ಮಣ್ಣಿನ ಫಲವತ್ತತೆಗೆ ಜೀವಾಮೃತ ಸಹಕಾರಿ: ಬೇಟೋಳಿಯಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ

ಪೊನ್ನಂಪೇಟೆ: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಶಿಬಿರದ ವತಿಯಿಂದ ಸಮೀಪದ ಬೇಟೋಳಿ ಗ್ರಾಮದ ಪ್ರಗತಿಪರ ರೈತ ವೇದಾತ್ಮ ಅವರ ಭತ್ತದ ಗದ್ದೆಯಲ್ಲಿ ಸ್ಥಳೀಯ ರೈತರಿಗಾಗಿ ಜೀವಾಮೃತ ತಯಾರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ನೆರವೇರಿತು. ಶಿಬಿರಾರ್ಥಿ ವಿದ್ಯಾರ್ಥಿಗಳು 20 ಕೆ.ಜಿ. ಹಸುವಿನ ಸಗಣಿ, 15ರಿಂದ 20 ಲೀಟರ್ ಗೋಮೂತ್ರ, 2 ಕೆ.ಜಿ. ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯದ ಹಿಟ್ಟು ಹಾಗೂ ಗದ್ದೆಯ ಜೀವರಸಯುಕ್ತ ಮಣ್ಣನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ, ವೈಜ್ಞಾನಿಕ ಹಾಗೂ ಪ್ರಾಯೋಗಿಕ […]