ವಾಹನ‌ ಸವಾರರ ಗಮನಕ್ಕೆ: ಆಗಸ್ಟ್​​ 15ರಿಂದ ಫಾಸ್​​ಟ್ಯಾಗ್​​ನಲ್ಲಿ ಭಾರೀ ಬದಲಾವಣೆ!

FASTag

Share this post :

ಆಗಸ್ಟ್​ 15ರಿಂದ ಫಾಸ್​ಟ್ಯಾಗ್​ ಸಂಬಂಧಿತ ನವೀಕರಣ…..

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಫಾಸ್​ಟ್ಯಾಗ್​ (FASTag) ಸಂಬಂಧಿತ ಅಪ್ಡೇಟ್​​ ಅನ್ನು ನೀಡಿದ್ದಾರೆ. ನಿತಿನ್​ ಗಡ್ಕರಿ ಆಗಸ್ಟ್ 15, 2025 ರಿಂದ ಜಾರಿಗೆ ಬರುವಂತೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಕೇವಲ 3,000 ರೂಪಾಯಿಗಳ ಬೆಲೆಯಲ್ಲಿ ವಾರ್ಷಿಕ ಪಾಸ್ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಈ ಯೋಜನೆಯನ್ನು ಕಾರ್, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಮೀಸಲಾಗಿದೆ.

ಫಾಸ್​ಟ್ಯಾಗ್​ ಸಂಬಂಧ ಪರಿಚಯಿಸಲಾದ ಈ ವಾರ್ಷಿಕ ಪಾಸ್​​ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿರುತ್ತದೆ. ಯಾವುದು ಮೊದಲು ತೀರ್ಮಾನವಾಗುತ್ತದೆಯೋ ಅದರ ಆಧಾರದ ಮೇಲೆ ಈ ಪಾಸ್​​ ಅವಧಿ ಬರಲಿದೆ. ಈ ಯೋಜನೆಯು ಖಾಸಗಿ ವಾಹನ ಸವಾರರಿಗೆ ಆರ್ಥಿಕವಾಗಿ ಲಾಭದಾಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.