ಪೊಲೀಸರ ಮನೆಗೇ ಕನ್ನ ಹಾಕಿದ ಖತರ್ನಾಕ್‌ ಚೋರರು..! – ಇಲ್ಲಿದೆ ನೋಡಿ ಮಾಹಿತಿ..!

Share this post :

ಮಡಿಕೇರಿ : ರಕ್ಷಣೆ ನೀಡುವ ಪೊಲೀಸರ ಮನೆಗೇ ಖತರ್ನಾಕ್‌ಗಳು ಕನ್ನ ಹಾಕಿರುವ ಘಟನೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಮೈತ್ರಿ ಪೊಲೀಸ್‌ ಸಮುದಾಯ ಭವನ ಬಳಿಯಿರುವ ಪೊಲೀಸರ ವಸತಿ ಗೃಹಗಳನ್ನೇ ಟಾರ್ಗೆಟ್‌ ಮಾಡಿದ ಕಳ್ಳರು ಮನೆಗೆ ನುಗ್ಗಿ ನಗದು, ಅಮೂಲ್ಯ ವಸ್ತುಗಳನ್ನ ದೋಚಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಕೃತ್ಯವೆಸಗಿದ್ದಾರೆ. ಕೃತ್ಯ ನಡೆದ ಮನೆಗಳಿಗೆ ಪೊಲೀಸ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಆದ್ರೆ ನಗರದಲ್ಲಿ ನಡೆದ ಈ ಘಟನೆ ಜನರಲ್ಲಿ ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಪೊಲೀಸರ ಮನೆಗೆ ನುಗ್ಗಿದ ಚೋರರು ಅದೆಂಥಾ ಖತರ್ನಾಕ್‌ಗಳಿರಬಹುದು, ಅವರ ಧೈರ್ಯ ಎಂಥದ್ದು ಅಂತ ಜನ ಮಾತನಾಡಿಕೊಳ್ತಿದ್ದಾರೆ.