ನವೆಂಬರ್‌ 12ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ…!

Kodagu power cut

ಮಡಿಕೇರಿ : ೬೬/೧೧ ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‌ಗಳಲ್ಲಿ ನವೆಂಬರ್, ೧೨ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, ಬೋಯಿಕೇರಿ […]

ಎನ್‌ಸಿಸಿಯಲ್ಲಿ C ಪ್ರಮಾಣ ಪತ್ರ ಪಡೆದಿರುವ ಯುವತಿಯರಿಗೆ ʼಅಕ್ಕ ಪಡೆʼ ಸೇರಲು ಅವಕಾಶ..!

ಮಡಿಕೇರಿ : ಜಿಲ್ಲೆಯಲ್ಲಿ ೨೦೨೫-೨೬ ನೇ ಸಾಲಿನ “ಅಕ್ಕ ಪಡೆ” ಯೋಜನೆ ಅನುಷ್ಠಾನಗೊಳಿಸಲು ಎನ್‌ಸಿಸಿಯಲ್ಲಿ ಪ್ರಮಾಣ ಪತ್ರ ಪಡೆದಿರುವ ಮಹಿಳಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಯಮಗಳು ಹಾಗೂ ಆಯ್ಕೆಯ ಮಾನದಂಡಗಳಿಗೆ ಒಳಪಟ್ಟು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಜಿಲ್ಲೆಯಲ್ಲಿ ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಪ್ರಾಥಮಿಕ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ “ಅಕ್ಕ ಪಡೆ” ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಎನ್‌ಸಿಸಿಯಲ್ಲಿ ಸಿ ಪ್ರಮಾಣಪತ್ರ ಪಡೆದಿರುವ ದೈಹಿಕ ಸದೃಢತೆ ಹೊಂದಿರುವ, ಉತ್ತಮ […]

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ

ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ‌ ‘ನನ್ನ ಕಲ್ಪನೆಯ ಸ್ವಚ್ಚ ಕೊಡಗು’ ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಐದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಪ್ರಬಂಧ ಪ್ರತಿಯನ್ನು ಕೈ ಬರಹ ಅಥವಾ ಡಿಟಿಪಿ ಮಾಡಿ ಕಳುಹಿಸಬೇಕು. ಕಡ್ಡಾಯವಾಗಿ ಕನ್ನಡದಲ್ಲಿಯೇ ಬರೆಯಬೇಕು. ಪ್ರಬಂಧವು 200 ವಾಕ್ಯ ಮೀರಬಾರದು. ಯಾವುದೇ ರೀತಿಯ ಕೃತಕ ಬುದ್ಧಿ ಮತ್ತೆಯನ್ನು(ಎಐ) ಉಪಯೋಗಿಸುವಂತಿಲ್ಲ. ಪ್ರಬಂಧವನ್ನು ಚಾಮೆರ […]