ರಾರಂಭವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದರು. ಕಡಗದಾಳು ಗ್ರಾಮ ಪಂಚಾಯಿತಿಯಿಂದ 18 ಮಕ್ಕಳಿಗೆ ಸಮವಸ್ತ್ರ, […]

ಕೊಡಗು ಜಿಲ್ಲೆಯ ಮಳೆ ವಿವರ: ಎಲ್ಲಿ ಮಳೆ ತಗ್ಗಿದೆ?

kodagu rain

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 12.76 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.64 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1665.67 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1026.73 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.48 ಮಿ.ಮೀ. ಕಳೆದ ವರ್ಷ ಇದೇ ದಿನ 7.43 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2408.07 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]