ಶ್ರೇಷ್ಠ ವ್ಯಕ್ತಿಗಳು, ಗ್ರಂಥಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು : ಬಿ.ಜಿ. ಅನಂತಶಯನ

ವೀರಾಜಪೇಟೆ : ಪ್ರತಿಯೊಬ್ಬ ಮನುಷ್ಯನಲ್ಲೂ ಅಸಾಧಾರಣವಾದ ಶಕ್ತಿ ಇದ್ದು ಅದನ್ನು ಗುರುತಿಸಿಕೊಂಡು ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ನಾವು ಕೂಡ ಶ್ರೇಷ್ಠ ವ್ಯಕ್ತಿಗಳಂತೆ ಬದುಕಬಹುದು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದಿ .ಕೂತಂಡ ಪಿ. ಉತ್ತಪ್ಪ ಸ್ಮರಣಾರ್ಥ ʼಆಧ್ಯಾತ್ಮಿಕ ನಾಯಕನಾಗಿ ಸ್ವಾಮಿ ವಿವೇಕಾನಂದʼ ಎಂಬ ವಿಷಯದ ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಮಂಗಳವಾರ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, […]
ನಾಪೋಕ್ಲುವಿನಲ್ಲಿ ಹಿಂದು ಜನಜಾಗೃತಿ ಸಮಾವೇಶ ಏಪ್ರಿಲ್ 01ಕ್ಕೆ

ಮಡಿಕೇರಿ : ನಾಪೋಕ್ಲು ಹಿಂದು ಜನಜಾಗೃತಿ ಸಮಿತಿ ವತಿಯಿಂದ ʼಹಿಂದು ಜನಜಾಗೃತಿ ಸಭೆʼ ಏಪ್ರಿಲ್ 01ರಂದು ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಹಳೆ ತಾಲೂಕು ಜಂಕ್ಷನ್‌ನಿಂದ ಬೃಹತ್ ಜಾಥಾ ಹೊರಡಲಿದೆ. ಬಳಿಕ ಸಭಾ ಕಾರ್ಯಕ್ರಮ ಮಾರುಕಟ್ಟೆ ಆವರಣದಲ್ಲಿ ನಡೆಯಲಿದೆ. ತಿಂಗಳ ಹಿಂದೆ ಹಿಂದು ಸಂಗಮ ಕಾರ್ಯಕ್ರಮಕ್ಕೂ ಮುನ್ನ ದಿನ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಗಡಿಪಾರು ಮಾಡುವುದು. ಹಿಂದು ವಿರೋಧಿ ಸಮಾಜಘಾತುಕರ ವಿರುದ್ಧ ಜಾಗೃತಿ ಮೂಡಿಸುವುದು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಆರ್ಥಿಕ […]
ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಆಯ್ಕೆ

ಮಡಿಕೇರಿ : ಮಡಿಕೇರಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕೋಚನ ಚೇತನ್ ಅವಿರೋಧ ಆಯ್ಕೆಯಾಗಿದ್ದಾರೆ. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಕೋಚನ ಚೇತನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಚೇತನ್ ನಗರದ ದೇಚೂರು ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶ: ಕೊಡಗಿನಲ್ಲಿ ಉದ್ಯೋಗ ಮೇಳ

ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಹಾಗೂ ಗುಣಮಟ್ಟದ ಶಿಕ್ಷಕರನ್ನು ಹುಡುಕುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ, ಮಾರ್ಚ್, 25 ರಿಂದ 27 ರವರೆಗೆ ನಗರದ ಕೊಡವ ಸಮಾಜದಲ್ಲಿ ಮೂರು ದಿನಗಳ ಸಮಗ್ರ ಶೈಕ್ಷಣಿಕ ಕಾರ್ಯಕ್ರಮ ಎಜು ಕನೆಕ್ಟ್ ಮತ್ತು ಜಾಬ್ ಮೇಳ 2026 ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವನ್ನು ರೀಡ್‍ಟೆಕ್ ಸಂಸ್ಥೆಯ ವತಿಯಿಂದ ಕೊಡಗು ವಿಶ್ವವಿದ್ಯಾಲಯ ಮತ್ತು ನ್ಯಾಚುರಲ್ ಸೋರ್ಸ್ ಡೆವಲಪ್ಮೆಂಟ್ ಸೆಂಟರ್ ಅವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಈ ಮೇಳದಲ್ಲಿ ಪದವೀದರರು […]