ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್‌ – ಲಾಂಛನ ಅನಾವರಣಗೊಳಿಸಿದ ಚೇರಂಡ ಕಿಶನ್‌ ಮಾದಪ್ಪ

ಗೋಣಿಕೊಪ್ಪ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನವೆಂಬರ್ 2 ಮತ್ತು 3 ರಂದು ಮಡಿಕೇರಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯ ಲಾಂಛನವನ್ನು ರಿಪಬ್ಲಿಕ್ ನೆಟ್‌ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಬಿಡುಗಡೆಗೊಳಿಸಿದರು. ಪೊನ್ನಂಪೇಟೆಯ ಖಾಸಗಿ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ ಮಾತನಾಡಿದ ಅವರು, ಕೊಡಗಿನ ಪತ್ರಕರ್ತರು ಸಾಕಷ್ಟು ಕ್ರೀಡಾಕೂಟ ಆಯೋಜಿಸಿಕೊಂಡು ಸಂಘಟಿತಗೊಳ್ಳುತ್ತಿರುವುದು ಮೆಚ್ಚುವ ವಿಚಾರ. ಹಿಂದೆಯೂ ಕೂಡ ಸಾಕಷ್ಟು ಕ್ರೀಡಾಕೂಟಗಳು ನಡೆದಿರುವ ಬಗ್ಗೆ ಮಾಹಿತಿ ಇದೆ. ರಾಜ್ಯಮಟ್ಟದ […]

ಸರ್ವರ್‌ ಸಮಸ್ಯೆ ಬಗೆಹರಿಸಿ, ಒತ್ತಡ ತಪ್ಪಿಸಿ : ಪಡಿತರ ವಿತರಕರ ಸಂಘ ಮನವಿ

ಮಡಿಕೇರಿ : ರಾಜ್ಯ ಸರ್ಕಾರ ಪಡಿತರ ಕಾರ್ಡ್‌ ಫಲಾನುಭವಿಗಳ ಇ-ಕೆವೈಸಿ ಮಾಡಲು ಆದೇಶಿಸಿದ್ದು, ಸರ್ವರ್‌ ಸಮಸ್ಯೆಯಿಂದಾಗಿ ಈ ಕಾರ್ಯ ತುಂಬಾ ವಿಳಂಬವಾಗುತ್ತಿದೆ ಎಂದು ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಅಶೋಕ್‌ ಹೇಳಿದರು. ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಾವು ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಯೋಜನೆ ಜನರಿಗೆ ತಲುಪಲು ನಮ್ಮ ಶ್ರಮ ದೊಡ್ಡದಿದೆ. ಆದರೆ ಸರ್ಕಾರ ಸರಿಯಾದ ಸವಲತ್ತು ಕಲ್ಪಿಸದೆ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಅಸಮಾಧಾನ […]