05 ವರ್ಷದಿಂದ ಕಳುವಾಗಿದ್ದ 104 ಮೊಬೈಲ್‌ ಫೋನ್‌ಗಳು ಒಂದೇ ತಿಂಗಳಲ್ಲಿ ಪತ್ತೆ..! – ಕೊಡಗು ಎಸ್ಪಿ ಹೇಳಿದ್ದೇನು..?

Share this post :

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಕಳುವಾಗಿದ್ದ 104 ಮೊಬೈಲ್‌ ಫೋನ್‌ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
2001ರಿಂದ ಈಚೆಗೆ ಕಳುವಾಗಿದ್ದ ಮೊಬೈಲ್‌ ಫೋನ್‌ಗಳ ಪತ್ತೆಗೆ ಒಂದು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದರು. ಕಳುವಾದ ಫೋನ್‌ಗಳು ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು ರಾಜ್ಯದಲ್ಲಿಯೂ ಪತ್ತೆಯಾಗಿದೆ. ಅಂದಾಜು 11 ಲಕ್ಷ ರೂ. ಮೌಲ್ಯದ 104 ಮೊಬೈಲ್‌ ಫೋನ್‌ಗಳನ್ನು ಕಾರ್ಯಾಚರಣೆಗಿಳಿದಿದ್ದ ತಂಡ ವಶಪಡಿಸಿಕೊಂಡಿದೆ. ಇಂದು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿ ಎಸ್ಪಿ ಬಿಂದುಮಣಿ, ಪತ್ತೆಯಾದ ಫೋನ್‌ಗಳಲ್ಲಿ 2025ರಲ್ಲಿ ಕಳುವಾದ ಫೋನ್‌ಗಳೇ ಹೆಚ್ಚು. ಸಿಇಐಆರ್‌ ಪೋರ್ಟಲ್‌ ಹಾಗೂ ಪೊಲೀಸ್‌ ಸ್ಟೇಷನ್‌ನಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಲಾಗಿತ್ತು. ಅಪರಾಧ ಪತ್ತೆದಳದ ಡಿವೈಎಸ್ಪಿ ಲಕ್ಷ್ಮೀಕಾಂತ್‌ ತಳವಾರ್‌ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು ಎಂದು ಮಾಹಿತಿ ನೀಡಿದರು.
ಯಾರದ್ದಾದರೂ ಮೊಬೈಲ್‌ ಕಳುವಾದಲ್ಲಿ, ಸಿಇಐಆರ್‌ ಪೋರ್ಟಲ್‌ನಲ್ಲಿ ಮಾಹಿತಿ ಹಂಚಿಕೊಳ್ಳುವುದು. ಅಥವಾ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಿದರು. ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ತಂಡಕ್ಕೆ ಇದೇ ವೇಳೆ ಅಭಿನಂದನೆ ಸಲ್ಲಿಸಿದರು.

coorg buzz
coorg buzz