ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲ : ಜಿಲ್ಲಾ ಬಿಜೆಪಿ

ಮಡಿಕೇರಿ : ಮೂರು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ ಎಂದು ಬಹುತೇಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಇದರಿಂದ ವಿಚಲಿತವಾದ ಕಾಂಗ್ರೆಸ್ ಚುನಾವಣೆ ಗೆಲ್ಲಲು ಬೇರೆ ಯಾವ ಮಾರ್ಗವಿಲ್ಲದೆ ಮತದಾರರಿಗೆ ಬಿಟ್ಟಿ ಭಾಗ್ಯಗಳ ಆಮಿಷ ಒಡ್ಡಿ ಚುನಾವಣೆ ಗೆದ್ದಿತ್ತು. ಆ ಸಂದರ್ಭದಲ್ಲಿ […]

ವಿವಿಧ ಅಂಗನವಾಡಿಗಳಲ್ಲಿ ಅರಿವು ಕಾರ್ಯಕ್ರಮ – ನಿವೃತ್ತರಾದ ಕಾರ್ಯಕರ್ತೆ, ಸಹಾಯಕಿಯರಿಗೆ ಬೀಳ್ಕೊಡುಗೆ

ಮಡಿಕೇರಿ : ಕೆ. ನೀಡುಗಣೆ ಗ್ರಾಮ ಪಂಚಾಯಿತಿಯ ಭಗವತಿ ನಗರ, ಭಾಗಮಂಡಲ ಗ್ರಾಮ ಪಂಚಾಯಿತಿಯ ತಾವೂರು ಗ್ರಾಮದಲ್ಲಿ ಬೇಟಿ ಬಚಾವೋ ಅರಿವು ಕಾರ್ಯಕ್ರಮ ನಡೆಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅಭಿಯಾನದ ಕುರಿತಾಗಿ ಮಾಹಿತಿ ನೀಡಿದರು. ಇಲಾಖೆ ವತಿಯಿಂದ ಜಿಲ್ಲಾಧ್ಯಂತ ಗ್ರಾಮ ಪಂಚಾಯಿತಿವಾರು ಬೇಟಿ ಬಚಾವೋ ಬೇಟಿ ಪಡವೋ ಕಾರ್ಯಕ್ರಮ, ಇಲಾಖೆಯ ಯೋಜನೆಗಳ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಲು ಕರೆ ನೀಡಿದರು. 36 ವರ್ಷ […]