ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾಗಿ ಡಾ.ಕೆ.ಜಿ.ವೀಣಾ ಅಧಿಕಾರ ಸ್ವೀಕಾರ

ವಿರಾಜಪೇಟೆ : ಕಾವೇರಿ ಕಾಲೇಜಿನ ಪದವಿ ವಿಭಾಗದ ನೂತನ ಪ್ರಾಂಶುಪಾಲೆಯಾಗಿ ಡಾ. ಕುಪ್ಪಂಡ ವೀಣಾ ಅಧಿಕಾರ ವಹಿಸಿಕೊಂಡರು. ಬೆನೆಡಿಕ್ಟ್ ಆರ್ ಸಲ್ಡಾನರ ನಿವೃತ್ತಿಯಿಂದ ತೆರವಾಗಿದ್ದ ಹುದ್ದೆಗೆ ಆಡಳಿತ ಮಂಡಳಿ ಆದೇಶದ ಮೇರೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ವೀಣಾರವರು ಈ ಹಿಂದೆ ಆಂಗ್ಲ ವಿಭಾಗದ ಉಪನ್ಯಾಸಕರಾಗಿ, ಮುಖ್ಯಸ್ಥರಾಗಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಓ.ಎಸ್ ಹಾಗೂ ಕೊಡಗು ವಿಶ್ವವಿದ್ಯಾಲಯದ ಬಿ.ಓ.ಇ ಆಗಿ ಸೇವೆ ಸಲ್ಲಿಸಿರುತ್ತಾರೆ. ಇದರೊಂದಿಗೆ ಕಾವೇರಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾಗಿ ಐದು ವರ್ಷ ಸೇವೆ […]