ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವು ನಡೆಯಿತು. ಶಾಲಾ (School) ಹಿರಿಯ ಮುಖ್ಯ ಶಿಕ್ಷಕಿ ಹೆಚ್.ಕೆ.ಸುಶೀಲ ಅವರು ಮಾತನಾಡಿ ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯ ಹಾಗೂ ಸರ್ಕಾರದ ವತಿಯಿಂದ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಾಲೆಯಲ್ಲಿನ ಸೌಲಭ್ಯಗಳು ನುರಿತ ಶಿಕ್ಷಕರು, ಸುಸಜ್ಜಿತ ನವೀನ ಕಟ್ಟಡ, ಸುಸಜ್ಜಿತ ಪೀಠೋಪಕರಣಗಳು, ಅನುಭವಾತ್ಮಕ ಕಲಿಕೆ, ವಿಶಾಲವಾದ ಆಟದ ಮೈದಾನ, ಗ್ರಂಥಾಲಯ, ಉತ್ತಮ ವಿಜ್ಞಾನ, ಗಣಿತ, ಸಮಾಜ ಸಮಾಜ ವಿಜ್ಞಾನ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, […]
ಸಿಇಟಿ ಪರೀಕ್ಷೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಇದೇ ಏಪ್ರಿಲ್, 16 ಮತ್ತು 17 ರಂದು ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಿಇಟಿ (CET) ಪರೀಕ್ಷೆ ಸಿದ್ಧತೆ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಇರಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಸ್ವಚ್ಛತೆ, ಶೌಚಾಲಯ ಇರಬೇಕು. ಸಿಇಟಿ ಪರೀಕ್ಷೆ ಸಂಬಂಧ ಸರ್ಕಾರದ […]
ಪತ್ರಕರ್ತರ ಸಂಘದಿಂದ ಏಪ್ರಿಲ್ 11ರಂದು ಸುಂಟಿಕೊಪ್ಪದಲ್ಲಿ ಮಾಧ್ಯಮ ಸಂವಾದ

ಮಡಿಕೇರಿ : ಕೊಡಗು ಪತ್ರಕರ್ತರ ಸಂಘ(ರಿ)ದ ಕುಶಾಲನಗರ ತಾಲೂಕು ಘಟಕದಿಂದ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಏ.೧೧ರ ಶುಕ್ರವಾರ ಬೆಳಗ್ಗೆ ೧೦.೩೦ ಗಂಟೆಗೆ ಸುಂಟಿಕೊಪ್ಪದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಲಿದ್ದಾರೆ. ಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಪ್ರಭಾರ ಉಪ ತಹಶೀಲ್ದಾರ್ ಎನ್.ಆರ್. ಪ್ರಶಾಂತ್, ಸುಂಟಿಕೊಪ್ಪ ಗ್ರಾಮ […]
ಮಡಿಕೇರಿಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ

ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಮತ್ತು ದಲಿತರ ಹಣ ಲೂಟಿ ಈ ಮೂರು ವಿಚಾರವನ್ನು ಇಟ್ಟುಕೊಂಡು, ಕರ್ನಾಟಕ ಬಿಜೆಪಿ ಘಟಕ ನಾಲ್ಕು ಹಂತಗಳ ಜನಾಕ್ರೋಶ ಯಾತ್ರೆಯನ್ನು (Janakrosh Yatra) ಮೈಸೂರಿನಲ್ಲಿ ಆರಂಭಿಸಿತು. ಇಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಸರ್ಕಾರ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಿ ದಿನೇ ದಿನೇ ಒಂದಿಲ್ಲೊಂದು ಬೆಲೆ ಏರಿಕೆ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದರು. ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯದ ಅಭಿವೃದ್ಧಿ ಶೂನ್ಯ ದುರಾಡಳಿತ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ಅಲ್ಪಸಂಖ್ಯಾತರ ಹೆಸರಿನಲ್ಲಿ […]
ನಾಲ್ನಾಡ್ ಹಾಕಿ ಕ್ಲಬ್ ಬಲ್ಲಮಾವಟಿ : ಹಾಕಿ ತರಬೇತಿ ಉಚಿತ ಶಿಬಿರ ಸಂಪನ್ನ…

ನಾಪೋಕ್ಲು : ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಬಲ್ಲಮಾವಟಿ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಕಿ ತರಬೇತಿ ಉಚಿತ ಶಿಬಿರ ಸಂಪನ್ನಗೊಂಡಿತು. ಶಿಬಿರದ ಸಮಾರೋಪ ಸಮಾರಂಭ ಹಿರಿಯರ ಸಮ್ಮುಖದಲ್ಲಿ ಜರುಗಿತು. ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ, ಅಪ್ಪಚೆಟ್ಟೋಳಂಡ ರವಿ ಮೊಣ್ಣಪ್ಪ, ಕೈಬಿಲಿರ ಟಿಪ್ಪು ಚಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೌರಿರ ಪೂಣಚ್ಚ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಉಚಿತ ಟಿ […]
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ಕೊಡಗಿನ ಪ್ರತೀಕ್ಷಾ ರಾಜ್ಯಕ್ಕೆ 6ನೇ ಸ್ಥಾನ

ಮಡಿಕೇರಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ಮೂಲದ ವಿದ್ಯಾರ್ಥಿನಿ ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಕುಶಾಲನಗರದ ಪ್ರತೀಕ್ಷಾ (Pratheeksha) ಎಸ್ 594/600 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಗಳಿಸಿದ್ದಾರೆ. ಬೆಳ್ತಂಗಡಿಯ ಎಕ್ಸೆಲ್ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಈಕೆ ಕುಶಾಲನಗರದ ಶಿಕ್ಷಕಿ ಭವ್ಯ & ಮಾಜಿ ಸೈನಿಕ ಸುಧೀರ್ ಕುಮಾರ್ ಅವರ ಪುತ್ರಿ. ಇಂಗ್ಲೀಷ್‌ನಲ್ಲಿ 98, ಸಂಸ್ಕೃತ 100, ಭೌತಶಾಸ್ತ್ರ 100, ರಸಾಯನಶಾಸ್ತ್ರ 96, ಲೆಕ್ಕಶಾಸ್ತ್ರ 100, ಜೀವಶಾಸ್ತ್ರದಲ್ಲಿ 100 […]
ವಾಹನ ಸವಾರರೇ ಗಮನಿಸಿ: ಕೊಡಗಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಮಡಿಕೇರಿ (Madikeri) ಕುಟ್ಟ ಹೆದ್ದಾರಿ ಸಂ-89ರ ಕಿ.ಮೀ. 80.40 ರಲ್ಲಿನ (ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಭಾಗದಲ್ಲಿ ಮಳೆಹಾನಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಏಪ್ರಿಲ್, 08 ರಿಂದ ಮೇ, 10 ರವರೆಗೆ ಪೊನ್ನಂಪೇಟೆ ತಾಲ್ಲೂಕು ಮಡಿಕೇರಿ ಕುಟ್ಟ ಹೆದ್ದಾರಿ ಸಂ.89ರ ಕಿ.ಮೀ.80.40 ರಲ್ಲಿನ(ಮಂಚಳ್ಳಿ ಗ್ರಾಮ, ಶ್ರೀಮಂಗಲ ಹೋಬಳಿ) ರಸ್ತೆ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ವಾಹನಗಳ (Vehicle) ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. […]
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಕೊಡಗು ಜಿಲ್ಲೆಗೆ ಯಾರು ಟಾಪರ್ಸ್? ಇಲ್ಲಿದೆ ವಿವರ

2024–25 ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯು ಶೇ 83.84 ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ ಕೊಡಗು ಜಿಲ್ಲೆ 4 ನೇ ಸ್ಥಾನ ಗಳಿಸಿದೆ. 2024 ರ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯು 5 ಸ್ಥಾನದಿಂದ 4 ನೇ ಸ್ಥಾನವನ್ನು ಪಡೆದಿದೆ. ಜಿಲ್ಲೆಯಲ್ಲಿ 4697 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3938 ಮಂದಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 2,320 ಬಾಲಕರಲ್ಲಿ 1750 ಬಾಲಕರು ಉತ್ತೀರ್ಣರಾಗಿ 75.43 ರಷ್ಟು ಫಲಿತಾಂಶ ಪಡೆದಿದ್ದಾರೆ. […]
2nd PUC Result: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ (2nd PUC) ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಿದ್ದಾರೆ. ವೆಬ್ಸೈಟ್ನಲ್ಲಿಯೂ ಫಲಿತಾಂಶ ಲಭ್ಯವಿದೆ. ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನ ಪಡೆದರೆ ಕೊಡಗು ಜಿಲ್ಲೆ 4ನೇ ಸ್ಥಾನ (ಶೇ.83.84) ಹಾಗೂ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮಧ್ಯಾಹ್ನ 12.30 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ಮೂಲಕ ಬಿಡುಗಡೆ ಮಾಡಿದ್ದಾರೆ. karresults.nic.in ಹಾಗೂ […]
ಕೊಡಗಿನ ಮಾದರಿ ಗ್ರಾಮಕ್ಕೆ ಅಂಡಮಾನ್, ನಿಕೋಬಾರ್ ದ್ವೀಪದ ಅಧಿಕಾರಿಗಳ ಭೇಟಿ – ಅಭಿವೃದ್ಧಿ ಬಗ್ಗೆ ಅಧ್ಯಯನ..!

ಮೂರ್ನಾಡು : ಒಂದು ಪ್ರದೇಶದ ಅಭಿವೃದ್ಧಿಯ ಅಧ್ಯಯನ ಸಂಬಂಧ ಬೇರೆ ಬೇರೆ ಕಡೆಯ ತಂಡಗಳು ಬಂದು ಪರಿಶೀಲನೆ ಮಾಡುತ್ತವೆ. ಅದೇ ರೀತಿ ಕೊಡಗಿನ ಮಾದರಿ ಗ್ರಾಮ ಪಂಚಾಯಿತಿಯೊಂದಕ್ಕೆ ಅಂಡಮಾನ್ ನಿಕೋಬಾರ್ ದ್ವೀಪದ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿಗೆ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿದರು. ಪಂಚಾಯಿತ ವ್ಯಾಪ್ತಿಯ ವಿವಿಧ ರೀತಿಯ ಅಭಿವೃದ್ಧಿ ಬಗ್ಗೆ ಇಲ್ಲಿನ […]