ಅನ್ಯ ಭಾಷೆಯ ಮಕ್ಕಳಲ್ಲಿ ಬೋಧಕರು ನೈಜ ಭಾಷೆಯ ಮನೋಭಾವನೆ ಬರುವಂತೆ ನೋಡಿಕೊಂಡು ಬೋಧಿಸಬೇಕು – ಅಶೋಕ ಸಂಗಪ್ಪ ಆಲೂರ

ವಿರಾಜಪೇಟೆ : ಅನ್ಯ ಭಾಷೆ ಮಾತನಾಡುವ ಮಕ್ಕಳಲ್ಲಿ ಬೋಧಕರು ನೈಜ ಭಾಷೆಯ ಮನೋಭಾವನೆ ಬರುವಂತೆ ನೋಡಿಕೊಂಡು ಬೋಧಿಸಬೇಕಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಅಲೂರ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗಡಿ ಪ್ರದೇಶಗಳ ಪಠ್ಯ ಕ್ರಮದಲ್ಲಿ ಕನ್ನಡ ಭಾಷಾ ನೀತಿ ಹಾಗೂ ಬಹುಭಾಷ ವಾಸ್ತವಿಕತೆಗಳ ಮರುಚಿಂತನೆ ಎನ್ನುವ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರು […]

ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಎ.ಎಂ. ರಶೀದ್‌ ಅವಿರೋಧ ಆಯ್ಕೆ..!

ಪೊನ್ನಂಪೇಟೆ : ಕಾಟ್ರಕೊಲ್ಲಿಯಲ್ಲಿ ನೆಲೆಸಿರುವ ಕೊಡವ ಮುಸ್ಲಿಮರ ಮನೆತನಗಳಲ್ಲಿ ಒಂದಾಗಿರುವ ಆಲೀರ ಕುಟುಂಬಸ್ಥರ ಸಾಮಾಜಿಕ ಶ್ರೇಯೋಭಿವೃದ್ಧಿಗಾಗಿ ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಆಲೀರ ಐನ್ ಮನೆಯಲ್ಲಿ ಇತ್ತೀಚಿಗೆ ನಡೆದ ಕುಟುಂಬಸ್ಥರ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಕುಟುಂಬದ ಹಿರಿಯರಾದ, ನಿವೃತ್ತ ಕೃಷಿ ಅಧಿಕಾರಿ ಆಲೀರ ಅಬು ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕುಟುಂಬಸ್ಥರ ಸಭೆಯಲ್ಲಿ ಕಾಟ್ರಕೊಲ್ಲಿ ಆಲೀರ ಕುಟುಂಬ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಪೊನ್ನಂಪೇಟೆ ಪಂಚಾಯಿತಿ ಉಪಾಧ್ಯಕ್ಷರಾಗಿರುವ […]

ಅಯ್ಯಪ್ಪ ಭದ್ರಕಾಳಿ ದೇವಾಲಯದಲ್ಲಿ ಬೋಡ್‌ ನಮ್ಮೆ – ಪ್ರಾಣಿ ಹಿಂಸೆ ಮಾಡಿದ್ರೆ ಕ್ರಮ : ಜಿಲ್ಲಾ ಪೊಲೀಸ್‌ ಎಚ್ಚರಿಕೆ..!

ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ದೇವರಪುರ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಆಚರಿಸುವ ಬೇಡು ಹಬ್ಬದ ಸಂಬಂಧ ಜಿಲ್ಲಾ ಪೊಲೀಸ್‌ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಭಕ್ತರು ಉತ್ಸವ ಸಂದರ್ಭ ಅದನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯ ವಿವಿಧ ಸ್ಥಳಗಳಿಂದ ಹಾಗೂ ನೆರೆಯ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ದೇವಸ್ಥಾನದಲ್ಲಿ ಹರಕೆ ತೀರಿಸುವ ಆಚರಣೆಯಿದ್ದು, ಕೆಲವು ಭಕ್ತಾದಿಗಳು/ವೇಷಾಧಾರಿಗಳು ಮದ್ಯ ಸೇವನೆ ಮಾಡಿ ಗೋಣಿಕೊಪ್ಪಲು ಪಟ್ಟಣ ಮತ್ತು ತಿತಿಮತಿ ರಸ್ತೆಯಲ್ಲಿನ ಅಂಗಡಿ ಮಳಿಗೆಗಳಿಗೆ ತೆರಳಿ ಒತ್ತಾಯವಾಗಿ ಹಣವನ್ನು ನೀಡುವಂತೆ ಪೀಡಿಸುವುದು, ವಿವಿಧ […]

500 ವರ್ಷಗಳಿಂದ ಪಾಳುಬಿದ್ದಿರುವ ಶ್ರೀ ಮಲೆಯಚ್ಚ ಅಯ್ಯಪ್ಪ ದೇವಸ್ಥಾನ ಜೀರ್ಣೋದ್ಧಾರಕ್ಕೆ ಚಾಲನೆ : ಅಂದಾಜು 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ

ಪೊನ್ನಂಪೇಟೆ : ದಕ್ಷಿಣ ಕೊಡಗಿನ ಕುತ್ತ್‌ನಾಡಿನ ಕುಟ್ಟಂದಿ ಗ್ರಾಮದ ಕೊಡಕೇರಿಯಲ್ಲಿ ಮಲೆಯಚ್ಚ (ಮಚ್ಚಂಗಾಡ್ ದೇವ) ಎಂದೇ ಖ್ಯಾತಿಯಾಗಿರುವ ಸುಮಾರು 700 ವರ್ಷಗಳ ಪುರಾತನ ಶ್ರೀ ಅಯ್ಯಪ್ಪ ದೇವಸ್ಥಾನ ಕಾಲದ ಹೊಡೆತಕ್ಕೆ ಸಿಲುಕಿ 500 ವರ್ಷಗಳಿಂದ ಪೂಜೆ-ಪುನಸ್ಕಾರಗಳಿಲ್ಲದೆ ಪಾಳು ಬಿದ್ದಿದೆ. ಒಂದು ಕಾಲದಲ್ಲಿ ಮಂಗಳಘೋಷದಿಂದ ಕಂಗೊಳಿಸುತ್ತಿದ್ದ ಈ ಪುಣ್ಯಕ್ಷೇತ್ರ ಇಂದು ನಿಶ್ಯಬ್ದವಾಗಿದೆ. ಈ ದೇವಸ್ಥಾನ ಕೇವಲ ಕಲ್ಲು-ಮಣ್ಣಿನ ರಚನೆಯಲ್ಲ. ಪೂರ್ವಜರ ನಂಬಿಕೆ, ಶ್ರದ್ಧೆ ಹಾಗೂ ಭಾವೈಕ್ಯದ ಪ್ರತೀಕವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಕೇರಿ-ಕುಟ್ಟಂದಿ ಗ್ರಾಮ ಸಮಿತಿ ಮತ್ತು ಧಾರ್ಮಿಕ ಮುಖಂಡರ […]