ಜನಮೆಚ್ಚುಗೆಯ ಶಿಕ್ಷಕಿ ಐರಿನ್ ಡಿಸೋಜಾ ವಯೋನಿವೃತ್ತಿ

ವಿರಾಜಪೇಟೆ : ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಐರಿನ್ ಡಿಸೋಜಾ ವಯೋನಿವೃತ್ತಿ ಹೊಂದಿದ್ದಾರೆ. ಒಟ್ಟು 27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಐರಿನ್‌ರವರು 1999ರಲ್ಲಿ ಹಚ್ಚಿನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. 2012ರಲ್ಲಿ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು 13 ವರ್ಷ ಕಾಲ ಕಾರ್ಯನಿರ್ವಹಿಸಿದ್ದಾರೆ. ಸೇವಾ ಅವಧಿಯಲ್ಲಿ ಕರ್ತವ್ಯ ನಿಷ್ಠೆ, ಸರಳತೆ ಮೂಲಕ ವಿದ್ಯಾರ್ಥಿಗಳ ಹಾಗೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಐರಿನ್ ಡಿಸೋಜಾ […]
ಹುಲಿ ದಾಳಿಗೆ ಜಾನುವಾರು ಬಲಿ..? – ಕತ್ತಲೆಕಾಡು ಗ್ರಾಮದಲ್ಲಿ ವ್ಯಾಘ್ರ ಭೀತಿ..!

ಮಡಿಕೇರಿ : ತಾಲೂಕಿನ ಕತ್ತಲೆಕಾಡು ಗ್ರಾಮದಲ್ಲಿ ವನ್ಯಪ್ರಾಣಿ ದಾಳಿಗೆ ಜಾನುವಾರು ಬಲಿಯಾಗಿದ್ದು, ಹುಲಿ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಆನಂದ ಎಂಬವರ ಎತ್ತು ನಾಲ್ಕು ದಿನದಿಂದ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಬ್ರೂಕ್ ವ್ಯೂ ಎಸ್ಟೇಟ್‌ನಲ್ಲಿ ಭಾನುವಾರ ಸಂಜೆ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀತಯರಾದ ನಾಸರ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಪಕ್ಕದಲ್ಲೇ ಕಾಡು ಹಂದಿಯ […]
ವೀರಾಜಪೇಟೆ ಪೊಮ್ಮಕ್ಕಡ ಒಕ್ಕೂಟದ ವಾರ್ಷಿಕ ಮಹಾಸಭೆ

ವಿರಾಜಪೇಟೆ : ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ 2025-26 ನೇ ಸಾಲಿನ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ, ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ಆಕೆ ಕೇವಲ ಮನೆಯ ನಿರ್ವಹಣೆ ಮಾಡುವಲ್ಲಿ ಮಾತ್ರ ಸೀಮಿತವಾಗದೆ ಸಮಾಜದಲ್ಲಿಯೂ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾಳೆ. ಯಾವುದೇ ಕೆಲಸವನ್ನು ನಾವು ಮಾಡುವ ಸಂದರ್ಭದಲ್ಲಿ ಶ್ರದ್ಧೆಯಿಂದ ಪ್ರಾಮಾಣಿಕತೆಯಿಂದ ಮಾಡಬೇಕು. ಮನಸ್ಸಿಟ್ಟು ಮಾಡುವ […]