ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ – ಹಲವು ಕಾರ್ಯಕ್ರಮಗಳ ಆಕರ್ಷಣೆ

ಮಡಿಕೇರಿ : ಕತ್ತಲೆಕಾಡು-ಜೇನುಕೊಲ್ಲಿ ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ವಿನಾಯಕ ಭಕ್ತ ವೃಂದ ಸಹಯೋಗದಲ್ಲಿ 20ನೇ ವರ್ಷದ ಸಂಭ್ರಮದ ಗೌರಿ ಗಣೇಶೋತ್ಸವ ಕಾರ್ಯಕ್ರಮ ಸೆಪ್ಟೆಂಬರ್ 14ರಿಂದ 18ರವರೆಗೆ ನಡೆಯಲಿದೆ. 14ರಂದು ಬೆಳಗ್ಗೆ 5 ಗಂಟೆಗೆ ಟ್ರಸ್ಟ್‌ನ ಆವರಣದಲ್ಲಿ ಗಣಹೋಮ, ಬಳಿಕ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಬೆಳಗ್ಗೆ 9:00 ಗಂಟೆಗೆ ಭಾರತ್ ಮಾತಾ ಪೂಜೆ, 10 ಗಂಟೆಗೆ ಸಭಾ ಕಾರ್ಯಕ್ರಮ, ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, 11 ಗಂಟೆಗೆ ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ […]
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ

ವಿರಾಜಪೇಟೆ: ಸಮೀಪದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮಕ್ಕಳಿಗೆ ದೇವಾಂಕ್ ಎಂಟರ್ಪ್ರೈಸಸ್ ಹಾಗೂ ದೇವಾಂಕ್ ಪ್ರಾವಿಷನ್ ಸ್ಟೋರ್ ನ ಮಾಲೀಕರಾದ ಗಣೇಶ್ ರವರು ರೈನ್ ಕೋಟ್ ಗಳನ್ನು ವಿತರಿಸಿದರು. ಮಳೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಎದುರಾಗುವ ತೊಂದರೆಗಳನ್ನು ಮನಗಂಡು ಗಣೇಶ್ ರವರು ಸುಮಾರು ಹದಿನೈದು ಸಾವಿರ ವೆಚ್ಚದಷ್ಟು 25 ರೈನ್ ಕೋಟ್‌ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ಮುಖ್ಯೋಪಾಧ್ಯಾಯರಾದ ಕಮಲಮ್ಮ ಕೆ ಎನ್, ಸಹ […]
‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ’ ಪುರಸ್ಕೃತ ಸೂಫಿ ಹಾಜಿಗೆ ಕೆ.ಎಂ.ಎ ವತಿಯಿಂದ ಅಭಿನಂದನಾ ಸನ್ಮಾನ

ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಪ್ರತಿಷ್ಠಿತ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ ಕ್ಕೆ ಭಾಜನರಾಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರನ್ನು ಕೆ.ಎಂ.ಎ. ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಪರವಾಗಿ ಸಂಸ್ಥೆ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಿದರು. ಮೊದಲಿಗೆ ಅಭಿನಂದಿಸಿ ಮಾತನಾಡಿದ ಕೆ.ಎಂ.ಎ. ಕೋಶಾಧಿಕಾರಿಗಳಾದ ಹರಿಶ್ಚಂದ್ರ ಎ. ಹಂಸ, ಕೊಡವ ಮುಸ್ಲಿಂ […]
ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಘಟಕದ ಪದಗ್ರಹಣ, ಸಾಧಕರಿಗೆ ಪ್ರಶಸ್ತಿ ಪ್ರದಾನ

ವಿರಾಜಪೇಟೆ: ಕಲೆ ಮತ್ತು ಸಂಸ್ಕೃತಿಯ ಅನಾವರಣಕ್ಕೆ ಸಾಹಿತ್ಯ ಪರಿಷತ್ತು ಅತ್ಯುತ್ತಮ ವೇದಿಕೆಯಾಗಿದ್ದು, ನೌಕರರು ತಮ್ಮ ಪ್ರತಿಭೆಗಳನ್ನು ಹೊರತರಲು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕ ಡಾ. ರಘುನಾಥ್ ಬಿ.ಎನ್. ತಿಳಿಸಿದರು. ವಿರಾಜಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಗ್ರಹಣ ಹಾಗೂ ಆದರ್ಶ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ-ಸಂಸ್ಕೃತಿ […]
ಸೂಫಿ ಹಾಜಿಗೆ ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ ಪ್ರಧಾನ

ಪೊನ್ನಂಪೇಟೆ: ಕೇಂದ್ರ ಸರಕಾರಿ ಅನುಮೋದಿತ ‘ಐ ಕ್ಯಾನ್ ಫೌಂಡೇಶನ್ ಇಂಡಿಯಾ’ ವತಿಯಿಂದ ‘ವಿಶ್ವ ಮಾನವೀಯತೆ ದಿನಾಚರಣೆ ‘ ಅಂಗವಾಗಿ ನೀಡಲಾಗುವ ‘ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026’ ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಅಧ್ಯಕ್ಷರಾಗಿರುವ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರಿಗೆ ಪ್ರಧಾನ ಮಾಡಲಾಯಿತು. ‘ಭಾರತದ ಅತ್ಯಂತ ಸ್ಪೂರ್ತಿದಾಯಕ ಬದಲಾವಣೆಯ ಹರಿಕಾರ ‘ ಕ್ಷೇತ್ರದಿಂದ ಕರ್ನಾಟಕ ರಾಜ್ಯದಿಂದಲೇ ಏಕೈಕ ವ್ಯಕ್ತಿಯಾಗಿ ಆಯ್ಕೆಗೊಂಡಿದ್ದ ಸೂಫಿ ಹಾಜಿಯವರಿಗೆ ಈ ಪ್ರಶಸ್ತಿಯನ್ನು ನವದೆಹಲಿಯ ಖಾಸಗಿ […]
ವಾಟೆಕಾಡು ಸರ್ಕಾರಿ ಶಾಲೆಗೆ ಮೇಜು, ಕುರ್ಚಿ ಕೊಡುಗೆ

ಮಡಿಕೇರಿ : ಮೂರ್ನಾಡು ಬಳಿಯ ವಾಟೆಕಾಡು ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದಾನಿಗಳ ಸಹಕಾರದಿಂದ ಟೇಬಲ್ ಮತ್ತು ಕುರ್ಚಿಯನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಪರಿಕರಗಳ ಬೇಡಿಕೆ ಇರುವುದನ್ನು ಮನಗಂಡ ದಾನಿಗಳಾದ ಇಗ್ಗುತ್ತಪ್ಪ ಬೋರ್‌ವೆಲ್ಸ್ ಮಾಲೀಕರಾದ ಪ್ರವೀಣ್ ರೈ, ಮಂಜೇಸ್, ಪ್ರವೀಣ್ ಕುಮಾರ್, ನವ್ಯ ಪ್ರವೀಣ್ ರೈ ಅವರು ಅಗತ್ಯವಿರುವ ಟೇಬಲ್ ಹಾಗೂ ಕುರ್ಚಿ ಖರೀದಿಸಿ ವಿತರಿಸಿದರು. ಪರಿಕರಗಳ ಅಗತ್ಯತೆ ಬಗ್ಗೆ ಬಾಳೆಯಡ ದಿವ್ಯಾ ಮಂದಪ್ಪ ಅವರು ದಾನಿಗಳ ಗಮನಕ್ಕೆ […]
ರಾಷ್ಟ್ರ ಧ್ವಜ ಹಾರಿಸಲು ಜಮೀರ್ ಅಹ್ಮದ್ ಹಿಂದೇಟು – ದೇಶ ದ್ರೋಹದ ನಡೆ ಎಂದ ಬಿಜೆಪಿ

ಮಡಿಕೇರಿ : ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿರುವ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ದೇಶದ್ರೋಹದ ನಡೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾದೆ. ಇತ್ತೀಚಿಗೆ ಹರಸಾಹಸ ಮೂಲಕ ಹೈ ಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮೂಲಕ ಒತ್ತಡ ಹಾಕಿ ಸಚಿವ ಸ್ಥಾನ ಪಡೆದಿರುವ ಜಮೀರ್ ಅಹಮದ್ ಖಾನ್, ತನಗೆ ಉಸ್ತುವಾರಿ ನೀಡಿದ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಹಾಗೂ ರಾಷ್ಟ್ರ ಧ್ವಜ ಹಾರಿಸಲು ಸಮಯವಿಲ್ಲ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. […]
ಕೊಡಗಿನವರಿಗೆ BSNL ದಮಾಕ: ₹1ಕ್ಕೆ ಅನ್‌ಲಿಮಿಟೆಡ್ ಕರೆ, ಉಚಿತ 4G ಸಿಮ್!

80ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಬಿಎಸ್‌ಎನ್‌ಎಲ್ ಸಂಸ್ಥೆಯು ಕೊಡಗು ಜಿಲ್ಲೆಯ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳು ಹಾಗೂ ಡಿಜಿಟಲ್ ಸೇವೆಗಳನ್ನು ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026 ರವರೆಗೆ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಉಚಿತವಾಗಿ 4G ಸಿಮ್ ಕಾರ್ಡ್ ನೀಡಲಾಗುತ್ತಿದ್ದು, ಕೇವಲ ₹1 ರ ಮೊದಲ ರಿಚಾರ್ಜ್ (First Recharge) ಮೂಲಕ 24 ದಿನಗಳ ಅವಧಿಗೆ ಪ್ರತಿದಿನ 1 GB ಹೈಸ್ಪೀಡ್ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಉಚಿತ ಕರೆಗಳು ಹಾಗೂ ದಿನಕ್ಕೆ […]
ಕಾವೇರಿ ವಿವಾದದ ನಡುವೆ ತಲಕಾವೇರಿಗೆ ಪೂಜೆ ಸಲ್ಲಿಸಿದ ಶಾಸಕ ಸುರೇಶ್ ಕುಮಾರ್

ಮಡಿಕೇರಿ : ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ರಾಜಾಜಿನಗರ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ರಾಜಾಜಿನಗರ ಕ್ಷೇತ್ರದ ಕಾರ್ಯಕರ್ತರೊಂದಿಗೆ ಜೀವನದಿ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಿದ ಸುರೇಶ್ ಕುಮಾರ್, ಕಾವೇರಿಗೆ ನಮಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ಮೂರು ಬಾರಿ 100 ಅಡಿಗೂ ಹೆಚ್ಚು ನೀರು ತುಂಬಿತ್ತು. ಆದರೆ ಈ ಬಾರಿ ಸಕಾಲಕ್ಕೆ […]
ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಸಂಭ್ರಮದ ‘ಕಕ್ಕಡ ನಮ್ಮೆ’ ಆಚರಣೆ

ಕೊಡವ ಪೊಮ್ಮಕ್ಕಡ ಒಕ್ಕೂಟ ಕೊಡವ ಸಮಾಜ ವಿರಾಜಪೇಟೆ ಇದರ ವತಿಯಿಂದ ಕೊಡವ ಸಮಾಜದಲ್ಲಿ 2026-27ನೇ ಸಾಲಿನ ‘ಕಕ್ಕಡ ನಮ್ಮೆ’ ಆಚರಣೆಯನ್ನು ಪೊನ್ನಕ್ಕ ತಂಡದವರ ಸಹಯೋಗದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಅವರು, ಚಳಿ-ಮಳೆಯೆನ್ನದೆ ಪ್ರತಿಯೊಬ್ಬರೂ ತಮ್ಮ ಮನೆಯ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಹಾಗೂ ದೈಹಿಕ ಚಟುವಟಿಕೆಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಕಕ್ಕಡ ನಮ್ಮೆಯ ಸಂದರ್ಭದಲ್ಲಿ 18 ತರಹದ ಔಷಧೀಯ ಗುಣಗಳನ್ನು […]