ರಾಜ್ಯ ಮಟ್ಟದ 5ಎ ಸೈಡ್ ರಿಂಕ್ ಹಾಕಿ ಪಂದ್ಯಾಟ: ಕಾವೇರಿ ಕಾಲೇಜು ಗೋಣಿಕೊಪ್ಪಲು ಚಾಂಪಿಯನ್

Share this post :

ವಿರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ ಎರಡು ದಿನದ ರಾಜ್ಯ ಮಟ್ಟದ 5ಎ ಸೈಡ್ ರಿಂಗ್ ಹಾಕಿ ಪಂದ್ಯಾಟ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಹಿಂದಿನ ಕಾಲದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೊಡಗು ಜಿಲ್ಲೆಗೆ ವಿಶೇಷವಾದ ಸ್ಥಾನವಿದೆ. ಅದರಲ್ಲಿಯು ಸೇನೆ ಹಾಗೂ ಹಾಕಿ ಪಂದ್ಯಾಟಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ನಮ್ಮ ಪೂರ್ವಜರು ಎಲ್ಲಾ ಕ್ಷೇತ್ರಗಳನ್ನು ಬೆಳೆಸಿಕೊಂಡು ಬಂದ ಆಚಾರ , ವಿಚಾರ, ಸಂಸ್ಕೃತಿ , ಸಂಪ್ರದಾಯ ನಾವೆಲ್ಲರೂ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಹಾಕಿ ಕ್ರೀಡೆಯು ಜಿಲ್ಲೆಯ ಅಸ್ಮಿತೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಹೆಚ್ಚಿನ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುವಂತಾಗಲಿ ಎಂದರು. ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚಿನ ಹಾಕಿ ಆಟಗಾರರಿದ್ದು ತಾಲೂಕಿಗೆ ಒಂದು ಟರ್ಪ್ ಮೈದಾನ ಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ ಆದಷ್ಟು ಬೇಗ ಈ ವಿಚಾರದ ಕುರಿತು ಗಮನಹರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ , ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ , ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮುಕಳೇರ ಕುಶಾಲಪ್ಪ ,ನಾಪೋಕ್ಲು ಭಗವತಿ ಹಾಕಿ ಕ್ಲಬ್ ಸದಸ್ಯರಾದ ಅಚ್ಚಂದಿರ ಮಂದಣ್ಣ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ 5ಎ ಸೈಡ್ ಹಾಕಿ ಪಂದ್ಯಾಟ ಶನಿವಾರ ಅದ್ದೂರಿಯಾಗಿ ತೆರೆ ಖಂಡಿತು. ಒಟ್ಟು 20 ತಂಡಗಳು ಭಾಗವಹಿಸಿದ್ದ ಕ್ರೀಡಾಕೂಟದಲ್ಲಿ ನಾಕೌಟ್ ಮಾದರಿಯ ಪಂದ್ಯ ನಡೆದು ಅಂತಿಮವಾಗಿ ಸೆಮಿ ಫೈನಲ್ ಹಂತಕ್ಕೆ ನಾಲ್ಕು ತಂಡಗಳು ಆಯ್ಕೆಯಾದವು.ಮೊದಲ ಸೆಮಿ ಫೈನಲ್ ಪಂದ್ಯಾಟ ಸೆಂಟ್ ಜೋಸೆಫ್ ಕಾಮರ್ಸ್ ಕಾಲೇಜ್ ಬೆಂಗಳೂರು ಹಾಗೂ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯ ಬೆಂಗಳೂರು ತಂಡಗಳ ನಡುವೆ ನಡೆದು ಸೆಂಟ್ ಜೋಸೆಫ್ಸ್ ಕಾಮರ್ಸ್ ತಂಡವು 6-1 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿ ಫೈನಲ್ ಪಂದ್ಯ ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸಿಐಟಿ ಪೊನ್ನಂಪೇಟೆ ತಂಡಗಳ ನಡುವೆ ನಡೆದು ಕಾವೇರಿ ಕಾಲೇಜು ಗೋಣಿಕೊಪ್ಪಲು 5 -2 ಗೋಲುಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.

ಅಂತಿಮ ಪೈನಲ್ ಪಂದ್ಯಾಟವು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜುಗಳ ನಡುವೆ ನಡೆದು 4- 2 ಗೋಲುಗಳ ಅಂತರದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಗೆದ್ದು ಪ್ರಥಮ ಸ್ಥಾನ ಪಡೆದು 15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು. ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು 10 ಸಾವಿರ ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಸಿಐಟಿ ಕಾಲೇಜು ಪೊನ್ನಂಪೇಟೆ 4-2 ಗೋಲಿನ ಅಂತದಲ್ಲಿ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾನಿಲಯವನ್ನು ಸೋಲಿಸಿ 3ನೇ ಸ್ಥಾನವನ್ನು ಪಡೆದು 5 ಸಾವಿರ ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು, ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ 4ನೇ ಸ್ಥಾನ ಪಡೆದು 2500 ನಗದು ಆಕರ್ಷಕ ಟ್ರೋಫಿ ಪಡೆದುಕೊಂಡಿತು. ಪಂದ್ಯಾಟದ ಶಿಸ್ತಿನ ತಂಡ ಬಹುಮಾನವನ್ನು ಸೆಂಟ್ ಜೋಸೆಫ್ಸ್ ಮೈಸೂರು ಪಡೆಯಿತು. ವೈಯುಕ್ತಿಕವಾಗಿ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನುಸಿ ಐ ಟಿ ಪೊನ್ನಂಪೇಟೆ ಕಾಲೇಜಿನ ಬೆವನ್ ಗಣಪತಿ, ಪಂದ್ಯಾಟದಲ್ಲಿ ಅತಿ ಹೆಚ್ಚು ಗೋಲ್ ದಾಖಲಿಸಿದ ಪ್ರಶಸ್ತಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲುವಿನ ರಿವಿನ್ , ಉತ್ತಮ ಆಟಗಾರ ಪ್ರಶಸ್ತಿಯನ್ನು ಮೈಸೂರಿನ ಸೇಪಿಯಂಟ್ ಕಾಲೇಜಿನ ಮುತ್ತಣ್ಣ , ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನ ಧನುಷ್ ಪಡೆದುಕೊಂಡರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ , ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ , ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ , ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮುಕಳೇರ ಕುಶಾಲಪ್ಪ ,ನಾಪೋಕ್ಲು ಭಗವತಿ ಹಾಕಿ ಕ್ಲಬ್ ಸದಸ್ಯರಾದ ಅಚ್ಚಂದಿರ ಮಂದಣ್ಣ, ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾಪಟ್ಟುಗಳು , ದೈಹಿಕ ನಿರ್ದೇಶಕರು, ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗ , ಆಡಳಿತಾತ್ಮಕ ಸಿಬ್ಬಂದಿಗಳು ಹಾಜರಿದ್ದರು.

coorg buzz
WhatsApp Image 2026-08-11 at 16.11.22