ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 19ನೇ ವರ್ಷದ ಗೌರಿ ಗಣೇಶೋತ್ಸವ ಆ.27ರಿಂದ 29ರವರೆಗೆ

ಮಡಿಕೇರಿ : ಕತ್ತಲೆಕಾಡುವಿನ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 19ನೇ ವರ್ಷದ ಗೌರಿ ಗಣೇಶೋತ್ಸವ ಆ.27ರಿಂದ 29ರವರೆಗೆ ಜರುಗಲಿದೆ. 27ರಂದು ಬೆಳಗ್ಗೆ 08 ಗಂಟೆಗೆ ಗಣ ಹೋಮ, ಗಣೇಶ ಮೂರ್ತಿ ಪ್ರತಿಷ್ಠಾಪನೆ, 9.15ಕ್ಕೆ ಭಾರತ್‌ ಮಾತಾ ಪೂಜೆ, ಬಳಿಕ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ 06 ಗಂಟೆಗೆ ಸುಭಾಷ್‌ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 28ರಂದು ಸಂಜೆ 06 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ರಾತ್ರಿ 08 ಗಂಟೆಗೆ ಅನ್ನ ಸಂತರ್ಪಣೆ, 09 […]

ಕೊಡವ ಮುಸ್ಲಿಂ ಅಸೋಸಿಯೇಷನ್‌ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ವಿರಾಜಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೆ. ಎಂ. ಎ. ಪ್ರಧಾನ ಕಛೇರಿಯಿರುವ ವಿರಾಜಪೇಟೆಯ ಮುಖ್ಯ ರಸ್ತೆಯ ಡಿ.ಹೆಚ್.ಎಸ್. ಕಟ್ಟಡದ ಮುಂಭಾಗದಲ್ಲಿ ಶುಕ್ರವಾರ ಬೆಳಿಗ್ಗೆ ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಧ್ವಜಾರೋಹಣ ನೆರವೇರಿಸಿದರು. ನಂತರ ಧ್ವಜ ವಂದನೆಗಳೊಂದಿಗೆ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಲಾಯಿತು. ಬಳಿಕ ಮಾತನಾಡಿದ ದುದ್ದಿಯಂಡ ಎಚ್. ಸೂಫಿ ಹಾಜಿ, ರಾಷ್ಟ್ರಪಿತ ಮಹಾತ್ಮ ಗಾಂಧೀ ಸೇರಿದಂತೆ ಹಲವಾರು ಕ್ರಾಂತಿಕಾರಿ […]

ರೇಣುಕಾಸ್ವಾಮಿ ಕೊ*ಲೆ ಕೇಸ್‌ – ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು – ದರ್ಶನ್‌ & ಗ್ಯಾಂಗ್‌ಗೆ ಮತ್ತೆ ಜೈಲೇ ಗತಿ..!

ದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ನ ಜಾಮೀನು ರದ್ದಾಗಿದೆ.   ನಟ ದರ್ಶನ್(Darshan) ಹಾಗೂ ಪವಿತ್ರಾ ಗೌಡ (Pavithra Gowda) ಸೇರಿ ಎಲ್ಲಾ ಆರೋಪಿಗಳ ಜಾಮೀನು (Bail) ರದ್ದು ಮಾಡಬೇಕೆಂದು ಕೋರಿ ಕರ್ನಾಟಕ ಪೊಲೀಸರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿದೆ.   ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿರುವ ನ್ಯಾಯಾಲಯ, ತಕ್ಷಣದಲ್ಲೇ ಬಂಧಿಸಿ ಜೈಲಿಗೆ ಕಳುಹಿಸುವಂತೆ ಹೇಳಿದೆ. ಹೈಕೋರ್ಟ್‌ ನೀಡಿದ್ದ ತೀರ್ಪಿನ ಬಗ್ಗೆ […]

ನಾಟಿ ಔಷಧಿ ಸೊಪ್ಪಿನ ರಸ ಕುಡಿಸುವುದರಿಂದ ಮಕ್ಕಳ ಸಾವಿನ ಪ್ರಮಾಣ ಹೆಚ್ಚಳ : ಡಾ.ಮಧುಸೂದನ್‌ ಆತಂಕ

ಮಡಿಕೇರಿ : ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಆರು ತಿಂಗಳವರೆಗೆ ಕಡ್ಡಾಯವಾಗಿ ಎದೆಹಾಲು ಕುಡಿಸಬೇಕು. ಜೊತೆಗೆ ೨ ವರ್ಷದವರೆಗೆ ಪೂರಕ ಆಹಾರದ ಜೊತೆಗೆ ಎದೆಹಾಲು ಉಣಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಹೇಳಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದಲ್ಲಿ ಬುಧವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎದೆಹಾಲಿನ ಮಹತ್ವ […]

ಧರಾಲಿಯಲ್ಲಿ ಭೀಕರ ಭೂಕುಸಿತ – 70ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ ಭಾರತೀಯ ಸೇನೆ…

ಉತ್ತರಾಖಂಡ : ಉತ್ತರಾಖಂಡದ ಧರಾಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವವರ ರಕ್ಷಣೆಗೆ ಸೇನೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಮಧ್ಯಾಹ್ನವರೆಗೆ 70ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ. ಗಂಗೋತ್ರಿ ಮತ್ತು ಧರಾಲಿಯಲ್ಲಿ ಎರಡು ಹೆಚ್ಚುವರಿ ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಭೂಕುಸಿತಕ್ಕೊಳಗಾದ ಪ್ರದೇಶಕ್ಕೆ ತಲುಪಲು ತಾತ್ಕಾಲಿಕ ರಸ್ತೆ ನಿರ್ಮಿಸಿಕೊಂಡು ತೆರಳಲಾಗುತ್ತಿದೆ. ಕಾರ್ಯಾಚರಣೆಗೆ ವಿವಿಧ ಯಂತ್ರೋಪಕರಣಗಳನ್ನೂ ಬಳಸಲಾಗುತ್ತಿದೆ. ಸಿಲುಕಿಕೊಂಡಿರುವ ನಾಗರಿಕರನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ರಕ್ಷಣಾಪಡೆಯ ಶ್ವಾನಗಳನ್ನು ಬಳಸಿಕೋಳ್ಳಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ […]

ಮಡಿಕೇರಿಯಲ್ಲಿ ಗುರುವಂದನಾ ಕಾರ್ಯಕ್ರಮ – ಯೋಗ ಶಿಕ್ಷಕರನ್ನು ಸನ್ಮಾನಿಸಿ ಗೌರವಾರ್ಪಣೆ..!

ಮಡಿಕೇರಿ : ಗುರುಪೂರ್ಣಿಮೆ ಅಂಗವಾಗಿ ಮಡಿಕೇರಿಯ ಯೋಗ ಭಾರತಿ, ಯೋಗ ಸಂದ್ಯಾ, ಆರೋಹಣ ಕೊಡಗು, ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಗುರುವಂದನಾ ಕಾರ್ಯಕ್ರಮ ಶನಿವಾರ ನಡೆಯಿತು. ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಗುರುವಿನ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂದಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು.‌ ದಿನದ ಮಹತ್ವದ ಬಗ್ಗೆ ಅನಿತಾ ಸುಧಾಕರ್ ಮಾತನಾಡಿದರು. ಯೋಗ ಶಿಕ್ಷಕರಾದ ಮಲ್ಲಿಗೆ […]

ಹಿರಿಯ ಪತ್ರಕರ್ತ ಕಲ್ಯಾಟಂಡ ಬಿ. ಗಣಪತಿ ನಿಧನ

ರಾಜ್ಯದ ಖ್ಯಾತ ಪತ್ರಕರ್ತ ಕಲ್ಯಾಟಂಡ ಬಿ. ಗಣಪತಿ(86) ನಿಧನರಾಗಿದ್ದಾರೆ. ಮೈಸೂರು ಭಾಗದ ಜನಪ್ರಿಯ ಪತ್ರಿಕೆ ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಸಂಪಾದಕರಾಗಿದ್ದ ಇವರು, 5 ದಶಕಗಳಿಂದ ಮೈಸೂರಿನಲ್ಲಿ ಪತ್ರಿಕೋದ್ಯಮಿಯಾಗಿ ಖ್ಯಾತಿ ಗಳಿಸಿದ್ದರು. ಇಂಗ್ಲೀಷ್‌ ಹಾಗೂ ಕನ್ನಡ ಭಾಷೆಯಲ್ಲಿ ಅಪಾರ ಜ್ಞಾನ ಹೊಂದಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಪತ್ರಕರ್ತರ ಸಂಘಟನೆಗಳು, ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.

ಲೈನ್‍ಮನೆಗಳಲ್ಲಿರುವ 2 ಸಾವಿರ ಆದಿವಾಸಿ ಬುಡಕಟ್ಟು ಕುಂಟುಂಬಕ್ಕೆ ಶೀಘ್ರ ಹಕ್ಕುಪತ್ರ ವಿತರಣೆ: ಎ.ಎಸ್.ಪೊನ್ನಣ್ಣ

ಜಿಲ್ಲೆಯ ಲೈನ್‍ಮನೆಗಳಲ್ಲಿ ವಾಸಿಸುವ ಬುಡಕಟ್ಟು ಆದಿವಾಸಿಯ 2000 ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರವನ್ನು ಎರಡು ಮೂರು ತಿಂಗಳಲ್ಲಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ನಿವೇಶನ ಹಕ್ಕು ಪತ್ರ ನೀಡುವ ಸಂಬಂಧ ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಯವರು, ಉಪ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ […]

ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ಸಂಶೋಧನಾ ಪ್ರಬಂಧ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಆಚಾರ ವಿಚಾರ, ಜಾನಪದ ಹಾಗೂ ಕಲೆಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಕ್ಕೆ ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ ೨೧ ಕೊನೆಯ ದಿನವಾಗಿದೆ. ಬಂದಿರುವ ಅರ್ಜಿಗಳನ್ನು ಆಯ್ಕೆ ಸಮಿತಿಯಲ್ಲಿ ಪರಿಶೀಲಿಸಿ ನಾಲ್ಕು ಸೂಕ್ತ ಸಂಶೋಧಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ತಲಾ ರೂ ೭೫,೦೦೦ ದಂತೆ ಫೆಲೋಶಿಫ್ ನೀಡಲಾಗುವುದು. ಈ ಹಿಂದೆ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಿದವರಿಗೆ ಅವಕಾಶ ಇರುವುದಿಲ್ಲ. ಫೆಲೋಶಿಫ್‌ಗೆ […]

SKSSF ಚೋಕಂಡಳ್ಳಿ ನಲುವತ್ತೊಕ್ಲು ಯೂನಿಟ್ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ

ಮಡಿಕೇರಿ : ಚೋಕಂಡಳ್ಳಿ ನಲುವತ್ತೊಕ್ಲುವಿನ SKSSF ಘಟಕ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ ಇತ್ತೀಚೆಗೆ ನಡೆಯಿತು. ಘಟಕ ಅಧ್ಯಕ್ಷ ರಶೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಝಿಯಾಉದ್ಧೀನ್ ಬಾಖವಿ ಉದ್ಘಾಟಿಸಿದರು. ಸಂಚಾಲಕ ಜೈನುದ್ಧೀನ್ ಮಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ಎಲ್ಲರೂ ಸಮಸ್ತ ಅಧೀನದಲ್ಲಿ ಕಾರ್ಯ ನಿರ್ವಹಿಸಬೇಕು. ಸಮಸ್ತ ಶತಮಾನೋತ್ಸವ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಪ್ರಮುಖರು ಕರೆ ನೀಡಿದರು. ಸಮಸ್ತ 100ನೇ ವಾರ್ಷಿಕ ಸಮ್ಮೇಳನ ಪ್ರಚಾರದ ಪ್ರಯುಕ್ತ ಸಿದ್ಧಪಡಿಸಲಾದ ಕೀ ಬಂಚ್‌ ಅನ್ನು ವಿತರಿಸಲಾಯಿತು. ಕಾರ್ಯದರ್ಶಿ ನೌಷಾದ್ […]