ಮಡಿಕೇರಿ-ವೀರಾಜಪೇಟೆ ಹೆದ್ದಾರಿ ಬದಿಯಲ್ಲಿ ಮತ್ತೆ ಭೂಕುಸಿತ..!

ಮಡಿಕೇರಿ : ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಲ್ಪಿಸುವ ಶಕ್ತಿ ನಗರ ಬಳಿ ರಸ್ತೆ ಬದಿ ಭೂಕುಸಿತವಾಗಿದೆ. ಕೆಲವು ದಿನದ ಹಿಂದೆ ಈ ಜಾಗದಲ್ಲಿ ಕುಸಿತವಾಗಿತ್ತು. ಅಲ್ಲಿ ಹೆಚ್ಚಿನ ಕುಸಿತವಾಗದಂತೆ ತಡೆಯಲು ಸ್ಯಾಂಡ್‌ ಬ್ಯಾಗ್‌ ಜೋಡಿಸಿಡಲಾಗಿತ್ತು. ಆದರೆ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡಿಸಿಡಲಾಗಿದ್ದ ಮರಳಿನ ಮೂಟೆಗಳು ಕೆಳ ಬದಿಗೆ ಜಾರಿ ಹೋಗಿವೆ. ಅಲ್ಲಿನ ರಸ್ತೆ ಕಡಿದಾಗಿದ್ದು, ಹೆಚ್ಚಿನ ವಾಹನ ಸಂಚಾರ ಈ ಮಾರ್ಗದಲ್ಲಿರುವುದರಿಂದ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ. […]

ಗಣೇಶೋತ್ಸವದಲ್ಲಿ ಡಿಜೆ ನಿರ್ಬಂಧ – ಮೊದಲ ದಿನ ಮಿಶ್ರ ಪ್ರತಿಕ್ರಿಯೆ – ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದ ಸಮಿತಿಗಳು..!

ಮಡಿಕೇರಿ : ಈ ಬಾರಿಯ ಗೌರಿ ಗಣೇಶೋತ್ಸವ ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಡಿಜೆ, ಸೌಂಡ್ಸ್‌ ಬಳಕೆ ವಿಚಾರವಾಗಿ ಹೆಚ್ಚಾಗಿ ಚರ್ಚೆಗೊಳಪಟ್ಟಿದೆ. ನಿಯಮ ಬಾಹಿರವಾಗಿ ಡಿಜೆ ಬಳಕೆ ಮಾಡದಂತೆ ಪೊಲೀಸ್‌ ಇಲಾಖೆ ಈಗಾಗಲೇ ಎಚ್ಚರಿಕೆಯನ್ನು ಕೊಟ್ಟಿದೆ. ಈ ನಡುವೆ ಗಣೇಶೋತ್ಸವದ ಮೊದಲ ದಿನ ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವ ಸಮಿತಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಜೆ ಬಳಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಿಯಮ ಉಲ್ಲಂಘಿಸಿದರೆ ಆಯೋಜಕರು ಹಾಗೂ ಡಿಜೆ ವ್ಯವಸ್ಥೆ ಕಲ್ಪಿಸಿದವರ ಮೇಲೂ ಕ್ರಮ ಕೈಗೊಳ್ಳುವ ಜೊತೆಗೆ ಪರಿಕರಗಳನ್ನು ಮುಟ್ಟುಗೋಲು […]

ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಬಿರುಸು – ಇನ್ನೆಷ್ಟು ದಿನ ಇರಲಿದೆ ಗೊತ್ತಾ..?

ಕರಾವಳಿ : ಕಳೆದ ಮೂರು ದಿನದಿಂದ ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಮಳೆ ಬಿರುಸುಗೊಂಡಿದೆ. ಈ ಮಳೆ ಇನ್ನೂ ಕೆಲವು ದಿನ ಮುಂದುವರೆಯುವ ಸಾಧ್ಯತೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನ ನಂತರ ಮಳೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 5ರ ತನಕ ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ. ಮಲೆನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಮಳೆ ಮುಂದುವರೆಯಲಿದೆ. ಇದು ಆಗಸ್ಟ್‌ 31ರವರಗೆ ಸಾಗಲಿದೆ. […]

ʼಮಾಹೆದ ಆಟಿದ ತುಳು ಪರ್ಬʼ – ಕುಕ್ಕೇರ ಬೆಳಕು ರಚಿಸಿದ ಕೊರಗಜ್ಜನ ಚಿತ್ರಕ್ಕೆ ದ್ವಿತೀಯ ಬಹುಮಾನ..!

ಮಣಿಪಾಲ : ಮಾಹೆ ವಿವಿ ವತಿಯಿಂದ ನಡೆದ ʼಮಾಹೆದ ಆಟಿದ ತುಳು ಪರ್ಬʼ ಚಿತ್ರಕಲಾ ಸ್ಪರ್ಧೆಯಲ್ಲಿ ಕುಕ್ಕೇರ ಬೆಳಕು ಬೊಳ್ಳಮ್ಮ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಆಟಿ ತಿಂಗಳ ಮಹತ್ವ ಸಾರುವ ಉದ್ದೇಶದಿಂದ ವಿವಿ ವಿತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜಾನಪದದ ವಿಷಯಾಧಾರಿತ ʼತುಳು ರಂಗ್‌ʼ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ತುಳುನಾಡಿನಲ್ಲಿ ಹೆಚ್ಚು ಆರಾಧಿಸಲ್ಪಡುವ ದೈವ ಸ್ವಾಮಿ ಕೊರಗಜ್ಜನ ಮುಖಭಾವದ ಚಿತ್ರವನ್ನು ಬೆಳಕು ರಚಿಸಿದ್ದರು. ಈ ಚಿತ್ರಕ್ಕೆ ದ್ವಿತೀಯ […]

ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ತುಸು ಬಿರುಸು – ಆತಂಕದಲ್ಲಿ ಗಣೇಶೋತ್ಸವ ಸಮಿತಿಗಳು..!

ಮಡಿಕೇರಿ : ಕೆಲವು ದಿನದಿಂದ ವಿರಾಮ ನೀಡಿದ್ದ ಮಳೆರಾಯ ಮತ್ತೆ ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದಾನೆ. ಮಡಿಕೇರಿ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಮಳೆ ಬಿರುಸುಗೊಂಡಿದೆ. ಗೌರಿ ಹಬ್ಬದ ದಿನ ಮಳೆಯಾಗಮನ ಶುಭ ಸಂಕೇತ ಅಂತ ಅನೇಕರು ನಂಬಿದ್ದಾರೆ. ಈ ನಡುವೆ ನಾಳೆಯ ಗಣೇಶೋತ್ಸವ ಸಂಭ್ರಮಕ್ಕೆ ವರುಣ ದೇವ ಅಡ್ಡಿಯಾಗದಿರಲಿ ಅಂತ ಜನ ಬೇಡಿಕೊಳ್ಳುತ್ತಿದ್ದಾರೆ. ಸಂಭ್ರಮದ ಉತ್ಸವಕ್ಕೆ ವಿವಿಧ ಸಮಿತಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾವೆ. ಹೀಗಿರುವಾಗ ಇಂದು ಮಳೆಯಾಗಿರುವುದು ಸಹಜವಾಗಿ ಆತಂಕಕಕ್ಕೆ ಕಾರಣವಾಗಿದೆ.

ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ವಿರೋಧ – ಕ್ಷಮೆ ಕೇಳಲು ಸಿದ್ಧ ಎಂದ ಡಿಸಿಎಂ ಡಿಕೆಶಿ..!

ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವು ದಿನದ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ʼನಮಸ್ತೇ ಸದಾ ವತ್ಸಲೇ ಮಾತೃ ಭೂಮೇ..ʼ ಹಾಡನ್ನು ಪ್ರಸ್ತಾಪಿಸಿ ಮಾತ ನಾಡಿದ್ದರು. ಇದಕ್ಕೆ ಕಾಂಗ್ರೆಸ್‌ನ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಮೌನ ಮುರಿದಿರುವ ಡಿಕೆಶಿ, “ನನ್ನ ಹೇಳಿಕೆಯಿಂದ ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ” ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿ ನಾಯಕರು ಮಾತಾಡಿದಾಗ, ಅವರ ಸಿದ್ದಾಂತದ ಅರಿವು ನನಗೆ ಇದೆ ಅಂತ ಕಾಲೆಳೆದೆ. ನಾನು […]

ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ಆ.27ಕ್ಕೆ

ಭಾಗಮಂಡಲ : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ರೂಢಿ ಸಂಪ್ರದಾಯದಂತೆ ಪ್ರತೀ ವರ್ಷ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಆಗಸ್ಟ್ ೨೭ ರಂದು ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಕೋರಿದ್ದಾರೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ೨೭ ರಂದು ಬೆಳಗ್ಗೆ ೯.೩೦ […]

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವುದಕ್ಕೆ ನಮ್ಮ ತಕರಾರಿಲ್ಲ – ಸಂಸದ ಯದುವೀರ್

ಮೈಸೂರು : ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡುವುದಕ್ಕೆ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಯದುವೀರ್, ಬಾನು ಮುಸ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ತಾಯಿ ಚಾಮುಂಡೇಶ್ವರಿಗೆ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ ಎಂದಿದ್ದಾರೆ. […]

ಮೃ*ತ ಹಂದಿಯನ್ನು ರಸ್ತೆ ಬದಿ ಎಸೆದ ಪ್ರಕರಣ – ಜೆಸಿಬಿ ಮೂಲಕ ಹೂತು ಹಾಕಿದ ಪಂಚಾಯಿತಿ..!

  ಮಡಿಕೇರಿ : ಗಾಳಿಬೀಡು ಗ್ರಾಮದಲ್ಲಿ ಅಪರಿಚಿತರು ಮೃತ ಹಂದಿಗಳನ್ನು ರಸ್ತೆ ಬದಿ ಎಸೆದು ಹೋಗಿದ್ದ ಪ್ರಕರಣಕ್ಕೆ ಸ್ಥಳೀಯ ಪಂಚಾಯಿತಿ ಸ್ಪಂದಿಸಿದೆ. ಯಾಳದಾಳು ಶರತ್ ಎಂಬವರ ತೋಟಕ್ಕೆ ಹೋಗುವ ರಸ್ತೆಯಲ್ಲಿ ಮೃತ ಹಂದಿಯನ್ನು ಎಸೆದು ಹೋಗಿರುವ ಬಗ್ಗೆ ಸ್ಥಳೀಯರಾದ ದಿಶಾಂತ್‌ ಪಂಚಾಯಿತಿ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಪಿಡಿಒ ಜೆಸಿಬಿ ಮೂಲಕ ಅದನ್ನು ತೆರವು ಮಾಡಲು ಸೂಚಿಸಿದರು. ಗುಂಡಿ ತೆಗೆದು ಜೆಸಿಬಿ ಮೂಲಕ ಹೂಳಲಾಯಿತು. ಗ್ರಾಮಸ್ಥರಾದ ದಿಶಾಂತ್, ಯಾಳದಳು ಶರತ್, ಯಾಳದಾಳು ನಿತಿನ್, ಪಂಚಾಯಿತಿ ಸಿಬ್ಬಂದಿಯ ಮನು […]

ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೃತಿ ಮತ್ತು ಸಿಸ್ಕೊ ಸಂಸ್ಥೆಯಿಂದ ನೆರವು

ವೀರಾಜಪೇಟೆ : ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಾಗೃತಿ ಮತ್ತು ಸಿಸ್ಕೊ ಸಂಸ್ಥೆ ವತಿಯಿಂದ ವಿವಿಧ ಪರಿಕರಗಳನ್ನು ಉಚಿತವಾಗಿ ವಿತರಿಸಿದರು. 20 ಸ್ವಯಂ ಸೇವಕರನ್ನೊಳಗೊಂಡ ತಂಡ ಆಗಮಿಸಿ ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿ, ಡ್ರಾಯಿಂಗ್ ಚಾರ್ಟ್, ಲೇಖನಿ, ಶಾಲೆಯ ಗೋಡೆಗಳಿಗೆ ಪೇಂಟಿಂಗ್, ಮಧ್ಯಾಹ್ನದ ಉಪಹಾರ, 20 ವಿದ್ಯಾರ್ಥಿಗಳಿಗೆ ಆಹಾರದ ಕಿಟ್ ವಿತರಿಸಿದರು. ಸಿಸ್ಕೊ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಜಾಗೃತಿ ಟ್ರಸ್ಟ್‌ನ ಆಡಳಿತ ಅಧಿಕಾರಿ ಕಣ್ಣನ್, ಸಂಸ್ಥೆ ಹಾಗೂ ಟ್ರಸ್ಟ್ ಸದಸ್ಯರು, ದಾನಿಗಳಾದ ಕೊಡೀರ ಟಿ. ಗಣಪತಿ, ಗೋಪಾಲ್ […]