ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ

Share this post :

ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹ ಹಾಗೂ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಬಹುದು ಎಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ, ಸರ್ಕಾರಿ ನೌಕರರ ಸಂಘದ ರಾಷ್ಟ್ರೀಯ ಮಟ್ಟದ ಯೋಗಪಟು ಎ.ಬಿ.ಲಲಿತ ಅಭಿಪ್ರಾಯ ಪಟ್ಟರು.

ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೈಹಿಕ ಮತ್ತು ಮಾನಸಿಕ ಸದೃಢತೆಯ ಹಿನ್ನಲೆಯಲ್ಲಿ ಯೋಗವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ನರೇಂದ್ರ ಮೋದಿಯವರು ಪ್ರಧಾನಿಗಳಾದ ನಂತರ ಯೋಗಕ್ಕೆ ಅತಿ ಉನ್ನತ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ‌. ಯೋಗವೆಂಬುದು ನಮ್ಮ ಋಷಿ ಮುನಿಗಳಿಂದ ನಮಗೆ ಬಂದ ಒಂದು ಅತ್ಯಂತ ಉತ್ತಮವಾದ ಕೊಡುಗೆಯಾಗಿದ್ದು ಇಂದು ಪ್ರಪಂಚದಾದ್ಯಂತ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗ ಅಗ್ರಮಾನ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಯೋಗ ಕೇವಲ ಒಂದು ದಿನದ ಆಚರಣೆಗೆ ಸೀಮಿತ ವಾಗದೆ ಹೇಗೆ ನಾವು ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುತ್ತೇವೆಯೊ ಹಾಗೇ ಯೋಗವನ್ನು ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ನಿರಂತರವಾಗಿ ಮಾಡುದನ್ನು ರೂಢಿಸಿ ಸರಿಯಾದ ಬಂಗಿಯಲ್ಲಿ ಕ್ರಮಬದ್ಧವಾಗಿ ಯೋಗ ಮಾಡಿದಾಗ ಮಾತ್ರ ಯೋಗದಿಂದ ನಮ್ಮ ದೇಹಕ್ಕೆ ಫಲ ಲಭಿಸುತ್ತದೆ. ಪ್ರತಿನಿತ್ಯದ 24 ಗಂಟೆಗಳಲ್ಲಿ 1 ಗಂಟೆಯನ್ನು ನಮ್ಮ ದೇಹದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯೋಗಕ್ಕೆ ಮೀಸಲಿಡಬೇಕು. ಯೋಗವೆಂದರೆ ಕೇವಲ ದೈಹಿಕ ಕಸರತ್ತಲ್ಲ ಬದಲಿಗೆ ದೇಹ , ಮನಸ್ಸು, ಉಸಿರು ಮೂರರ ಸಂಗಮ . ಪ್ರತಿನಿತ್ಯ ಯೋಗ ಮಾಡುವುದರಿಂದ ಶಾರೀರಕ, ಮಾನಸಿಕ, ಬೌದ್ದಿಕ ಹಾಗೂ ಆಧ್ಯಾತ್ಮಿಕವಾಗಿ ನಮ್ಮ ವ್ಯಕ್ತಿತ್ವವನ್ನು ವಿಕಸನವಾಗುತ್ತದೆ. ಯೋಗದ ಮೂಲವನ್ನು ಅರಿತು ವಿದ್ಯಾರ್ಥಿಗಳು ಯೋಗವನ್ನು ಮಾಡುದರಿಂದ ಉತ್ತಮ ರೀತಿಯ ಏಕಾಗ್ರತೆ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಒತ್ತಡಕ್ಕೆ ಒಳಗಾಗುತಿದ್ದು ಒತ್ತಡದಿಂದ ಹೊರ ಬರಲು ದಿನಕ್ಕೆ 10 ನಿಮಿಷ ಪ್ರಾಣಾಯಾಮ ಮಾಡುದರಿಂದ ಮನಶಾಂತಿ ಲಭಿಸುತ್ತದೆ. ಆದರಿಂದ ಪ್ರತಿಯೊಬ್ಬರು ದಿನದ ಒಂದಷ್ಟು ಸಮಯ ಯೋಗ, ಧ್ಯಾನಕ್ಕೆ ಮೀಸಲಿಡುದರಿಂದ ಮುಂದೆ ನಮಗೆ ಬರಬಹುದಾದ ರೋಗಗಳನ್ನು ಬಾರದಂತೆ ತಡೆಯುದ ರೊಂದಿಗೆ ಆರೋಗ್ಯಯುತ ದೈಹಿಕ, ಮಾನಸಿಕತೆ ತಮ್ಮದಾಗಿಸಿಕೊಳ್ಳಬಹುದುದೆಂದರು.

 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ . ವೀಣಾ ಯೋಗದ ಮಹತ್ವವೇನು ಎಂಬುದನ್ನು ಇಂದು ಜಗತ್ತೆ ಅರಿತಿದೆ. ಯೋಗ ಕೇವಲ ದೈಹಿಕವಾಗಿ ಮಾತ್ರವಲ್ಲ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುದರಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸ್ನಾಯುಗಳನ್ನು ಬಲಪಡಿಸುದು, ಉಸಿರಾಟವನ್ನು ಉತ್ತಮ ಪಡಿಸುದು, ಮಾನಸಿಕ ಒತ್ತಡ ನಿವಾರಣೆ, ದೇಹವನ್ನು ಹಗುರಗೊಳಿಸುದರೊಂದಿಗೆ ನಮ್ಮನ್ನು ಪುನಶ್ಚೇತನಗೊಳಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ಬದುಕಿನ ಜಂಜಾಟದ ನಡುವೆ ದಿನಕ್ಕೆ ಒಂದಷ್ಟು ಯೋಗ , ಪ್ರಾಣಯಾಮ , ಧ್ಯಾನ ಮಾಡುದರಿಂದ ನಮ್ಮನ್ನು ನಾವು ಸಧೃಡರನ್ನಾಗಿಸುದರೊಂದಿಗೆ. ರೋಗಗಳಿಂದ ಮುಕ್ತರಾಗ ಬಹುದು. ವಿದ್ಯಾರ್ಥಿ ಗಳಂತು ಪ್ರತಿನಿತ್ಯ ಯೋಗ , ಧ್ಯಾನ ಮಾಡುದರಿಂದ ಉತ್ತಮ ಮಾನಸಿಕ ಆರೋಗ್ಯ , ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳ ಬಹುದು ಎಂದರು.

ವೇದಿಯ ಕಾರ್ಯಕ್ರಮ ನಂತರ ವಿರಾಜಪೇಟೆ ಕಾವೇರಿ ಯೋಗ ಕೇಂದ್ರದ ತರಬೇತುದಾರರಾದ ಸೀತಾರಾಂ ರೈ ರವರ ಮಾರ್ಗದರ್ಶನದಲ್ಲಿ ಯೋಗ ಪಟುಗಳಾದ ಎ.ಬಿ. ಲಲಿತಾ, ರತಿ ಕಲಾ,ರವಿ ಕಲಾ, ಶೀಲಾ, ಲಿಲ್ಲಿ , ಸೌಜಿತ್ , ರಾಗಿಣಿ., ಶಾಂತಲ ಚಂದ್ರ ರವರು ವೇದಿಯ ಮೇಲೆ ವಿವಿಧ ಯೋಗ ಆಸನ , ಧ್ಯಾನ , ಪ್ರಾಣಾಯಾಮ , ಸೂರ್ಯ ನಮಸ್ಕಾರವನ್ನು ಪ್ರದರ್ಶಿಸಿ ಕಾಲೇಜು ವಿದ್ಯಾರ್ಥಿಗಳಿಂದಲು ಕ್ರಮಬದ್ದವಾಗಿ ಮಾಡಿಸಿದರು. ಈ ಸಂದರ್ಭದಲ್ಲಿ ಎನ್.ಸಿ.ಸಿ ಅಧಿಕಾರಿ. ಲೆ.ಬಿ.ಬಿ. ಬೋಜಮ್ಮ , ಎನ್.ಎಸ್.ಎಸ್ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್ , ದೈಹಿಕ ನಿರ್ದೇಶಕ ತಮ್ಮಯ್ಯ ಇದ್ದರು.

coorg buzz
coorg buzz