ಗುರುವಾರದಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ (Air India) ಬೋಯಿಂಗ್-787 ಡ್ರೀಮ್ಲೈನರ್ ವಿಮಾನ (Boeing 787 Dreamliner) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 672 ಅಡಿ ಎತ್ತರದಿಂದ ಮೆಡಿಕಲ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿದೆ. ಈ ಅಪಘಾತದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ.
ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಮಧ್ಯಾಹ್ನ 1:38ಕ್ಕೆ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ಅಪಘಾತ ಸಂಭವಿಸಿತು. ಪೈಲಟ್ “ಮೇಡೇ” ಕರೆ ನೀಡಿದರು. ಇದರ ನಂತರ, ವಿಮಾನವು ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಡಿಕ್ಕಿ ಹೊಡೆದು ಬೆಂಕಿ ಉಂಡೆ ಉಗುಳಿತು. ಈ ಪರಿಣಾಮ ವಿಮಾನದ ಅವಶೇಷಗಳು ಮತ್ತು ಅದರೊಳಗಿನ ಜನರ ದೇಹ ಛಿದ್ರಛಿದ್ರವಾಗಿದೆ.
ನಿನ್ನೆ ದುರಂತಕ್ಕೆ ಒಳಗಾದ ವಿಮಾನವು ಸುಮಾರು 12 ವರ್ಷ ಹಳೆಯದಾಗಿತ್ತು. ಅದು ಮಧ್ಯಾಹ್ನ 1.38 ಕ್ಕೆ ಟೇಕ್ ಆಫ್ ಆಗಿ 1.43 ಕ್ಕೆ ಪತನಗೊಂಡಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ಗೆ ಟೇಕ್ ಆಫ್ ಆದ 5 ನಿಮಿಷಗಳಲ್ಲಿ ಪತನಗೊಂಡಿದೆ. ನಿನ್ನೆ ದುರಂತಕ್ಕೆ ಒಳಗಾದ ವಿಮಾನವು ವಿಶ್ವದ ಅತ್ಯುತ್ತಮ ಪ್ರಯಾಣಿಕ ವಿಮಾನಗಳಲ್ಲಿ ಒಂದು. ಬೋಯಿಂಗ್ನ ಡ್ರೀಮ್ಲೈನರ್ 787 ವಿಮಾನ ಹಲವು ವಿಶೇಷತೆಗಳನ್ನು ಹೊಂದಿದೆ.
ಡ್ರೀಮ್ಲೈನರ್ 787 ವಿಶೇಷತೆಗಳೇನು?
ವೆಚ್ಚ – 2.18 ಸಾವಿರ ಕೋಟಿ ರೂಪಾಯಿ
ಉದ್ದ – 56 ಮೀಟರ್
ಎತ್ತರ- 17 ಮೀಟರ್
ರೆಕ್ಕೆಯ ಅಗಲ – 60 ಮೀಟರ್
ಎಂಜಿನ್ – 2
ಇಂಧನ ಸಾಮರ್ಥ್ಯ – 1,26,000 ಲೀಟರ್
ರೇಂಜ್ – 13,620 ಕಿ.ಮೀ.
ಸ್ಪೀಡ್ – 954 ಕಿಮೀ/ಗಂಟೆಗೆ
ಆಸನ ಸಾಮರ್ಥ್ಯ- 250+
ತಯಾರಕರು – ಬೋಯಿಂಗ್