ಕೊಡಗಿನ ಯುವ ನಾಯಕ ಪೊನ್ನಣ್ಣಗೆ ಸಚಿವ ಸ್ಥಾನ..? ನಿಯೋಗದ ಎದುರು ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸುಳಿವು..!

Share this post :

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ನಮ್ಮ ಆಸ್ತಿ, ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ನಿಯೋಗವನ್ನು ಭೇಟಿ ಮಾಡಿದ ಸಿಎಂ, ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಂದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. “ಪೊನ್ನಣ್ಣ ದಕ್ಷ ಹಾಗೂ ಪ್ರಾಮಾಣಿಕ ಯುವ ನಾಯಕ. ಅವರ ಮೇಲೆ ಭರವಸೆಯಿಟ್ಟು ಟಿಕೆಟ್ ನೀಡಿದ್ದೆವು. ವಾರದಲ್ಲಿ ಎರಡು ದಿನ ಕೊಡಗಿನಲ್ಲಿರಲು ಸೂಚಿಸಿದ್ದರೂ, ಅವರು ಗರಿಷ್ಠ ಸಮಯವನ್ನು ಕ್ಷೇತ್ರದ ಜನರಿಗಾಗಿ ಮೀಸಲಿಟ್ಟು ನಮ್ಮ ನಂಬಿಕೆ ಉಳಿಸಿಕೊಂಡಿದ್ದಾರೆ” ಎಂದು ಶ್ಲಾಘಿಸಿದರು. ಅಲ್ಲದೆ, ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ನಮಗೂ ಒಲವಿದ್ದು, ಅವರು ಸಚಿವರಾದರೆ ನಿಮ್ಮಷ್ಟೇ ನನಗೂ ಸಂತೋಷವಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಿಯೋಗದ ಪ್ರಮುಖರಾದ ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಸೇರಿದಂತೆ ಕೊಡವ ಸಂಘಟನೆಯ ಹಲವು ಮುಖಂಡರು ಉಪಸ್ಥಿತರಿದ್ದರು

coorg buzz
coorg buzz