ಬದುಕನ್ನು ಬರ್ಬರಗೊಳಿಸಿ ಕಸ್ತೂರಿರಂಗನ್ ವರದಿ ಜಾರಿ ಬೇಡ: ಕೆ.ಎಂ.ಎ

ಪೊನ್ನಂಪೇಟೆ: ಕಸ್ತೂರಿರಂಗನ್ ವರದಿ ಜಾರಿಯಾದರೆ ವಿಶೇಷವಾಗಿ ಗ್ರಾಮೀಣ ಜನರ ಬದುಕು ಬಯಲು ಜೈಲಿನಂತಾಗುತ್ತದೆ. ಕೊಡಗಿನ ಬಹುಪಾಲು ಜನರ ಭಾವನೆಗೆ ವಿರುದ್ಧವಾಗಿರುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು. ಜನರ ಬದುಕನ್ನು ಬರ್ಬರಗೊಳಿಸುವ ಮತ್ತು ಮಾನವ ಹಕ್ಕನ್ನೇ ಉಲ್ಲಂಘಿಸುವ ಯಾವ ಯೋಜನೆಯ ಅನುಷ್ಠಾನವೂ ಜಿಲ್ಲೆಗೆ ಅಗತ್ಯವಿಲ್ಲ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ಈ ಕುರಿತು ಸೋಮವಾರದಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕೇಂದ್ರ ಸರ್ಕಾರವು […]