ಕಾವೇರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ ಕಾರ್ಯಕ್ರಮ

ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿಯನ್ನು ಮುಟ್ಟಬಹುದೇ ಹೊರತು ಅದೃಷ್ಟ, ಹಣೆಬರಹ ನಂಬಿದರೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜಿನ (Cauvery College) ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಆಯೋಜಿಸಲಾಗಿದ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಸಮಯ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತಿಹಾಸ ವಿಷಯದ ಮಹತ್ವ ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮವನ್ನು […]

ಲೆದರ್‌ಬಾಲ್ ಕ್ರಿಕೆಟ್: ಜಿಲ್ಲಾ ತಂಡಕ್ಕೆ ಪ್ರಗತಿ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆ

ವಿರಾಜಪೇಟೆ :  ವಿರಾಜಪೇಟೆಯ ಪ್ರಗತಿ ನರ್ಸರಿ, ಪ್ರೈಮರಿ ಮತ್ತು ಹೈ ಸ್ಕೂಲ್ ಹಾಗೂ ಪ್ರಗತಿ ಕ್ರಿಕೆಟ್ ಅಕಾಡೆಮಿಯ ವಿದ್ಯಾರ್ಥಿನಿಯರು ಕೊಡಗು ಜಿಲ್ಲಾ ಲೆದರ್‌ಬಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಶಾಲೆಗೆ  ಕೀರ್ತಿ ತಂದಿದ್ದಾರೆ. ಅಂಡರ್-15 ವಿಭಾಗದಲ್ಲಿ ವಿನ್ಯಾ ಎನ್. ಎಸ್. ಪ್ರತೀಕ್ಷಾ ಕೆ ಎನ್ ,  ವರ್ಷಿಣಿ ಕೆ ಎಚ್ ಹಾಗೂ ಅಂಡರ್-19 ವಿಭಾಗದಲ್ಲಿ ಸಾನ್ವಿ ಎಸ್ ಭಟ್, ಧನ್ವಿ ಬಿ. ಆರ್.ಇವರು ಕೊಡಗು ಜಿಲ್ಲಾ ಲೆದರ್‌ಬಾಲ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿ ಉಡುಪಿಯಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಈ ಪಂದ್ಯಗಳಲ್ಲಿ ಉಡುಪಿ, ದಕ್ಷಿಣ […]

ಕೊಡಗಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಏಪ್ರಿಲ್, 8 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ “ಉದ್ಯೋಗಮೇಳ” ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಜಾಯ್ ಆಲುಕಾಸ್ ಜ್ಯುವೆಲ್ಲರಿ, ಮೈಸೂರು, ಕಲ್ಯಾಣಿ ಮೋಟಾರ್ಸ್ ಕಾರ್ ಶೋ ರೂಂ, ಮಡಿಕೇರಿ, ಕೂರ್ಗ್ ಕ್ಲಿಪ್ಟ್ಸ್ ರೆಸಾರ್ಟ್, ಮಡಿಕೇರಿ, ಹ್ಯೂಂಡಾಯಿ ಕಾರ್ ಶೋ ರೂಮ್, ಮಡಿಕೇರಿ, ಇವೊಲೋಬ್ಯಾಕ್ ರೆಸಾರ್ಟ್, ಮಡಿಕೇರಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ […]

ಕೊಡಗು: ನಾಳೆ ಎಲ್ಲೆಲ್ಲಿ ಕರೆಂಟ್ ಇರಲ್ಲ?

ಭಾಗಮಂಡಲ ಫೀಡರ್‍ನಲ್ಲಿ ಏಪ್ರಿಲ್, 08 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ತಾಳತ್ಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

ʼಮುನೀಶ್ವರ ಕ್ರಿಕೆಟ್‌ ಲೀಗ್‌ 2026ʼ ಲೆದರ್‌ ಬಾಲ್‌ ಟೂರ್ನಿ – ಟೀಂ ಸ್ಟ್ರೈಕರ್ಸ್‌ ಚಾಂಪಿಯನ್‌

ಮಡಿಕೇರಿ : ನಗರದ ಮುನೀಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ʼಮುನೀಶ್ವರ ಕ್ರಿಕೆಟ್‌ ಲೀಗ್‌ 2026ʼ ಪ್ರಥಮ ವರ್ಷದ ಲೆದರ್‌ ಬಾಲ್‌ ಟೂರ್ನಮೆಂಟ್‌ ಚಾಂಪಿಯನ್‌ ಆಗಿ ಟೀಂ ಸ್ಟ್ರೈಕರ್ಸ್‌ ಹೊರಹೊಮ್ಮಿದೆ. ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 08 ದಿನ ಕಾಲ ನಡೆದ ಟೂರ್ನಮೆಂಟ್‌ನಲ್ಲಿ ಜಿಲ್ಲೆಯ ಪ್ರತಿಷ್ಠಿತ 08 ತಂಡಗಳು ಪಾಲ್ಗೊಂಡಿದ್ದವು. ಶನಿವಾರ ಅಪರಾಹ್ನ ನಡೆದ ಫೈನಲ್‌ ಪಂದ್ಯದಲ್ಲಿ ಎಂವೈಸಿಸಿ ಮಡಿಕೇರಿ ತಂಡದ ಎದುರು ಟೀಂ ಸ್ಟ್ರೈಕರ್ಸ್‌ ಸುಲಭ ಜಯ ದಾಖಲಿಸಿತು. ಮೊದಲು ಬ್ಯಾಟ್‌ ಮಾಡಿದ ಎಂವೈಸಿಸಿ 99 […]

ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಕಾಡುಪ್ರಾಣಿ ಡಿಕ್ಕಿ – ದಂಪತಿಗೆ ಗಂಭೀರ ಗಾಯ..!

Couple seriously injured

ಸುಂಟಿಕೊಪ್ಪ : ಕಾಡುಪ್ರಾಣಿಯೊಂದು ವಾಹನಕ್ಕೆ ಡಿಕ್ಕಿಯಾಗಿ ದಂಪತಿ ಗಾಯಗೊಂಡಿರುವ ಘಟನೆ ಕೆದಕಲ್ ಬಳಿ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ದಂಪತಿ ಎಮ್ಮೆಮಾಡುವಿನಿಂದ ಕುಶಾಲನಗರ ಕಡೆ ತೆರಳುತ್ತಿದ್ದರು. ಈ ವೇಳೆ 7ನೇ ಮೈಲ್‌ ಬಳಿ ಪಕ್ಕದ ತೋಟದಿಂದ ಕಾಡುಕೋಣವೊಂದು ಏಕಾಏಕಿ ಹೆದ್ದಾರಿಗೆ ಬಂದಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯವಾಗಿದೆ. ಇಬ್ಬರನ್ನೂ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ 3 ಮತ್ತು 4ರಂದು ಕೆದಮುಳ್ಳೂರು ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ

Sri Chamundi Devi

ವಿರಾಜಪೇಟೆ:ವಿರಾಜಪೇಟೆ ಸಮೀಪದ ಕೆದಮುಳ್ಳುರು ಗ್ರಾಮದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವವು ಏಪ್ರಿಲ್ 3 ಮತ್ತು 4 ರಂದು ನಡೆಯಲಿದೆ.ಕೆದಮುಳ್ಳೂರು ಚಾಮುಂಡಿ ಹಬ್ಬ ಎಂದರೆ ಎಲ್ಲೆಡೆ ಪ್ರಚಲಿತದಲ್ಲಿದ್ದು ಅತ್ಯಂತ ಹೆಸರುವಾಸಿಯಾಗಿದೆ. ಹಾಗೂ ಅತ್ಯಂತ ಶಕ್ತಿಯನ್ನು ಹೊಂದಿರತಕ್ಕAತಹ ಚಾಮುಂಡಿ ದೇವಿಯ ಕ್ಷೇತ್ರವಾಗಿದೆ. ಹಾಗಾಗಿ ಈ ಉತ್ಸವದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ತರು, ದೂರ ದೂರದ ಊರುಗಳಿಂದ ಭಕ್ತರು, ಆಗಮಿಸಿ ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ೨ ರಂದು ರಾತ್ರಿ ೮:೩೦ ಗಂಟೆಗೆ […]

ವೃದ್ಧಾಶ್ರಮದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟು ಹಬ್ಬ ಆಚರಣೆ

General Thimmaiah birthday

ಮಡಿಕೇರಿ:-ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೌಂಡೇಶನ್ ವತಿಯಿಂದ ಮಂಗಳವಾರ ತನಲ್ ಕೂರ್ಗ್ ಆಶ್ರಮ, ವಿಕಾಸ ಆಶ್ರಮ ಮತ್ತು ಶಕ್ತಿ ವೃದ್ಧಾಶ್ರಮದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೃದ್ಧಾಶ್ರಮದಲ್ಲಿನ ಆಶ್ರಯದಾತರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ತನಲ್ ಕೂರ್ಗ್ ವೃದ್ಧಾಶ್ರಮಕ್ಕೆ ಶಾಸಕರು ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೌಂಡೇಶನ್‍ನ ಗೌರವ ಅಧ್ಯಕ್ಷರಾದ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಭೇಟಿ ನೀಡಿ ಹೂ ಗುಚ್ಛ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ […]

ಕಾವೇರಿ ಕಾಲೇಜಿನಲ್ಲಿ ನಡೆದ ದಿ. ಎಂ ಜಿ ಪದ್ಮನಾಭ ಕಾಮತ್ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ

Cauvery College

ವಿರಾಜಪೇಟೆ: ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯ, ಭಾಷೆ , ನಾಡು, ಸಂಸ್ಕೃತಿ , ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಕೆ.ಜಿ . ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾವೇರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ. ಎಂ ಜಿ ಪದ್ಮನಾಭ ಕಾಮತ್ […]

ಕಂಬೆಯಂಡ ಗೋಪಾಲ್ ಅವರಿಗೆ ಡಿ.ಸಿ.ಎಫ್ ಆಗಿ ಮುಂಬಡ್ತಿ

Kambeyanda Gopal

ರಾಜ್ಯ ಅರಣ್ಯ ಸೇವೆಗೆ ಸೇರಿದ 7 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮುಂಬಡ್ತಿ ನೀಡಿ ಕರ್ನಾಟಕ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಇದರನ್ವಯ, ಕೊಡಗು ಜಿಲ್ಲೆಯ ತಿತಿಮತಿ ವಿಭಾಗದಲ್ಲಿ ಎಸಿಎಫ್ (ACF) ಆಗಿ ಕಾರ್ಯನಿರ್ವಹಿಸುತ್ತಿದ್ದ ಕಂಬೆಯಂಡ ಪಿ. ಗೋಪಾಲ್ ರವರನ್ನು ಕೊಡಗು ಜಿಲ್ಲೆಯ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹುದ್ದೆಗೆ ಪದೋನ್ನತಿ ನೀಡಿ ನೇಮಿಸಲಾಗಿದೆ. ಮೂಲತಃ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದವರಾದ ಗೋಪಾಲ್ ಕೆ.ಪಿ ರವರು ಪ್ರಸ್ತುತ ವಿರಾಜಪೇಟೆಯ ನಿವಾಸಿಯಾಗಿದ್ದು, ಈ […]