ಮೂರ್ನಾಡು ಸರ್ಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಭಾಷಣ ಸ್ಪರ್ಧೆ

Share this post :

ಮೂರ್ನಾಡು : ಕ್ಲೀನ್ ಕೂರ್ಗ್ ಇನಿಶಿಯೇಟಿವ್ ಸದಸ್ಯರು ಹಾಗೂ ಮೂರ್ನಾಡು ಮಾರುತಿ ಶಾಲೆ ವಿದ್ಯಾರ್ಥಿಗಳು ಮೂರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಭಾಷಣ ಸ್ಪರ್ಧೆ ಏರ್ಪಡಿಸಿದ್ದರು.
ಬಡವಂಡ ಅರುಣ್ ಅಪ್ಪಚ್ಚು ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಭಾಷಣ ಸ್ಪರ್ಧೆ, ಪರಿಸರ ಮತ್ತು ಸ್ವಚ್ಛತೆಯ ಬಗ್ಗೆ ತಿಳಿ ಹೇಳುವ ಚಿತ್ರವನ್ನು ಶಾಲೆಯ ಗೋಡೆ ಮೇಲೆ ಚಿತ್ರೀಕರಿಸಲಾಯಿತು. ಸ್ಪರ್ಧೆಯ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ, ಶಿಕ್ಷಕ ವೃಂದ ಈ ಸಂದರ್ಭದಲ್ಲಿದ್ದರು.

coorg buzz
WhatsApp Image 2026-08-11 at 16.11.22